
ಬೆಂಗಳೂರು: ರೇಣುಕಾಸ್ವಾಮಿ ಕೇಸ್‌ನಲ್ಲಿ ಜಾಮೀನು ಪಡೆದು ರಿಲೀಸ್ ಆಗಿರುವ ನಟ ದರ್ಶನ್‌ಗೆ ಕೊನೆಗೂ ಕೋರ್ಟ್ ಗುಡ್‌ನ್ಯೂಸ್ ಕೊಟ್ಟಿದೆ. ದರ್ಶನ್ ಅಭಿನಯದ ಬಹು ನಿರೀಕ್ಷಿತ ಸಿನಿಮಾ ಡೆವಿಲ್ ಶೂಟಿಂಗ್‌ಗೆ ವಿದೇಶಕ್ಕೆ ತೆರಳಲು ಗ್ರೀನ್‌ಸಿಗ್ನಲ್ ಸಿಕ್ಕಿದೆ.
ವಾದ ಪ್ರತಿವಾದ ಆಲಿಸಿ ಇಂದಿಗೆ ಆದೇಶ ಕೋರ್ಟ್ ಕಾಯ್ದಿರಿಸಿತ್ತು. ಇದೀಗ ಕೊನೆಗೂ ಗುಡ್ ನ್ಯೂಸ್ ಕೊಟ್ಟಿದೆ. ದರ್ಶನ್ ಚಿತ್ರನಟ ಆಗಿದ್ದು, ನಟನೆ ಅಷ್ಟೇ ಅವರ ದುಡಿಮೆ.ಹೀಗಾಗಿ ಚಿತ್ರೀಕರಣಕ್ಕೆ ವಿದೇಶಕ್ಕೆ ತೆರಳಲು ಅವಕಾಶ ನೀಡುವಂತೆ ದರ್ಶನ್ ಪರ ವಕೀಲರ ಮನವಿ ಮಾಡಿದ್ದರು. ಈ ಬಗ್ಗೆ ಕೋರ್ಟ್ ಸಮ್ಮತಿ ಸೂಚಿಸಿದೆ.
ಇದೀಗ ನಟನಿಗೆ ವಿದೇಶಕ್ಕೆ ಹೋಗಲು 25 ದಿನಗಳ ಕಾಲ ಅನುಮತಿ ನೀಡಿದೆ ಕೋರ್ಟ್. ಜೂನ್ 1ರಿಂದ ಜೂನ್ 25ರವರೆಗೆ ವಿದೇಶಕ್ಕೆ ಹೋಗಲು ಅವಕಾಶ ನೀಡಿದೆ. ಸಿನಿಮಾ ಶೂಟಿಂಗ್ ಹಿನ್ನೆಲೆ ದುಬೈ ಹಾಗೂ ಯೂರೋಪ್ ಗೆ ಹೋಗಲು ಅನುಮತಿ ಕೋರಿ ಅರ್ಜಿ ಸಲ್ಲಿಕೆ ಮಾಡಿದ್ರು ದರ್ಶನ್. ನ್ಯಾ. ಐ.ಪಿ ನಾಯ್ಕ್ ಅವರಿಂದ ಕೊನಗೂ ಆದೇಶ ಬಂದಿದೆ.