
ಮಂಗಳೂರು: ಭಾರಿ ಮಳೆ, ಕಡಲ ಅಬ್ಬರಕ್ಕೆ ಮೀನುಗಾರಿಕೆಗೆ ತೆರಳಿದ್ದ ನಾಡದೋಣಿಯೊಂದು ಪಲ್ಟಿಯಾಗಿದ್ದು, ಇಬ್ಬರು ಮೀನುಗಾರರು ಸಮುದ್ರಪಾಲಾಗಿರುವ ಘಟನೆ ನಡೆದಿದೆ.
ಮಂಗಳೂರಿನ ತೋಟಬೆಂಗ್ರೆ ಅಳಿವೆ ಬಾಗಿಲುವಿನಲ್ಲಿ ಈ ದುರಂತ ಸಂಭವಿಸಿದೆ. ಯಶವಂತ ಹಾಗೂ ಕಮಲಾಕ್ಷ ನೀರುಪಾಲಾಗಿರುವ ಮೀನುಗಾರರು. ದಕ್ಷಿಣ ಕನ್ನಡ ಜಿಲ್ಲಾಡಳಿತ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಿದ್ದಾಗ್ಯೂ ಸಹ ಮೀನುಗಾರಿಕೆಗೆಂದು ಇಬ್ಬರು ಹೋಗಿದ್ದರು. ಈ ವೇಳೆ ಸಮುದ್ರದ ಅಲೆಗಳ ಹೊಡೆತಕ್ಕೆ ಸಿಲುಕಿದ ನಾಡದೋಣಿ ಪಲ್ಟಿಯಾಗಿದೆ.