Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > Uncategorized > Rashmika Mandanna ಮದುವೆಗೆ ಸಜ್ಜಾದ್ರಾ ರಶ್ಮಿಕಾ ಮಂದಣ್ಣ?
Uncategorized

Rashmika Mandanna ಮದುವೆಗೆ ಸಜ್ಜಾದ್ರಾ ರಶ್ಮಿಕಾ ಮಂದಣ್ಣ?

Share
2 Min Read
SHARE

ಹೈದರಾಬಾದ್‌: ಟಾಲಿವುಡ್‌ ಸ್ಟಾರ್‌ ವಿಜಯ್‌ ದೇವರಕೊಂಡ (Vijay Deverakonda) ಮತ್ತು ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ (Rashmika Mandanna) ಹಲವು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದಾರೆ ಎನ್ನುವ ವದಂತಿ ದಟ್ಟವಾಗಿ ಹಬ್ಬಿದೆ. ಆದರೆ ಇದುವರೆಗೆ ಇವರಿಬ್ಬರು ಇದನ್ನು ಬಹಿರಂಗವಾಗಿ ಒಪ್ಪಿಕೊಂಡಿಲ್ಲ ಅಥವಾ ಸ್ಪಷ್ಟವಾಗಿ ನಿರಾಕರಿಸಿಲ್ಲ. ಅದಾಗ್ಯೂ ವಿವಿಧ ಕಡೆಗಳಿಗೆ ಗುಟ್ಟಾಗಿ ಪ್ರವಾಸ ಮಾಡಿ ಅದರ ಫೋಟೊ ಸೋಶಿಯಲ್‌ ಮೀಡಿಯಾದಲ್ಲಿ ಪ್ರತ್ಯೇಕವಾಗಿ ಶೇರ್‌ ಮಾಡಿ ಕೊನೆಗೆ ಫ್ಯಾನ್ಸ್‌ ಕೈಯಲ್ಲಿ ಸಿಕ್ಕಿ ಬಿದ್ದಿದ್ದೂ ಇದೆ. ಇದರ ಜತೆಗೆ ರಶ್ಮಿಕಾ ದೇವರಕೊಂಡ ಕುಟುಂಬದವರ ಜತೆ ಆತ್ಮೀಯ ಸಂಬಂಧ ಹೊಂದಿದ್ದಾರೆ. ಹೀಗಾಗಿ ಸದ್ಯದಲ್ಲೇ ಈ ಜೋಡಿ ಹಸೆಮಣೆಗೇರಲಿದೆ ಎನ್ನುವ ಮಾತು ಜೋರಾಗಿ ಕೇಳಿ ಬಂದಿದೆ. ಅದರ ಜತೆಗೆ ಇದೀಗ ರಶ್ಮಿಕಾ ಹಂಚಿಕೊಂಡ ಫೋಟೊ ಈ ವದಂತಿಗೆ ಪುಷ್ಟಿ ನೀಡುವಂತಿದೆ. ಅವರು ಪೋಸ್ಟ್‌ಗೆ ನೀಡಿದ ಕ್ಯಾಪ್ಶನ್‌ ಕೂಡ ಗಮನ ಸೆಳೆದಿದೆ.

ರಶ್ಮಿಕಾ ಹಳದಿ ಮತ್ತು ಕೇಸರಿ ಮಿಶ್ರಿತ ಬನಾರಸಿ ರೇಷ್ಮೆ ಸೀರೆ ಧರಿಸಿ ಪೋಸ್‌ ನೀಡಿದ್ದಾರೆ. ಇದು ವಿಜಯ್‌ ದೇವರಕೊಂಡ ಅವರ ತಾಯಿ ಉಡುಗೊರೆ ನೀಡಿದ ಸೀರೆ ಎಂದು ಫ್ಯಾನ್ಸ್‌ ಅಭಿಪ್ರಾಯ ಪಟ್ಟಿದ್ದಾರೆ. ಜತೆಗೆ ರಶ್ಮಿಕಾ ಪೋಸ್‌ ನೀಡಿದ್ದು ವಿಜಯ್‌ ದೇವರಕೊಂಡ ಅವರ ಮನೆಯಲ್ಲಿ ಎಂದೂ ಊಹಿಸಿದ್ದಾರೆ. ಈ ಮೂಲಕ ಇವರು ಸದ್ಯದಲ್ಲೇ ತಮ್ಮ ಪ್ರೀತಿಗೆ ಅಧಿಕೃತ ಮುದ್ರೆ ಒತ್ತಲಿದ್ದಾರೆ ಎನ್ನಲಾಗಿದೆ
ರಶ್ಮಿಕಾ ಈ ಪೋಸ್ಟ್‌ಗೆ ನೀಡಿರುವ ಕ್ಯಾಪ್ಶನ್‌ ಕೂಡ ನೆಟ್ಟಿಗರ ಗಮನ ಸೆಳೆದಿದೆ. ಅದರಲ್ಲಿ ಅವರು, ʼʼಈ ಎಲ್ಲ ಫೋಟೊಗಳು ನನಗಿಷ್ಟ. ಸುಂದರ ಮಹಿಳೆಯೊಬ್ಬರು ನನಗೆ ಈ ಸೀರೆಯನ್ನು ಉಡುಗೊರೆ ಕೊಟ್ಟಿದ್ದಾರೆ. ಈ ಸೀರೆ, ಅದರ ಬಣ್ಣ, ಸ್ಥಳ ನನಗೆ ವಿಶಿಷ್ಟ ಅನುಭವ ನೀಡಿದೆ. ಫೋಟೊಗ್ರಾಫರ್‌ ಮಾತ್ರವಲ್ಲ ಈ ಫೋಟೊದಲ್ಲಿರುವ ಪ್ರತಿಯೊಂದು ಕೂಡ ನನ್ನ ಹೃದಯಕ್ಕೆ ಹತ್ತಿರವಾಗಿದೆʼʼ ಎಂದು ಬರೆದುಕೊಂಡಿದ್ದಾರೆ.

ಸೀರೆ ಕೊಟ್ಟಿದ್ದು ವಿಜಯ್‌ ಅವರ ತಾಯಿ ಮತ್ತು ಫೋಟೊಗ್ರಾಫರ್‌ ವಿಜಯ್‌ ದೇವರಕೊಂಡ ಎಂದು ಫ್ಯಾನ್ಸ್‌ ತಿಳಿಸಿದ್ದಾರೆ. ಅಲ್ಲದೆ ರಶ್ಮಿಕಾ ಫೋಟೊ ಕ್ಲಿಕ್ಕಿಸಿಕೊಂಡಿರುವುದು ವಿಜಯ್‌ ಅವರ ಮನೆಯಲ್ಲಿ ಎಂದು ಹೇಳಿದ್ದಾರೆ. ಸದ್ಯ ಈ ಬಗ್ಗೆ ಬಿಸಿಬಿಸಿ ಚರ್ಚೆ ಆರಂಭವಾಗಿದೆ. ಸದ್ಯದಲ್ಲೇ ಇವರು ತಮ್ಮ ಸಂಬಂಧವನ್ನು ಅಧಿಕೃತವಾಗಿ ಘೋಷಿಸಲಿದ್ದಾರೆ ಎನ್ನಲಾಗಿದೆ.

ಜತೆಯಾಗಿ ಹುಟ್ಟುಹಬ್ಬ ಆಚರಿಸಿಕೊಂಡ ವಿಜಯ್‌-ರಶ್ಮಿಕಾ?
ಏ. 5ರಂದು ರಶ್ಮಿಕಾ ಓಮನ್‌ನಲ್ಲಿ 29ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದರು. ಈ ಬರ್ತ್‌ಡೇ ಪಾರ್ಟಿಯಲ್ಲಿ ವಿಜಯ್‌ ದೇವರಕೊಂಡ ಕೂಡ ಭಾಗಿಯಾಗಿದ್ದಾರೆ ಎನ್ನುವ ವದಂತಿ ಹಬ್ಬಿತ್ತು. ಇಬ್ಬರು ಜತೆಯಾಗಿ ಪೋಸ್‌ ಕೊಟ್ಟಿರುವ ಫೋಟೊ ಹೊರ ಬರದಿದ್ದರೂ ಪ್ರತ್ಯೇಕವಾಗಿ ಹಂಚಿಕೊಂಡ ಫೋಟೊಗಳು ಒಂದೇ ಸ್ಥಳದಲ್ಲಿ ಕ್ಲಿಕ್ಕಿಸಿಕೊಂಡಿದ್ದು ಎನ್ನುವುದನ್ನು ಫ್ಯಾನ್ಸ್‌ ಕಂಡುಕೊಂಡಿದ್ದರು.

2018ರಲ್ಲಿ ತೆರೆಕಂಡ ಟಾಲಿವುಡ್‌ ಚಿತ್ರ ʼಗೀತ ಗೋವಿಂದಂʼನಲ್ಲಿ ಈ ಜೋಡಿ ಮೊದಲ ಬಾರಿಗೆ ತೆರೆ ಹಂಚಿಕೊಂಡಿತ್ತು. ಈ ರೊಮ್ಯಾಂಟಿಕ್‌ ಡ್ರಾಮ ಬಾಕ್ಸ್‌ ಆಫೀಸ್‌ನಲ್ಲಿ ಮ್ಯಾಜಿಕ್‌ ಮಾಡುವ ಮೂಲಕ ವಿಜಯ್‌-ರಶ್ಮಿಕಾ ಸಿನಿಪ್ರಿಯರ ಹಾಟ್‌ ಫೆವರೇಟ್‌ ಎನಿಸಿಕೊಂಡರು. ಜತೆಗೆ ಈ ಚಿತ್ರದ ವೇಳೆ ಇಬ್ಬರ ಮಧ್ಯೆ ಪ್ರೀತಿ ಚಿಗುರೊಡೆಯಿತು ಎನ್ನಲಾಗಿದೆ. ಅದಾದ ಬಳಿಕ 2019ರಲ್ಲಿ ತೆರೆಕಂಡ ʼಡಿಯರ್‌ ಕಾಮ್ರೇಡ್‌ʼ ತೆಲುಗು ಸಿನಿಮಾದಲ್ಲಿಯೂ ಇವರು ಜತೆಯಾಗಿ ನಟಿಸಿದರು. ಈ ಪ್ರೀತಿ ಇಂದಿಗೂ ಮುಂದುವರಿದಿದೆ.

Share This Article
Facebook Twitter Copy Link Print
Previous Article IPL 2025 : RCB ಗೆದ್ದರೆ ರಜೆ ಘೋಷಿಸಿ ಎಂದು ಸಿಎಂ ಗೆ ಪತ್ರ ಬರೆದ ಯುವಕ
Next Article ಮಳೆಗೆ ಮನೆ ಮೇಲೆ ಕುಸಿದ ಗುಡ್ಡ : ಅವಶೇಷಗಳಡಿ ಸಿಲುಕಿದ್ದ ಮಹಿಳೆ ಸಾವು

Popular Posts

ನಿರ್ಮಾಣ ಹಂತದ ಫ್ಲೈಓವರ್ ಮುರಿದುಬಿದ್ದ ದೈತ್ಯ ಕ್ರೇನ್ : ಮೂವರು ಸಾವು

1 Min Read

Relationship ಒಬ್ಬ ವ್ಯಕ್ತಿಗೆ ಎಷ್ಟು ಸಲ ರಿಯಲ್ ಲವ್ ಆಗುತ್ತೆ?ಅಧ್ಯಯನ ಹೇಳಿದ ಅಚ್ಚರಿಯ ಸತ್ಯ ಇಲ್ಲಿದೆ

2 Min Read

Bigg Boss ಮಲ್ಲಮ್ಮನ ಮನೆಗೆ ಬಂತು ಹೊಸ ಕಾರ್​

1 Min Read

ಸಿಎಂ ಡಿಕೆ ಶಿವಕುಮಾರ್ ತಲೆನೋವಾದ ಖಾತೆ ಕ್ಯಾತೆ : ರಾಜೀನಾಮೆ ಕೊಟ್ಟೇ ಸಿದ್ದ ಎಂದ ರಾಮಲಿಂಗಾರೆಡ್ಡಿ

1 Min Read

You Might Also Like

Uncategorized

Rishabh Pant ಲಕ್ನೋ ನಾಯಕತ್ವಕ್ಕೆ ರಿಷಭ್ ಪಂತ್ ರಾಜೀನಾಮೆ

1 Min Read
Uncategorized

Salman Khan ನಟ ಸಲ್ಮಾನ್ ಖಾನ್ ರಹಸ್ಯ ವಿಡಿಯೋ ಲೀಕ್ : ಫ್ಯಾನ್ಸ್ ಗೆ ಆತಂಕ

1 Min Read
Uncategorized

ಹೌಸ್ ಪಾರ್ಟಿ ಪ್ರಿಯರಿಗೆ ಬಿಗ್ ಶಾಕ್: ಮದ್ಯದ ಪರ್ಮಿಟ್ ಶುಲ್ಕ ದುಪ್ಪಟ್ಟು ಮಾಡಿದ ಸರ್ಕಾರ!

1 Min Read
Uncategorized

Health Tips ರಾತ್ರಿ ಮಲಗುವ ಮುನ್ನ ಏಲಕ್ಕಿ ಸೇವಿಸಿ : ಸುಖಕರ ನಿದ್ರೆ ಸೇರಿ ಹಲವು ಪ್ರಯೋಜನಗಳಿವೆ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?