Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ರಿಲೇಷನ್‌ಶಿಪ್ > gap between siblings ಮದುವೆಯ ನಂತರ ಒಡಹುಟ್ಟಿದವರ ನಡುವೆ ಅಂತರ ಏಕೆ ಮೂಡುತ್ತದೆ?
ರಿಲೇಷನ್‌ಶಿಪ್ಲೈಫ್‌ಸ್ಟೈಲ್

gap between siblings ಮದುವೆಯ ನಂತರ ಒಡಹುಟ್ಟಿದವರ ನಡುವೆ ಅಂತರ ಏಕೆ ಮೂಡುತ್ತದೆ?

Share
2 Min Read
SHARE

newsics.com

ಒಡಹುಟ್ಟಿದವರ ಸಂಬಂಧ ಎಲ್ಲ ಸಂಬಂಧಕ್ಕಿಂತ ಮೀರಿದ ಬಂಧವಾಗಿದೆ. ಬಾಲ್ಯದಿಂದಲೇ ಒಟ್ಟಿಗೆ ಕಳೆಯುವ ಒಡಹುಟ್ಟಿದವರ ನಡುವೆ ಸ್ನೇಹ, ಸಣ್ಣಪುಟ್ಟ ಜಗಳ ನಡೆಯುತ್ತಲೇ ಇರುತ್ತವೆ. ಎಷ್ಟೇ ಜಗಳಗಳು ನಡೆದರೂ ಜೊತೆಯಾಗಿಯೇ ಇರುತ್ತಾರೆ. ಆದರೆ ಒಂದು ಹಂತದ ಬಳಿಕ ಅಂದರೆ ಮದುವೆಯಾದ ಬಳಿಕ ಈ ಸಂಬಂಧದಲ್ಲಿ ಅಂತರ ಮೂಡಲು ಆರಂಭಿಸುತ್ತದೆ.

ಮದುವೆಯ ಬಳಿಕ ರಕ್ತ ಹಂಚಿಕೊಂಡು ಹುಟ್ಟಿದ ಸಹೋದರ, ಸಹೋದರಿಯರ ನಡುವೆ ಒಂದಷ್ಟು ಅಂತರಗಳು ಮೂಡುತ್ತವೆ, ಆತ್ಮೀಯತೆ ಕಡಿಮೆಯಾಗುತ್ತದೆ.

ಹೊಸ ಜವಾಬ್ದಾರಿಗಳು ಮತ್ತು ಬದಲಾಗುವ ಆದ್ಯತೆ: ಮದುವೆಯ ನಂತರ, ಜವಾಬ್ದಾರಿಗಳು ಹೆಚ್ಚಾಗುತ್ತವೆ. ಸಂಗಾತಿ, ಅತ್ತೆ, ಮಾವ, ಮಕ್ಕಳು ಮತ್ತು ಮನೆಯನ್ನು ನೋಡಿಕೊಳ್ಳುವುದು ಹೀಗೆ ಆದ್ಯತೆ, ಜವಾಬ್ದಾರಿಗಳು ಹೆಚ್ಚಾಗುತ್ತದೆ, ಆದ್ಯತೆಗಳಲ್ಲಿ ಸಾಕಷ್ಟು ಬದಲಾವಣೆಗಳಾಗುತ್ತವೆ. ಆಗ ಒಡಹುಟ್ಟಿದವರೊಂದಿಗೆ ಮಾತನಾಡಲು ಅಷ್ಟಾಗಿ ಸಮಯವಿರುವುದಿಲ್ಲ. ಗಂಡ, ಅತ್ತೆ-ಮಾವ, ಮಕ್ಕಳು, ಹೆಂಡತಿ ಮಕ್ಕಳು ಅಂತೆಲ್ಲಾ ಜವಾಬ್ದಾರಿಗಳು ಹೆಚ್ಚಾದಾಗ ಒಡಹುಟ್ಟಿದವರೊಂದಿಗೆ ಮಾತನಾಡಲು ಸಮಯ ಸಿಗುವುದಿಲ್ಲ. ಇದರಿಂದ ಅಂತರ ಮೂಡುತ್ತದೆ.

ದೂರ ದೂರ ಇರುವುದು: ಮದುವೆಯ ನಂತರ , ಸಹೋದರ ಸಹೋದರಿಯರು ಬೇರೆ ಬೇರೆ ಮನೆಗಳಲ್ಲಿ ಮಾತ್ರವಲ್ಲ, ಕೆಲವೊಮ್ಮೆ ಬೇರೆ ಬೇರೆ ದೂರದೂರುಗಳಲ್ಲಿಯೂ ಕೂಡ ಇರುತ್ತಾರೆ. ಹೀಗೆ ದೂರ ದೂರ ವಾಸಿಸುವುದರಿಂದ ಹಾಗೂ ಕೆಲಸ, ಮನೆ ಜವಾಬ್ದಾರಿ ಅಂತೆಲ್ಲಾ ಇರುವಾಗ ಒಡಹುಟ್ಟಿದವರ ನಡುವೆ ಸಂವಹನ ಕ್ರಮೇಣ ಕಡಿಮೆಯಾಗುತ್ತದೆ. ಇದರಿಂದ ಒಡಹುಟ್ಟಿದವರ ನಡುವೆ ಅಂತರ ಮೂಡುತ್ತದೆ.

ಜೀವನಶೈಲಿ ಮತ್ತು ಚಿಂತನೆಯಲ್ಲಿ ಬದಲಾವಣೆ: ಮದುವೆಯ ನಂತರ ಪ್ರತಿಯೊಬ್ಬರ ಜೀವನಶೈಲಿ ಮತ್ತು ಚಿಂತನೆ ಬದಲಾಗುತ್ತದೆ. ಜನರು ತಮ್ಮ ಸಂಗಾತಿಗೆ ಅನುಗುಣವಾಗಿ ಜೀವನಶೈಲಿಯನ್ನು ಬದಲಾಯಿಸಿಕೊಳ್ಳುತ್ತಾರೆ. ತಮ್ಮದೇ ಒಂದು ಹೊಸ ಕುಟುಂಬ ರೂಪುಗೊಂಡಿರುತ್ತದೆ. ಇವೆಲ್ಲದರ ಕಾರಣದಿಂದ ಒಡಹುಟ್ಟಿದವರೊಂದಿಗೆ ಅಷ್ಟಾಗಿ ಮಾತನಾಡುವುದುದಿಲ್ಲ, ಅಪರೂಪಕ್ಕೆ ಭೇಟಿ, ಈ ಅಂಶವೂ ಒಡಹುಟ್ಟಿದವರ ನಡುವೆ ಅಂತರ ಸೃಷ್ಟಿಸುತ್ತದೆ.

ಸಂವಹನದ ಕೊರತೆ: ಮದುವೆಗೆ ಮೊದಲು ಸಹೋದರ ಸಹೋದರಿಯರು ಒಬ್ಬರಿಗೊಬ್ಬರು ನೀಡುವ ಸಮಯವನ್ನು, ಮದುವೆಯ ನಂತರ ಪರಸ್ಪರ ಅಷ್ಟು ನೀಡಲು ಸಾಧ್ಯವಾಗುವುದಿಲ್ಲ. ಬದಲಾಗುವ ಆದ್ಯತೆಗಳು ಮತ್ತು ವೈವಾಹಿಕ ಜೀವನದಲ್ಲಿ ಜವಾಬ್ದಾರಿಯಿಂದ ಸಹೋದರ ಸಹೋದರಿಯರು ಪರಸ್ಪರ ಹೆಚ್ಚು ಸಂವಹನ ನಡೆಸಲು ಸಾಧ್ಯವಾಗುವುದಿಲ್ಲ. ಇದು ಕೂಡಾ ಅಂತಹ ಹೆಚ್ಚಾಗಲು ಕಾರಣ.

ಮಾತನಾಡಲು ಸಮಯ ಮಾಡಿಕೊಳ್ಳಿ: ವಾರಕ್ಕೊಮ್ಮೆ ಕರೆ ಅಥವಾ ವೀಡಿಯೊ ಕಾಲ್‌ ಮಾಡುವ ಮೂಲಕ ಪರಸ್ಪರ ಮಾತನಾಡಿ. ಕಷ್ಟಸುಖ ಹಂಚಿಕೊಳ್ಳಿ. ಇದರಿಂದ ಸಂಬಂಧ ಬಲಗೊಳ್ಳುತ್ತದೆ.

Gold Rate Today Bangalore: ಗುಡ್ ನ್ಯೂಸ್: ಚಿನ್ನದ ಬೆಲೆ ಸತತ ಎರಡನೇ ದಿನ ಇಳಿಕೆ

TAGGED:Why does a gap arise between siblings after marriage?
Share This Article
Facebook Twitter Copy Link Print
Previous Article Gold Rate Today Bangalore: ಗುಡ್ ನ್ಯೂಸ್: ಚಿನ್ನದ ಬೆಲೆ ಸತತ ಎರಡನೇ ದಿನ ಇಳಿಕೆ
Next Article Lifestyle ಮಳೆಗಾಲದಲ್ಲಿ ಒಳಉಡುಪುಗಳನ್ನು ಒಣಗಿಸಲು ಈ ರೀತಿ ಮಾಡಿ

Popular Posts

Gurupushyamruta yoga ಇಂದು ಗುರುಪುಷ್ಯಾಮೃತ ಯೋಗ: ಹೀಗೆ ಪೂಜೆ ಮಾಡಿದರೆ ಅದೃಷ್ಟ ನಿಮ್ಮದು!

3 Min Read

GOOD MORNING | Today’s Horoscope ಇಂದಿನ ರಾಶಿ ಭವಿಷ್ಯ, 18-06-2026, ಗುರುವಾರ, ಇಂದು ನಿಮ್ಮ ಗ್ರಹಗತಿ ಹೇಗಿದೆ?

5 Min Read

Media insult ಭಾರೀ ವಾಗ್ವಾದಕ್ಕೆ ಕಾರಣವಾದ ಪ್ರಕಾಶ್ ರಾಜ್‌ರ ‘ಮಾರಿಕೊಂಡ ಮಾಧ್ಯಮದವರು’ ಪದ: ಕ್ಷಮೆ ಕೇಳಲ್ಲ ಎಂದ ನಟ

2 Min Read

US support India ಮೋದಿ ಪ್ರಧಾನಿಯಾಗಿರುವಾಗ ಭಾರತದ ಮೇಲೆ ಯಾರೇ ದಾಳಿ ಮಾಡಿದರೂ ನೆರವಿಗೆ ನಾವಿದ್ದೇವೆ: ಟ್ರಂಪ್

2 Min Read

You Might Also Like

ಲೈಫ್‌ಸ್ಟೈಲ್

ಮನೆಯಲ್ಲಿ ನೀರಿನ ಕಾರಂಜಿ ಇಡುವಾಗ ಈ ನಿಯಮಗಳು ನೆನಪಿರಲಿ

1 Min Read
ಲೈಫ್‌ಸ್ಟೈಲ್ಆರೋಗ್ಯ

ಹೃದಯ ಸಂಬಂಧಿ ಕಾಯಿಲೆಗೆ ಮುಖ್ಯ ಕಾರಣವೇನು?; ಯಾವಾಗ ಪರೀಕ್ಷೆ ಮಾಡಿಸಿಕೊಳ್ಳಬೇಕು?

1 Min Read
ಲೈಫ್‌ಸ್ಟೈಲ್

ಮನೆಯಲ್ಲಿ ಜರಿ ಹುಳು ಕಾಣಿಸಿಕೊಂಡರೆ ಏನಾಗುತ್ತೆ? ಜ್ಯೋತಿಷ್ಯ ಹೇಳುವುದೇನು?

2 Min Read
ಲೈಫ್‌ಸ್ಟೈಲ್

ಹೊಸದಾಗಿ ಮದ್ವೆಯಾದ ಮಹಿಳೆಯರು Googleನಲ್ಲಿ ಮೊದ್ಲು ಏನು ಹುಡುಕ್ತಾರೆ?

2 Min Read

Social Networks

Facebook-f Instagram Twitter
Welcome Back!

Sign in to your account

Lost your password?