newsics.com
ಬೆಂಗಳೂರು: ಇದೀಗ ಮತ್ತೆ ಬೆಂಗಳೂರಲ್ಲಿ ಟೋಯಿಂಗ್ ಪುನರಾರಂಭಗೊಳಿಸಲಾಗುತ್ತಿದೆ.
ನಗರದಲ್ಲಿ ಟೋಯಿಂಗ್ ಹಗಲು ದರೋಡೆಯ ಕಾರಣಕ್ಕೆ ಸಾರ್ವಜನಿಕರು ತೀವ್ರ ಆಕ್ರೋಶ ಹೊರ ಹಾಕಿದ್ದರು. ಹೀಗಾಗಿ ಟೋಯಿಂದ್ ಸ್ಥಗಿತಗೊಳಿಸಲಾಗಿತ್ತು.
ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಗೃಹ ಸಚಿವ ಜಿ. ಪರಮೇಶ್ವರ್, ಹಿಂದೆ ಟ್ರಾಫಿಕ್ ಸಮಸ್ಯೆಗೆ ಟೋಯಿಂಗ್ ಮಾಡುತ್ತಿದ್ವಿ. ಮತ್ತೆ ಅದನ್ನು ಜಾರಿಗೆ ತರುತಿದ್ದೇವೆ. ಪೊಲೀಸ್ ಸಿಬ್ಬಂದಿ ಮತ್ತು ಹೋಮ್ ಗಾರ್ಡ್ಸ್ಗಳನ್ನು ಬಳಸಿಕೊಂಡು ಟೋಯಿಂಗ್ ಮಾಡುತ್ತೇವೆ ಎಂದು ಹೇಳಿದರು.ಮಹಿಳಾ ಮತ್ತು ಮಕ್ಕಳ ಸುರಕ್ಷತೆ ಬಗ್ಗೆ ಸಾಕಷ್ಟು ಕ್ರಮ ತಡಗೆದುಕೊಂಡಿದ್ದೇವೆ. ಮಹಿಳೆಯರ ಸುರಕ್ಷತೆ ಸಲುವಾಗಿ ಬೆಂಗಳೂರು ನಗರದಲ್ಲಿ 9 ಸಾವಿರ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ನಗರದಲ್ಲಿ 30 ಸೇಫ್ಟಿ ಐಲ್ಯಾಂಡ್ ಸ್ಥಾಪಿಸಿದ್ದೇವೆ.
ರಾತ್ರಿ ವೇಳೆ ಮಹಿಳೆಯರು ಓಡಾಡುವ ಡಾರ್ಕ್ ಏರಿಯಾಗಳಲ್ಲಿ ಹೆಚ್ಚು ಗಮನ ಹರಿಸುತ್ತೇವೆ. ನಿರ್ಭಯ ಯೋಜನೆಯಡಿ ಕೇಂದ್ರ ಸರ್ಕಾರ 667 ಕೋಟಿ ರೂ. ನೀಡಿದೆ. ಈ ಹಣವನ್ನು ಮಹಿಳೆಯರ ಸುರಕ್ಷತೆಗಾಗಿ ಖರ್ಚು ಮಾಡಿದ್ದೇವೆ. ಬೆಂಗಳೂರು ಸುರಕ್ಷಿತ ನಗರಗಳಲ್ಲಿ ಒಂದು ಎಂದು ಹೈದರಾಬಾದ್ನ ಸಂಸ್ಥೆಯೊಂದು ವರದಿ ನೀಡಿದೆ. ಇನ್ನೂ ಹೆಚ್ಚಿನ ಪರಿಣಾಮಕಾರಿ ಕೆಲಸ ಮಾಡಬೇಕಿದೆ ಎಂದು ಹೇಳಿದ್ದಾರೆ.ಅಂದಹಾಗೇ 2022ರಲ್ಲಿ ಬೆಂಗಳೂರಲ್ಲಿ ಈ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಮುಖ್ಯಮಂತ್ರಿಯಾಗಿದ್ದಂತ ಬಸವರಾಜ ಬೊಮ್ಮಾಯಿ ಅವರು ಟೋಯಿಂಗ್ ರದ್ದುಗೊಳಿಸಿದ್ದರು. ಪಾರ್ಕಿಂಗ್ ಅಲ್ಲದ ಜಾಗದಲ್ಲಿ ವಾಹನ ನಿಲುಗಡೆ ಮಾಡುತ್ತಿದ್ದದ್ದನ್ನು ಟೋಯಿಂಗ್ ಮಾಡುತ್ತಿದ್ದದ್ದು ನಿಲ್ಲಿಸಲಾಗಿತ್ತು. ಬದಲಾಗಿ ನೋ ಪಾರ್ಕಿಂಗ್ ಸ್ಥಳದಲ್ಲಿ ವಾಹನ ನಿಲ್ಲಿಸಿದ್ದರೇ ದಂಡಾಸ್ತ್ರ ಪ್ರಯೋಗದ ಆದೇಶ ಮಾಡಲಾಗಿತ್ತು.