Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > ನಾನು ಚಿಪ್ಸ್ ಕದ್ದಿಲ್ಲಮ್ಮ, ಆದ್ರೂ ಅವಮಾನ ಮಾಡಿದ್ರು… ಮುಗ್ಧ ಬಾಲಕನ ಜೀವ ಹೋಯ್ತು
ದೇಶಪ್ರಮುಖ

ನಾನು ಚಿಪ್ಸ್ ಕದ್ದಿಲ್ಲಮ್ಮ, ಆದ್ರೂ ಅವಮಾನ ಮಾಡಿದ್ರು… ಮುಗ್ಧ ಬಾಲಕನ ಜೀವ ಹೋಯ್ತು

Share
1 Min Read
SHARE

newsics.com

ಕೋಲ್ಕತ್ತಾ: ಅಮ್ಮಾ ನಾನು ಚಿಪ್ಸ್ ಕದ್ದಿಲ್ಲ, ಆದರೂ ಅವಮಾನ ಮಾಡಿದ್ರು ಎಂದು ಡೆತ್ ನೋಟ್ ಬರೆದಿಟ್ಟು 12 ವರ್ಷದ ಬಾಲಕ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ.

ಚಿಪ್ಸ್ ಪ್ಯಾಕೇಟ್ ಕದ್ದ ಆರೋಪದ ಮೇಲೆ ನಾಲ್ವರ ಎದುರು ಅಂಗಡಿಯವ ಬೈದಿರುವುದಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ..

ಅವಮಾನಕ್ಕೊಳಗಾದ ಬಾಲಕ ಆತ್ಮಹತ್ಯೆಗೆ ಶರಣಾಗಿದ್ದಾನೆ. ಬರೆದ ಡೆತ್ ನೋಟ್ನಲ್ಲಿ ಅಮ್ಮಾ ನಾನು ಚಿಪ್ಸ್ ಕದ್ದಿಲ್ಲ ಎಂದು ಹೇಳಿದ್ದಾನೆ. ಪಶ್ಚಿಮ ಮೇದಿನಿಪುರ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಏಳನೇ ತರಗತಿಯ ವಿದ್ಯಾರ್ಥಿ ಕೃಷ್ಣೇಂದು ದಾಸ್ ಎಂದು ಗುರುತಿಸಲಾದ ಬಾಲಕ ಚಿಪ್ಸ್ ಖರೀದಿಸಲು ಅಂಗಡಿಗೆ ಹೋಗಿದ್ದ ಎಂದು ವರದಿಯಾಗಿದೆ.

ಆತನ ಕುಟುಂಬದ ಪ್ರಕಾರ, ಶುಭಂಕರ್ ದೀಕ್ಷಿತ್ ಎಂದು ಗುರುತಿಸಲಾದ ಅಂಗಡಿಯವನಿಗೆ ಪದೇ ಪದೇ ಕರೆದರೂ ಆತ ಉತ್ತರಿಸಿರಲಿಲ್ಲ, ಅಂಕಲ್ ನಾನು ಚಿಪ್ಸ್ ತೆಗೆದುಕೊಳ್ಳುತ್ತಿದ್ದೇನೆ ಎಂದು ಹೇಳಿದರೂ ಆ ಕಡೆಯಿಂದ ಪ್ರತಿಕ್ರಿಯೆ ಬಂದಿರಲಿಲ್ಲ, ಅಂಗಡಿಯವರು ಇಲ್ಲ, ಆಮೇಲೆ ಹಣ ಕೊಟ್ಟರಾಯ್ತು ಎಂದು ಹೇಳಿ ಪ್ಯಾಕೆಟ್ ತೆಗೆದುಕೊಂಡಿದ್ದಾನೆ.

ಕೆಲ ಸಮಯದ ಬಳಿಕ ಅಂಗಡಿಯವನು ಬಂದು, ಕೃಷ್ಣೇಂದುಗೆ ಕಪಾಳಮೋಕ್ಷ ಮಾಡಿ, ಬಸ್ಕಿ ಹೊಡೆಸಿದ್ದಾರೆ ಎಂದು ಪೋಷಕರು ದೂರಿದ್ದಾರೆ. ಬಾಲಕನ ತಾಯಿಯನ್ನು ಸ್ಥಳಕ್ಕೆ ಕರೆಸಿ ಗದರಿಸಲಾಯಿತು.

ಕೃಷ್ಣೇಂದು ಚಿಪ್ಸ್ಗೆ ಹಣ ಕೊಡಬೇಕೆಂದಿದ್ದೆ ಎಂದು ವಿವರಿಸಲು ಪ್ರಯತ್ನಿಸಿದ್ದಾಗಿ ವರದಿಯಾಗಿದೆ, ಆದರೆ ಸುಳ್ಳು ಹೇಳಿದ್ದಾನೆಂದು ಆರೋಪಿಸಲಾಗಿದೆ.

ದೀಕ್ಷಿತ್ ಅವರ ಒಪ್ಪಿಗೆಯಿಲ್ಲದೆ ಪ್ಯಾಕೆಟ್ ತೆಗೆದುಕೊಂಡಿದ್ದಕ್ಕಾಗಿ ಕ್ಷಮೆಯಾಚಿಸಿದ ತಕ್ಷಣವೇ ಹಣ ಕೊಡಲು ಮುಂದಾದರು. ಆದರೆ ಅಂಗಡಿ ಮಾಲೀಕ ಅವನು ಸುಳ್ಳು ಹೇಳುತ್ತಿದ್ದಾನೆಂದು ಆರೋಪಿಸಿದ್ದಾನೆ.
ಮನೆಗೆ ಹಿಂತಿರುಗಿದಾಗ, ಹುಡುಗ ತನ್ನ ಕೋಣೆಗೆ ಹೋಗಿ ಬಾಗಿಲು ಹಾಕಿಕೊಂಡಿದ್ದ, ನಂತರ ಅವನು ಬಾಗಿಲು ತೆರೆಯಲೇ ಇಲ್ಲ, ಆತ ಪ್ರಜ್ಞಾಹೀನನಾಗಿ ಬಿದ್ದಿದ್ದ.

ಅರ್ಧ ಖಾಲಿಯಾದ ಕೀಟನಾಶಕ ಬಾಟಲಿಯು ಅವನ ಪಕ್ಕದಲ್ಲಿ ಬಿದ್ದಿದ್ದು, ಬಾಯಿಯಿಂದ ನೊರೆ ಬರುತ್ತಿತ್ತು. ಕೂಡಲೇ ಆಸ್ಪತ್ರೆಗೆ ದಾಖಲಿಸಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಅಷ್ಟರೊಳಗೆ ಪ್ರಾಣಪಕ್ಷಿ ಹಾರಿಹೋಗಿತ್ತು.

New name for Mysore Pak ಮೈಸೂರ್ ಪಾಕ್‌ಗೆ ಹೊಸ ಹೆಸರು! ಮರುನಾಮಕರಣಕ್ಕೆ ಕಾರಣವೇನು?

IT office relocation to Pune ಭಾಷಾ ಅಸಹನೆ: ಪುಣೆಗೆ ಕಚೇರಿ ಸ್ಥಳಾಂತರ ಘೋಷಣೆ ಮಾಡಿದ ಕನ್ನಡ ಮಾತನಾಡಲು ಬಯಸದ ಐಟಿ ಉದ್ಯಮಿ

Girl strips naked and beats up boyfriend ಪ್ರೀತಿಸಿ ವಂಚಿಸಿದ ಪ್ರಿಯಕರನ ಬಟ್ಟೆ ಬಿಚ್ಚಿ ನಡುರಸ್ತೆಯಲ್ಲೇ ಹೊಡೆದ ಹುಡುಗಿ! ವೈರಲ್ ವಿಡಿಯೋ ನೋಡಿ

TAGGED:but they still insulted me... An innocent boy lost his life.I didn't steal the chips
Share This Article
Facebook Twitter Copy Link Print
Previous Article Harvard University ಹಾರ್ವರ್ಡ್ ವಿವಿಗೆ ವಿದೇಶಿ ವಿದ್ಯಾರ್ಥಿಗಳ ಸೇರ್ಪಡೆಗೆ ಟ್ರಂಪ್ ತಡೆ: ಕೋರ್ಟ್ ಮೊರೆಹೋದ ವಿವಿ
Next Article Accident ಭೀಕರ ಅಪಘಾತ: ಆರು ಮಂದಿ ಸಾವು

Popular Posts

ವಿಮಾನ ನಿಲ್ದಾಣದಲ್ಲಿ ಕಾಂಗ್ರೆಸ್ ಮಹತ್ವದ ಸಭೆ!: ಮುನಿಯಪ್ಪ ಮನವೊಲಿಕೆಗೆ ಮುಂದಾದ ರಾಹುಲ್, ಸಿದ್ದು, ಡಿಕೆಶಿ

2 Min Read

ನನಗೆ ಪಕ್ಷ ಜವಾಬ್ದಾರಿ ನೀಡಿದೆ’ ರಾಮಲಿಂಗಾ ರೆಡ್ಡಿ ರಾಜೀನಾಮೆ ಪತ್ರಕ್ಕೆ ಸಹಿ ಹಾಕಿದ ಬೆನ್ನಲ್ಲೇ ಸಚಿವ ಕೃಷ್ಣಬೈರೇಗೌಡ ಹೇಳಿದ್ದೇನು?

1 Min Read

CM ವಿಜಯ್‌ ನೇತೃತ್ವದ TVK ಶಾಸಕಿಗೆ ಭಾರೀ ಅವಮಾನ; ನಡೆದಿದ್ದೇನು?

0 Min Read

ವಿದೇಶಿ ಉಗ್ರನ ಜೊತೆ ನಂಟು ಹೊಂದಿದ್ದ ಆರೋಪದಲ್ಲಿ ಯುವಕನ ಬಂಧನ

2 Min Read

You Might Also Like

ಕರ್ನಾಟಕಪ್ರಮುಖ

Elephant attack ಆನೆ ದಾಳಿಗೆ ನಿವೃತ್ತ ಐಪಿಎಸ್ ಅಧಿಕಾರಿ‌ ಪತ್ನಿ ಬಲಿ

1 Min Read
ಕರ್ನಾಟಕಪ್ರಮುಖ

ರಾಜ್ಯ ಸರ್ಕಾರಿ ನೌಕರರು ಬೆಳಗ್ಗೆ 10 ಗಂಟೆಯೊಳಗೆ ಕಚೇರಿಗೆ ಹಾಜರಾಗುವುದು ಕಡ್ಡಾಯ : ಸರ್ಕಾರದಿಂದ ಮಹತ್ವದ ಆದೇಶ

2 Min Read
ಪ್ರಮುಖಕರ್ನಾಟಕ

Train tragedy ಚಲಿಸುತ್ತಿದ್ದ ರೈಲು ಹತ್ತಲು ಯತ್ನಿಸಿದ ಯುವಕ ಸಾವು

1 Min Read
ಕರ್ನಾಟಕದೇಶಪ್ರಮುಖ

FSSAI Vegan logo ಸಸ್ಯಾಹಾರಿ ಆಹಾರ ಪ್ಯಾಕೆಟ್‌ ಗಳ ಮೇಲೆ FSSAI ಲೋಗೋ ಕಡ್ಡಾಯ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?