newsics.com
ಬೆಂಗಳೂರು : ಆರ್‌ಸಿಬಿ-ಕೆಕೆಆರ್ ಪಂದ್ಯದ ವೇಳೆ ಸ್ಟೇಡಿಯಂ ನುಗ್ಗಿ, ವಿರಾಟ್ ಕೊಹ್ಲಿಯನ್ನು ಹಗ್ ಮಾಡುತ್ತೇನೆ ಎಂದು ಪೋಸ್ಟ್ ಹಾಕಿದ್ದ ಅಭಿಮಾನಿ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ. ಆರ್‌ಸಿಬಿ-ಕೆಕೆಆರ್ ಪಂದ್ಯದಲ್ಲಿ ಗ್ರೌಂಡ್‌ಗೆ ನುಗ್ತೀನಿ ಎಂದು ಕಬ್ಜ ಶರಣ್ ಎಂಬ ಯುವಕ ವಿಡಿಯೋ ಪೋಸ್ಟ್ ಹಾಕಿದ್ದ.
ಇನ್‌ಸ್ಟಾಗ್ರಾಂ ಲೈಕ್ಸ್ ಹಾಗೂ ವೀವ್ಸ್‌ಗಾಗಿ ಹುಚ್ಚಾಟ ಮಾಡಿದ್ದ ಯುವಕನಿಗೆ ಪೊಲೀಸರು ತಕ್ಕ ಪಾಠ ಕಲಿಸಿದ್ದು, ಸ್ಟೇಡಿಯಂಗೆ ನುಗ್ತೀನಿ ಅಂದವನಿಗೆ ಮ್ಯಾಚ್ ನೋಡೋ ಭಾಗ್ಯವೂ ಇಲ್ಲವಾಗಿದೆ. ಇದೀಗ ತಪ್ಪಾಯ್ತು ಎಂದು ವಿಡಿಯೋ ಮಾಡಿರುವ ಶರಣ್, ಮೊನ್ನೆ ನಾನೊಂದು ವಿಡಿಯೋ ಮಾಡಿದ್ದೆ. ಇವತ್ತಿನ ಮ್ಯಾಚ್‌ನಲ್ಲಿ ಗ್ರೌಂಡ್‌ಗೆ ನುಗ್ಗಿ ಕೊಹ್ಲಿ ಅವರನ್ನು ಹಗ್ ಮಾಡುವೆ ಎಂದು ಹೇಳಿದ್ದೆ. ಆದರೆ, ಆ ರೀತಿ ಮಾಡಕ್ಕೆ ಆಗಲ್ಲ. ಯಾಕೆಂದರೆ ಇದು ಕಾನೂನು ಬಾಹಿರ. ಈ ರೀತಿ ಸವಾಲು ಹಾಕಿದ್ದಕ್ಕೆ ದಯವಿಟ್ಟು ಕ್ಷಮೆ ಇರಲಿ, ಯಾರೂ ಹೀಗೆ ಮಾಡಬೇಡಿ ಎಂದು ಹೇಳಿದ್ದಾನೆ.
ಕಬ್ಬನ್ ಪಾರ್ಕ್ ಪೊಲೀಸರು ಮುನ್ನಚ್ಚೆರಿಕಾ ಕ್ರಮವಾಗಿ ಅಭಿಮಾನಿ ಶರಣ್‌ನನ್ನು ವಶಕ್ಕೆ ಪಡೆದಿದ್ದಾರೆ. ಆರ್‌ಸಿಬಿ ಕೆಕೆಆರ್ ಪಂದ್ಯ ಮುಗಿಯು ವರೆಗೂ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲೇ ಇರಬೇಕಾಗಿದೆ. ಪಂದ್ಯ ನೋಡಲು ಅವಕಾಶವಿಲ್ಲ.
Rakshit shetty ರಕ್ಷಿತ್ ಶೆಟ್ಟಿಗೆ ಕಂಕಣ ಬಲ ಕೂಡಿಬರೋದ್ಯಾವಾಗ? ಪಂಜುರ್ಲಿ ದೈವ ಹೇಳಿದ್ದೇನು?