newsics.com
ಬೆಂಗಳೂರು : ಈ ಬಾರಿ ಮುಂಗಾರು 5 ದಿನ ಮುಂಚಿತವಾಗಿ ಆರಂಭವಾಗುವ ಸಾಧ್ಯತೆ ಇದೆ ಎಂಬುದಾಗಿ ಇಲಾಖೆ ತಿಳಿಸಿದೆ.
ಪ್ರತಿ ವರ್ಷ ಜೂನ್ 1ರಂದು ನೈರುತ್ಯ ಮಾರುತ ಕೇರಳ ತೀರ ಪ್ರವೇಶಿಸುವುದಾಗಿತ್ತು. ಮುಂಗಾರು ಪೂರ್ವ ಮಳೆಯ ಮಧ್ಯೆ, ಈ ಬಾರಿ ಮುಂಗಾರು ಬೇಗನೇ ಶುರುವಾಗಲಿದೆ. ಮುಂಗಾರು 5 ದಿನ ಮುಂಚಿತವಾಗಿ ಆರಂಭವಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಮೇ 27ರಂದೇ ಕೇರಳಕ್ಕೆ ಮಾನ್ಸೂನ್ ಪ್ರವೇಶಿಸುವ ಸಾಧ್ಯತೆ ಇದೆ. ಈ ವರ್ಷದ ಮುಂಗಾರು ಕೂಡ ಜೂನ್ ಆರಂಭದಲ್ಲಿಯೇ ಕರ್ನಾಟಕ ಹಾಗೂ ಇತರೆ ದಕ್ಷಿಣ ರಾಜ್ಯಗಳಿಗೆ ಪ್ರವೇಶ ಮಾಡಬಹುದು ಎಂಬ ನಿರೀಕ್ಷೆಯಿದೆ.
16 ವರ್ಷದ ನಂತರ, ಮುಂಗಾರು ಐದು ದಿನ ಮುಂಚಿತವಾಗಿ ಆರಂಭವಾಗುತ್ತಿದೆ. 2009ರಲ್ಲಿ ಮೇ 23ರಂದು ಮುಂಗಾರು ಪ್ರಾರಂಭವಾಗಿತ್ತು. ಹವಾಮಾನ ಇಲಾಖೆ ಪ್ರಕಾರ ಮುಂಗಾರು ಮೇ 27ರಂದು ಆರಂಭವಾಗಲಿದೆ
ಈ ವರ್ಷ ಮುಂಗಾರು ಮೊದಲೇ ಆರಂಭವಾದರೆ, ಕೃಷಿ ಚಟುವಟಿಕೆಗಳ ಆರಂಭವಾಗಲಿದ್ದು, ಉತ್ತಮ ಬೆಳೆಯ ನಿರೀಕ್ಷೆಯನ್ನು ಮಾಡಬಹುದು.