newsics.com
ಭಾರತದ ಆಪರೇಷನ್ ಸಿಂಧೂರ್ ಗೆ ಪ್ರತ್ಯುತ್ತರವಾಗಿ ಪಾಕಿಸ್ತಾನ ಕೂಡ ಭಾರತದ ಮೇಲೆ ದಾಳಿ ಮಾಡಲಾರಂಭಿಸಿದೆ. ಪಾಕಿಸ್ತಾನಕ್ಕೆ ಎಲ್ಲಾ ಕಡೆಗಳಿಂದಲೂ ಟೆನ್ಶನ್ ಹೆಚ್ಚಾಗಿದೆ. ಒಂದು ಕಡೆಯಿಂದ ಕ್ಷಿಪಣಿ ದಾಳಿಗಳಾಗ್ತಾ ಇದ್ದರೆ ಇನ್ನೊಂದು ಕಡೆಯಿಂದ ಜಲಭೀತಿ ಶುರುವಾಗಿದೆ. ಇದಕ್ಕೂ ಮುಂಚೆ, ಸಿಂಧೂ ನದಿ ನೀರು ಒಪ್ಪಂದವನ್ನು ರದ್ದುಗೊಳಿಸಿದ ಬಳಿಕ ಈ ಅಣೆಕಟ್ಟನ್ನು ಮುಚ್ಚಿ, ಚೆನಾಬ್ ನದಿಯ ನೀರು ಪಾಕಿಸ್ತಾನಕ್ಕೆ ಹರಿಯದಂತೆ ತಡೆಯಲಾಗಿತ್ತು.ಮೇ 9ರಂದು ಸಲಾಲ್ ಡ್ಯಾಮ್ನ 3 ಗೇಟ್ ಓಪನ್ ಮಾಡಿದ್ದರೆ ಇದೀಗ ಮೇ 10ರಂದು 5 ಗೇಟ್ಗಳನ್ನು ಓಪನ್ ಮಾಡಲಾಗಿದೆ. ಈ ಮೂಲಕ ಪಾಪಿ ಪಾಕ್ಗೆ ಪ್ರವಾಹದ ಭೀತಿ ಎದುರಾಗಿದೆ.
ಚೆನಾಬ್ ನದಿಗೆ ಅಡ್ಡಲಾಗಿ ನಿರ್ಮಿಸಲಾದ ರಿಯಾಸಿಯಲ್ಲಿರುವ ಸಲಾಲ್ ಅಣೆಕಟ್ಟಿನ ಮೂರು ದ್ವಾರಗಳನ್ನು ಭಾರತ ಮೇ 9ರಂದು ತೆರೆದಿತ್ತು. ಇಲ್ಲಿಯವರೆಗೆ, ಈ ಗೇಟ್ಗಳನ್ನು ಮುಚ್ಚುವ ಮೂಲಕ, ಪಾಕಿಸ್ತಾನದ ಕಡೆಗೆ ಹರಿಯುವ ನೀರನ್ನು ನಿಲ್ಲಿಸಲಾಗಿತ್ತು.
ಇಂದು ಮತ್ತೆ ಹೆಚ್ಚಿಗೆ 2 ಗೇಟ್ಗಳನ್ನು ತೆರೆಯಲಾಗಿದ್ದು ಈಗ ಒಟ್ಟು 5 ಗೇಟ್ಗಳನ್ನು ಒಪನ್ ಮಾಡಲಾಗಿದೆ. ಬಗ್ಲಿಹಾರ್ ಅಣೆಕಟ್ಟಿನ ಗೇಟ್ ಅನ್ನು ಸಹ ತೆರೆಯಲಾಗಿದೆ.
ಮೇ 8ರ ರಾತ್ರಿಯಿಂದಲೇ ಪಾಕಿಸ್ತಾನದ ಕಡೆಯಿಂದ ಅನೇಕ ಕ್ಷಿಪಣಿಗಳು ಭಾರತದ ಜಮ್ಮು ಕಡೆಗೆ ಹಾರಿಬಂದಿದ್ದು ಅವುಗಳನ್ನು ಭಾರತದಲ್ಲಿರುವ ಕ್ಷಿಪಣಿ ನಿಗ್ರಹ ವ್ಯವಸ್ಥೆಯ ಸಹಾಯದಿಂದ ಮಾರ್ಗಮಧ್ಯದಲ್ಲೇ ಹೊಡೆದುರುಳಿಸಲಾಗಿದೆ. ಈ ದಾಳಿಗಳಲ್ಲಿ ಹಮಾಸ್ ಮಾದರಿಯ ಕ್ಷಿಪಣಿಗಳನ್ನು ಪಾಕಿಸ್ತಾನ ಉಡಾಯಿಸಿದೆ.