newsics.com
ಚಂಡೀಗಢ: ಭಾರತದ ಮೇಲೆ ಪಾಕಿಸ್ತಾನ ನಡೆಸುತ್ತಿರುವ ಶೆಲ್ ದಾಳಿಯಿಂದ ಫಿರೋಜ್ಪುರದಲ್ಲಿ ಒಂದೇ ಕುಟುಂಬದ ಮೂವರು ಗಾಯಗೊಂಡಿದ್ದು, ಓರ್ವನ ಸ್ಥಿತಿ ಗಂಭೀರವಾಗಿದೆ.
ಪಾಕ್ ನಡೆಸಿದ ದಾಳಿಯ ಪರಿಣಾಮ ಪಂಜಾಬ್ನ ಫಿರೋಜ್ಪುರದಿಂದ 12ಕಿ.ಮೀ ದೂರದಲ್ಲಿರುವ ಖೈ ಫೆಮೆ ಕಿ ಗ್ರಾಮದ ಮನೆಯೊಂದರ ಮೇಲೆ ಡ್ರೋನ್ ಬಿದ್ದಿದ್ದು, ಭಾರೀ ಸ್ಫೋಟಗೊಂಡಿದೆ.
ದಾಳಿ ವೇಳೆ ಗಾಯಗೊಂಡವರ ಮನೆಯಲ್ಲಿ ದೀಪಗಳು ಉರಿಯುತ್ತಿದ್ದ ಪರಿಣಾಮ ಡ್ರೋನ್ ಉರುಳಿದೆ ಎನ್ನಲಾಗುತ್ತಿದ್ದು, ಸದ್ಯ ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಲಾಗುತ್ತಿದೆ.