newsics.com
ರಾತ್ರಿಯಾಗುತ್ತಿದ್ದಂತೆ ಭಾರತದ ಮೇಲೆ ದಾಳಿ ಮಾಡುವ ಹೇಡಿ ಪಾಕಿಸ್ತಾನಕ್ಕೆ ಭಾರತ ತಕ್ಕ ಪ್ರತೀಕಾರ ನೀಡಿದೆ. ಭಾರತ ನಡೆಸಿದ ‘ಆಪರೇಷನ್ ಸಿಂದೂರ’ದಿಂದ ಕಂಗೆಟ್ಟು ಹತಾಶವಾಗಿ ಪ್ರತಿದಾಳಿ ನಡೆಸುತ್ತಿರುವ ಪಾಕಿಸ್ತಾನ ಶುಕ್ರವಾರ ತಡರಾತ್ರಿ ಭಾರತದ ಪ್ರಮುಖ ನಗರಗಳನ್ನು ಗುರಿಯಾಗಿರಿಸಿಕೊಂಡು ದಾಳಿ ನಡೆಸಲು ಯತ್ನಿಸಿತ್ತು. ಆದ್ರೆ, ಭಾರತ ಸೇನೆ ಅವರ ದಾಳಿಯನ್ನು ವಿಫಲಗೊಳಿಸುವಲ್ಲಿ ಯಶಸ್ವಿಯಾಗಿತ್ತು. ಈ ನಡುವೆ ಇಂದು (ಶನಿವಾರ) ನಸುಗಿನಜಾವ ಭಾರತ ಪಾಕಿಸ್ತಾನದ ಮೇಲೆ ಪ್ರತೀಕಾರದ ಡ್ರೋನ್ ದಾಳಿಯನ್ನು ಆರಂಭಿಸಿದೆ.
ಭಾರತ ಪಾಕಿಸ್ತಾನದ ಪ್ರಮುಖ ನಗರಗಳನ್ನು ಟಾರ್ಗೆಟ್ ಮಾಡಿ ಅಟ್ಯಾಕ್ ಮಾಡಿದ್ದು, ಇಸ್ಲಾಮಾಬಾದ್, ಲಾಹೋರ್ ಮತ್ತು ರಾವಲ್ಪಿಂಡಿ ನಗರಗಳ ಮೇಲೆ ದಾಳಿ ಮಾಡಿದೆ ಎಂದು ರಕ್ಷಣಾ ಮೂಲಗಳು ಸಿಎನ್‌ಎನ್ ನ್ಯೂಸ್ 18 ಗೆ ತಿಳಿಸಿವೆ . ಮಾತ್ರವಲ್ಲ ರಾವಲ್ಪಿಂಡಿಯ ನೂರ್ ಖಾನ್‌ನಲ್ಲಿರುವ ವಾಯುಪಡೆಯ ನೆಲೆಯ ಮೇಲೂ ದಾಳಿ ನಡೆಸಿದೆ
ಪಾಕಿಸ್ತಾನದಲ್ಲಿ ಹಲವು ಸ್ಫೋಟಗಳು ಕೇಳಿಬಂದಿದೆ. ರಾವಲ್ಪಿಂಡಿಯಲ್ಲಿ ಎರಡು, ಲಾಹೋರ್ ಮತ್ತು ಇಸ್ಲಾಮಾಬಾದ್‌ನಲ್ಲಿ ತಲಾ ಒಂದು. L ಸಿಯಾಲ್‌ಕೋಟ್‌ನಲ್ಲಿರುವ ಪಾಕಿಸ್ತಾನಿ ಪೋಸ್ಟ್‌ಗಳು ಮತ್ತು ಇಸ್ಲಾಮಾಬಾದ್‌ನ ಡಿಪ್ಲೊಮ್ಯಾಟಿಕ್ ಎನ್‌ಕ್ಲೇವ್ ಬಳಿಯ ನರೋವಾಲ್ ಮತ್ತು ಸೆರೆನಾ ಹೋಟೆಲ್‌ಗಳ ಮೇಲೆ ಭಾರತೀಯ ಡ್ರೋನ್‌ಗಳು ದಾಳಿ ನಡೆಸಿವೆ ಎಂದು ರಕ್ಷಣಾ ಮೂಲಗಳು ತಿಳಿಸಿವೆ.