newsics.com
ನವದೆಹಲಿ: ಭಾರತ ಹಾಗೂ ಪಾಕ್ ಮಧ್ಯೆ ಯುದ್ಧ ಭೀತಿ ಶುರವಾಗಿದೆ. ಪಹಲ್ಗಾಮ್ನಲ್ಲಿ ನಡೆದ ದಾಳಿಗೆ ಭಾರತ ಪ್ರತಿ ದಾಳಿ ನಡೆಸಿ ಉಗ್ರರರ ನೆಲೆಯನ್ನು ನಾಶ ಮಾಡಿತು. ಆ ಬಳಿಕ ಭಾರತದ ಸೇನಾ ನೆಲೆಗಳ ಮೇಲೆ ದಾಳಿ ಮಾಡುವ ಪ್ರಯತ್ನ ಮಾಡಿತ್ತು. ಇದಕ್ಕೆ ಭಾರತೀಯ ಸೇನೆ ತಕ್ಕ ಪ್ರತ್ಯುತ್ತರ ನೀಡಿದೆ. ಎರಡು ದೇಶಗಳ ನಡುವೆ ಪರಿಸ್ಥಿತಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿರುವ ಹಿನ್ನಲೆ 2025ನೇ ಸಾಲಿನ ಐಪಿಎಲ್ನ ಅರ್ಧಕ್ಕೆ ನಿಲ್ಲಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ವರದಿ ಆಗಿದೆ.
ಪಂಜಾಬ್ನ ಧರ್ಮಶಾಲಾದಲ್ಲಿ ಈ ವರ್ಷದ 58ನೇ ಪಂದ್ಯ ನಡೆಯುತ್ತಿತ್ತು. 10.1 ಓವರ್ಗೆ ಫ್ಲಡ್ಲೈಟ್ ಸಮಸ್ಯೆ ಆಯಿತು. ಆ ಬಳಿಕ ಭದ್ರತಾ ಕಾರಣದಿಂದ ಮ್ಯಾಚ್ನ ರದ್ದು ಮಾಡಲಾಯಿತು. ಏಕಾಏಕಿ ಎಲ್ಲರನ್ನೂ ಕಳುಹಿಸಲಾಯಿತು.ಇದು ಮುಂದಿನ ಪಂದ್ಯಗಳ ಮೇಲೂ ಪರಿಣಾಮ ಬೀರಲಿದೆ ಎಂದು ಹೇಳಲಾಗಿತ್ತು. ಅಂತೆಯೇ ಬಿಸಿಸಿಐ ಇಂದು (ಮೇ 9) ಮಹತ್ವದ ಸಭೆ ನಡೆಸಿ ಪಂದ್ಯವನ್ನು ರದ್ದು ಮಾಡುವ ನಿರ್ಧಾರ ತೆಗೆದುಕೊಂಡಿದೆ ಎನ್ನಲಾಗಿದೆ.