newsics.com
ಇಸ್ಲಾಮಾಬಾದ್ :ಪಾಕಿಸ್ತಾನದ ಪುಂಡಾಟಿಕೆಗೆ ಭಾರತ ತಕ್ಕ ಉತ್ತರ ನೀಡುತ್ತಿದೆ. ಭಾರತದವರ ಡ್ರೋನ್ ದಾಳಿಗೆ ಪಾಕ್ ತತ್ತರಿಸಿದೆ. ಇದೀಗ ಭಾರತ ಮತ್ತು ಪಾಕಿಸ್ತಾನದ ಮಧ್ಯೆ ನಡೆಯುತ್ತಿರುವ ದಾಳಿಯು ಕ್ರಿಕೆಟ್ ಆಟದ ಮೇಲೆ ಪರಿಣಾಮ ಬಿದ್ದಿದೆ.
ಪಾಕಿಸ್ತಾನದಲ್ಲಿ ನಡೆಯುತ್ತಿರುವ ಪಾಕಿಸ್ತಾನ ಸೂಪರ್ ಲೀಗ್ ನ ಉಳಿದ ಕ್ರಿಕೆಟ್ ಪಂದ್ಯಗಳನ್ನು ಯುನೈಟೆಡ್ ಅರಬ್ ಎಮಿರೇಟ್ಸ್ ಗೆ ಸ್ಥಳಾಂತರಿಸಲಾಗಿದೆ.ಮೇ 8 ರಂದು ರಾವಲ್ಪಿಂಡಿ ಕ್ರೀಡಾಂಗಣವು ಡ್ರೋನ್ ದಾಳಿಯಿಂದ ಹಾನಿಗೊಳಗಾದ ಹಿನ್ನೆಲೆ ಪಿಎಸ್ಎಲ್ ಪಂದ್ಯಗಳು ದುಬೈಗೆ ಶಿಫ್ಟ್ ಆಗಿವೆ.
ಭಾರತದ ಐಪಿಎಲ್ ಮಾದರಿಯಲ್ಲಿ ನಡೆಯುವ ಪಿಎಸ್ಎಲ್ ಟಿ-20 ಲೀಗ್ನಲ್ಲಿ ಆರು ಫ್ರಾಂಚೈಸಿಗಳಿವೆ. ಮೇ 18 ರಂದು ಲಾಹೋರ್‌ನಲ್ಲಿಈ ಟೂರ್ನಿ ಮುಕ್ತಾಯಗೊಳ್ಳಲಿದೆ. ಪ್ರಸ್ತುತ ರಾವಲ್ಪಿಂಡಿ ಕ್ರೀಡಾಂಗಣದಲ್ಲಿ ಟೂರ್ನಿಯ ಪಂದ್ಯಗಳು ನಡೆಯಬೇಕಿತ್ತು. ಇಂದು (ಗುರುವಾರ) ರಾತ್ರಿ ಕರಾಚಿ ಕಿಂಗ್ಸ್ ಮತ್ತು ಪೇಶಾವರ್ ಝಲ್ಮಿ ನಡುವೆ ಪಂದ್ಯವೂ ಇತ್ತು. ಆದರೆ, ಭಾರತೀಯ ಸೇನೆ ಸಿಡಿಸಿದ ಕ್ಷಿಪಣಿಯು ಕ್ರೀಡಾಂಗಣದ ಮೇಲೆ ಬಿದ್ದಿದ್ದು, ಪಂದ್ಯವನ್ನೇ ರದ್ದು ಮಾಡಲಾಗಿದೆ.
ರಾವಲ್ಪಿಂಡಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ಗುರುವಾರ ಸಂಜೆ ನಿಗದಿಯಾಗಿದ್ದ ಪೇಶಾವರ್ ಝಲ್ಮಿ ಮತ್ತು ಕರಾಚಿ ಕಿಂಗ್ಸ್ ನಡುವಿನ ಪಂದ್ಯವನ್ನು ಭಾರತೀಯ ಸಶಸ್ತ್ರ ಪಡೆಗಳು ರಾವಲ್ಪಿಂಡಿ ಸೇರಿದಂತೆ ಪಾಕಿಸ್ತಾನದ ಹಲವಾರು ಸ್ಥಳಗಳಲ್ಲಿ ವಾಯು ರಕ್ಷಣಾ ರಾಡಾರ್‌ಗಳು ಮತ್ತು ವ್ಯವಸ್ಥೆಗಳ ಮೇಲೆ ದಾಳಿ ಮಾಡಿದ ನಂತರ ರದ್ದುಗೊಳಿಸಲಾಯಿತು.