newsics.com
ಆಪರೇಷನ್ ಸಿಂಧೂರ ಸಮರದ ಮಧ್ಯೆ ಪಾಕಿಸ್ತಾನ ಗಡಿಯಲ್ಲಿ ಭಾರತದ ಮೇಲೆ ದಾಳಿ ಮಾಡುವ ದುಸ್ಸಾಹಸದಲ್ಲಿದೆ. ಜಮ್ಮು ವಿಮಾನ ನಿಲ್ದಾಣದ ಬಳಿ ಪಾಕ್ ಡ್ರೋನ್‌ಗಳ ಮೂಲಕ ದಾಳಿ ಮಾಡಲು ಯತ್ನಿಸಿದೆ. ಪಾಕಿಸ್ತಾನದ 8 ಮಿಸೈಲ್‌ಗಳನ್ನ ಭಾರತ ಹೊಡೆದುರುಳಿಸಿದೆ ಅನ್ನೋ ವರದಿಯಾಗಿದೆ. ಪಹಲ್ಗಾಮ್ ದಾಳಿಯಿಂದ ಇಡೀ ಜಗತ್ತಿನ ಮೂ
ಲೆ ಮೂಲೆಯಿಂದ ಉಗಿಸಿಕೊಂಡ ಬಳಿಕವೂ ಪಾಕಿಸ್ತಾನ ತನ್ನ ಹಳೇಚಾಳಿಯನ್ನು ಮುಂದುವರಿಸಿದ್ದು, ಪಾಕಿಸ್ತಾನ ಕೆರಳಿಸಿದ್ದಕ್ಕೆ ಭಾರತೀಯ ಸೇನೆ ಮುಟ್ಟಿ ನೋಡಿಕೊಳ್ಳುವಂತೆ ಉತ್ತರ ನೀಡಿದೆ.
ಇಸ್ಲಾಮಾಬಾದ್‌ನಲ್ಲಿ, ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಮತ್ತು ಸೇನಾ ಮುಖ್ಯಸ್ಥ ಜನರಲ್ ಅಸಿಮ್ ಮುನೀರ್ ನಿವಾಸಗಳ ಬಳಿ ಸ್ಫೋಟಗಳು ಸಂಭವಿಸಿದೆ. ಪಾಕಿಸ್ತಾನದ ಲಾಹೋರ್‌ನಲ್ಲಿ, ವಿಶೇಷವಾಗಿ ವಾಲ್ಟನ್ ವಿಮಾನ ನಿಲ್ದಾಣ ಮತ್ತು ನಗರದ ಕಂಟೋನ್ಮೆಂಟ್ ಪ್ರದೇಶದ ಬಳಿ ಬಹು ಸ್ಫೋಟಗಳು ಸಂಭವಿಸಿರುವ ವರದಿಗಳಾಗಿವೆ.
ಪ್ರಧಾನಿ ಶೆಹಬಾಜ್ ಷರೀಫ್ ಮನೆ ಬಳಿಯೇ ಡ್ರೋಣ್ ದಾಳಿಯಾಗಿದ್ದು ಆತಂಕ ಸೃಷ್ಟಿಸಿದೆ.ಪಾಕಿಸ್ತಾನ ಸರ್ಕಾರ ಸ್ಫೋಟಗಳ ಮೂಲವನ್ನು ದೃಢಪಡಿಸಿಲ್ಲ. ಭಾರತದ ಇತ್ತೀಚಿನ ವೈಮಾನಿಕ ದಾಳಿಗಳಿಗೆ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಪ್ರಧಾನಿ ಷರೀಫ್ ಪ್ರತಿಜ್ಞೆ ಮಾಡಿದ ಸ್ವಲ್ಪ ಸಮಯದ ನಂತರ ಈ ಘಟನೆ ನಡೆದಿದೆ.