Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > Chaitra kunadapur marriage ನಾಳೆ ಚೈತ್ರಾ ಕುಂದಾಪುರ ಮದುವೆ: ಹುಡುಗ ಯಾರು? ಮೆಹಂದಿ ವಿಡಿಯೋದಲ್ಲಿ ಹೇಳಿದ್ದೇನು?
ಕರ್ನಾಟಕಪ್ರಮುಖಮನರಂಜನೆ

Chaitra kunadapur marriage ನಾಳೆ ಚೈತ್ರಾ ಕುಂದಾಪುರ ಮದುವೆ: ಹುಡುಗ ಯಾರು? ಮೆಹಂದಿ ವಿಡಿಯೋದಲ್ಲಿ ಹೇಳಿದ್ದೇನು?

Share
2 Min Read
SHARE

newsics.com

ಬಿಗ್ ಬಾಸ್ ಕನ್ನಡ 11 ರಿಯಾಲಿಟಿ ಶೋ ಸ್ಪರ್ಧಿ ಚೈತ್ರಾ ಕುಂದಾಪುರ ನಾಳೆ (ಮೇ 9) ವೈವಾಹಿಕ ಜೀವನಕ್ಕೆ ಕಾಲಿರಿಸಲಿದ್ದಾರೆ.

ವಂಚನೆ ವಿವಾದಕ್ಕೆ ಸಿಲುಕಿದ ಬಳಿಕ ಬಿಗ್ ಬಾಸ್ ರಿಯಾಲಿಟಿ ಶೋಗೆ ಎಂಟ್ರಿ ಕೊಟ್ಟು ಮತ್ತೆ ತಮ್ಮ ಜನಪ್ರಿಯತೆ ಹೆಚ್ಚಿಸಿಕೊಂಡಿದ್ದಾರೆ. ಸದ್ಯ ರಾಜಕೀಯ, ಭಾಷಣಗಳಿಂದ ದೂರ ಉಳಿದಿರುವ ಚೈತ್ರಾ ವೈವಾಹಿಕ ಜೀವನಕ್ಕೆ ಕಾಲಿಡಲು ಸಜ್ಜಾಗುತ್ತಿದ್ದಾರೆ.

ಕಳೆದ ಕೆಲವು ದಿನಗಳಿಂದ ಚೈತ್ರಾ ಅವರ ಮನೆಯಲ್ಲಿ ಮದುವೆ ಸಂಭ್ರಮ ಮನೆ ಮಾಡಿದೆ. ಚೈತ್ರಾ ಕುಂದಾಪುರ ತನ್ನ ಬಹುದಿನಗಳ ಗೆಳೆಯನನ್ನು ವಿವಾಹವಾಗುತ್ತಿದ್ದಾರೆಂದು ಹೇಳಲಾಗುತ್ತಿದೆ.

ಕೆಲವು ದಿನಗಳ ಹಿಂದಷ್ಟೇ ಚೈತ್ರಾ ತನ್ನ ಆಪ್ತರಿಗೆ, ಸ್ನೇಹಿತರಿಗೆ, ಕಿರುತೆರೆಯ ತಾರೆಯರಿಗೆ ಆಮಂತ್ರಣ ನೀಡಿದ್ದು ಸುದ್ದಿಯಾಗಿತ್ತು.

ಸೈಲೆಂಟ್‌ ಆಗಿಯೇ ಮದುವೆಗೆ ತಯಾರಾಗಿರುವ ಚೈತ್ರಾ ಕುಂದಾಪುರ ಇದುವರೆಗೂ ತಾನು ಮದುವೆ ಆಗುತ್ತಿರುವ ಹುಡುಗನ ಬಗ್ಗೆ ಮಾಹಿತಿ ಕೊಟ್ಟಿಲ್ಲ.

ಇತ್ತೀಚೆಗಷ್ಟೇ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಮೆಹಂದಿ ಕಾರ್ಯಕ್ರಮದ ವಿಡಿಯೋ ಹಂಚಿಕೊಂಡಿದ್ದಾರೆ. ಈ ವಿಡಿಯೋ ನೋಡಿದ ಅವರ ಅಭಿಮಾನಿಗಳು, ನೆಟ್ಟಿಗರು ಶುಭಾಶಯಗಳನ್ನು ತಿಳಿಸುವುದಕ್ಕೆ ಆರಂಭಿಸಿದ್ದಾರೆ.

ಮೆಹಂದಿ ಸಂಭ್ರಮದ ವಿಡಿಯೋದಲ್ಲಿ ಚೈತ್ರಾ ಕೈ ಹಾಗೂ ಕಾಲುಗಳಲ್ಲಿ ಮೆಹಂದಿ ಚಿತ್ತಾರ ಕಾಣಬಹುದು. ಮದುವೆಯಾಗುತ್ತಿರುವ ಚೈತ್ರಾ ಮುಖದಲ್ಲಿ ಮದುಮಗಳ ಕಳೆ ಎದ್ದು ಕಾಣುತ್ತಿದೆ.

ವಿಡಿಯೋ ಪೋಸ್ಟ್‌ಗೆ ‘ಮದುವೆಯ ಮೆಹೆಂದಿ’ ಟೈಟಲ್ ಕೊಟ್ಟು, ಮೆಹಂದಿಯ ಸಂಪ್ರದಾಯದ ಪ್ರಾಮುಖ್ಯತೆ ವಿವರಿಸಿದ್ದಾರೆ.

‘ತ್ರೇತಾಯುಗದಲ್ಲಿ ಶ್ರೀರಾಮ, ಲಕ್ಷ ಣ, ಭರತ ಮತ್ತು ಶತ್ರುಘ್ನರ ವಿವಾಹದ ಸಮಯದಲ್ಲಿ ಅವರನ್ನು ಸಿಂಗರಿಸಲು ಅವರ ಕೈ, ಕಾಲು, ಹಾಗೆಯೇ ಮುಖದ ಮೇಲೆ ಪಾಷಾಣಬಣ್ಣ (ವಿವಿಧ ಬಣ್ಣದ ಕಲ್ಲುಗಳಿಂದ ತಯಾರಿಸಿದ ಬಣ್ಣ) ಮತ್ತು ಪುಷ್ಪಬಣ್ಣ (ವಿವಿಧ ಬಣ್ಣದ ಹೂವುಗಳಿಂದ ತಯಾರಿಸಿದ ಬಣ್ಣ) ಗಳ ಸಹಾಯದಿಂದ ಎಲೆ-ಹೂವು ಮುಂತಾದ ಆಕಾರಗಳನ್ನು ಬಿಡಿಸಲಾಗಿತ್ತು. ಈ ಬಣ್ಣಗಳಲ್ಲಿ ವಿವಿಧ ಔಷಧೀಯ ವನಸ್ಪತಿಗಳ ರಸಗಳನ್ನು ಬೆರೆಸಲಾಗಿತ್ತು. ಈ ಸುಗಂಧಿ ಮಿಶ್ರಣಕ್ಕೆ ‘ಪತ್ರಾವಲೀ’ ಎಂದು ಹೇಳುತ್ತಿದ್ದರು. (‘ಭುಶುಂಡೀ ರಾಮಾಯಣ’ ಮತ್ತು ‘ಶ್ರೀನಾಥಮುನಿ ರಾಮಾಯಣ’) ದ್ವಾಪರಯುಗದಲ್ಲಿಯೂ ಸಿಂಗಾರಕ್ಕಾಗಿ ‘ಪತ್ರಾವಲೀ’ಯನ್ನು ಉಪಯೋಗಿಸಲಾಗುತ್ತಿತ್ತು. ‘ತೋಕ’ ಎಂಬ ಹೆಸರಿನ ಶ್ರೀಕೃಷ್ಣನ ಮಿತ್ರನು ‘ಪತ್ರಾವಲೀ’ಯಿಂದ ಶ್ರೀಕೃಷ್ಣನನ್ನು ಸಿಂಗರಿಸುತ್ತಿದ್ದನು’ ಎಂದು ‘ಗರ್ಗಸಂಹಿತೆ’, ‘ಶ್ರೀಮದ್ಭಾಗವತ’, ‘ಶ್ರೀಕೃಷ್ಣಕರ್ಣಾಮೃತ’ ಮುಂತಾದ ಶ್ರೀಕೃಷ್ಣನ ಬಗೆಗಿನ ಪ್ರಮುಖ ಗ್ರಂಥಗಳಲ್ಲಿ ಉಲ್ಲೇಖಿಸಿರುವುದು ಕಂಡುಬರುತ್ತದೆ. ಆ ಸಮಯದಲ್ಲಿ ಶ್ರೀಕೃಷ್ಣನ ಗೋವುಗಳನ್ನೂ ‘ಪತ್ರಾವಲಿ’ಯಿಂದ ಸಿಂಗರಿಸಲಾಗುತ್ತಿತ್ತು.

ಮದರಂಗಿ ಕೇವಲ ಬಣ್ಣವಲ್ಲ ಅದು ಸಂಸ್ಕೃತಿಯ ಕೈಗನ್ನಡಿ ಎಂದು ವಿಡಿಯೋ ಶೇರ್ ಮಾಡುವುದರ ಜತೆಗೆ ಮಾಹಿತಿಯನ್ನೂ ನೀಡಿದ್ದಾರೆ.
ಚೈತ್ರಾ ಕುಂದಾಪುರ ಸುಮಾರು 12 ವರ್ಷಗಳಿಂದ ಪ್ರೀತಿಸುತ್ತಿದ್ದ ಹುಡುಗನೊಂದಿಗೆ ಸಪ್ತಪದಿ ತುಳಿಯುತ್ತಿದ್ದಾರೆಂದು ಹೇಳಲಾಗಿದೆ.

ಚೈತ್ರಾ ತಮ್ಮ ಮದುವೆಗೆ ಕೇವಲ ತಮ್ಮ ಕುಟುಂಬಸ್ಥರಿಗೆ, ಆಪ್ತರಿಗೆ ಹಾಗೂ ಬಿಗ್‌ ಬಾಸ್ ಕನ್ನಡ 11ರ ಸ್ಪರ್ಧಿಗಳು ಹಾಗೂ ಬಾಯ್ಸ್ Vs ಗರ್ಲ್ಸ್ ಶೋನ ಸ್ನೇಹಿತರಿಗಷ್ಟೇ ಆಹ್ವಾನ ನೀಡಿದ್ದಾರೆಂದು ಹೇಳಲಾಗುತ್ತಿದೆ.

https://www.instagram.com/reel/DJYQB_gICb9/?igsh=ejMxaTlhMWljZTVj

Ramya Pashupileti ಹಾಟ್ ಅವತಾರದಲ್ಲಿ ಪಡ್ಡೆಗಳ ಮನಗೆದ್ದ ನಟಿ ರಮ್ಯಾ ಪಶುಪಿಲೇತಿ

TAGGED:#Chaitra Kundapur #wedding #tomorrow #mehndi #video #entertainment #news #newsics
Share This Article
Facebook Twitter Copy Link Print
Previous Article India-Pakistan ನಿಷೇಧದ ಹೊಡೆತಕ್ಕೆ ಕಂಗೆಟ್ಟ ಪಾಕ್ – ಭಾರತದಲ್ಲಿ ಪಾಕಿಸ್ತಾನದ ಸಿನಿಮಾ, ವೆಬ್ ಸಿರೀಸ್ ನಿಷೇಧಿಸಿದ ಕೇಂದ್ರ
Next Article RAJNATH SINGH ಉಗ್ರರ ವಿರುದ್ಧ ಆಪರೇಷನ್ ಸಿಂಧೂರ ಇನ್ನೂ ಮುಗಿದಿಲ್ಲ – ರಾಜನಾಥ್ ಸಿಂಗ್ ಮಹತ್ವದ ಹೇಳಿಕೆ

Popular Posts

ಗ್ಯಾಸ್ ಸಿಲಿಂಡರ್ ಲೀಕ್ ಆದಾಗ ಜೀವ ಉಳಿಸೋ ತಂತ್ರಗಳು ಯಾವುದು ಗೊತ್ತಾ?

1 Min Read

ಶಾಕಿಂಗ್: ಪೊಲೀಸ್ ಜೀಪ್‌ನಲ್ಲೇ ಬಂದು ಉದ್ಯಮಿಗಳಿಂದ ₹20 ಲಕ್ಷ ದೋಚಿದ ಸಿಐಡಿ ಇನ್ಸ್‌ಪೆಕ್ಟರ್!

1 Min Read

Emotional Elephant ಒಡತಿಯ ನೋವನ್ನೂ ಹಂಚಿಕೊಂಡ ಗಜರಾಜ! ಕುಂಟುತ್ತಾ ನಡೆದ ಮಹಿಳೆಯನ್ನು ಅನುಕರಿಸಿದ ಆನೆ ವೈರಲ್, ವಿಡಿಯೋ ನೋಡಿ

1 Min Read

ಟಿ20 ಕ್ರಿಕೆಟ್ ಇತಿಹಾಸದಲ್ಲೇ ಸ್ಮೃತಿ ಮಂದಾನಗೆ ಸಾಟಿಯಿಲ್ಲ! ಪುರುಷ-ಮಹಿಳಾ ಕ್ರಿಕೆಟ್‌ನಲ್ಲಿ ಯಾರೂ ಮಾಡದ ವಿಶ್ವ ದಾಖಲೆ

2 Min Read

You Might Also Like

ಕರ್ನಾಟಕಪ್ರಮುಖ

ಪರಿಷತ್ ಚುನಾವಣೆ ಮೂಲಕ ಬಿಜೆಪಿ ವರಿಷ್ಠರಿಗೆ ಡಿಕೆ ಶಿವಕುಮಾರ್ ಸಾರಿದ್ದೇನು?

3 Min Read
ಪ್ರಮುಖ

ಟಿ20 ವಿಶ್ವಕಪ್‌ ಟೂರ್ನಿಯಿಂದ ಕನ್ನಡತಿ ಶ್ರೇಯಾಂಕಾ ಪಾಟೀಲ್ ಔಟ್‌

3 Min Read
ಪ್ರಮುಖ

ಚಿನ್ನದ ಬೆಲೆ ಭಾರಿ ಇಳಿಕೆ: ಇಂದಿನ ಗೋಲ್ಡ್ ರೇಟ್ ಎಷ್ಟು?

1 Min Read
ಪ್ರಮುಖ

‘ಟೆಲಿಗ್ರಾಂ’ ನಿಷೇಧಿಸಿದ ಸರ್ಕಾರದ ಆದೇಶ ಎತ್ತಿಹಿಡಿದ ದೆಹಲಿ ಹೈಕೋರ್ಟ್!

2 Min Read

Social Networks

Facebook-f Instagram Twitter
Welcome Back!

Sign in to your account

Lost your password?