newsics.com
ಪಾಟ್ನಾ: ಪಹಲ್ಗಾಮ್‌ನಲ್ಲಿ ಉಗ್ರರ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸೇನೆ ‘ಆಪರೇಷನ್ ಸಿಂಧೂರ’ ಕೈಗೊಂಡು ಪಾಕಿಸ್ತಾನದ ಉಗ್ರರ 9 ನೆಲೆಗಳ ಮೇಲೆ ದಾಳಿ ನಡೆಸಿದೆ.
ಪಾಕಿಸ್ತಾನದ ಉಗ್ರರ ಮೇಲಿನ ದಾಳಿಗೆ ಆಪರೇಷನ್ ಸಿಂಧೂರ ಎನ್ನುವ ಹೆಸರು ಆಯ್ಕೆ ಮಾಡಿರುವುದು ಪ್ರಧಾನಿ ನರೇಂದ್ರ ಮೋದಿ. ಇದೀಗ ಭಾರತೀಯ ಸೇನೆ ಪಾಕಿಸ್ತಾನದಲ್ಲಿ ‘ಆಪರೇಷನ್ ಸಿಂಧೂರ’ ಪ್ರಾರಂಭಿಸಿದ ದಿನವೇ ಬಿಹಾರದ ಕತಿಹಾರ್‌ನಲ್ಲಿರುವ ನರ್ಸಿಂಗ್ ಹೋಂನಲ್ಲಿ ಹೆಣ್ಣು ಮಗು ‘ಆಪರೇಷನ್ ಸಿಂಧೂರ’ ಕಾರ್ಯಾಚರಣೆ ದಿನವೇ ಜನಿಸಿದ ಹಿನ್ನೆಲೆ ‘ಸಿಂಧೂರ’ ಎಂದು ಹೆಸರಿಟ್ಟು ಗೌರವ ಸಮರ್ಪಣೆ ಮಾಡಿದ್ದಾರೆ.
ತನ್ನ ಮಗುವಿಗೆ ‘ಸಿಂಧೂರ’ ಎಂದು ಹೆಸರಿಡೋದಕ್ಕೆ ಭಾರತೀಯ ಸೇನೆಯ ಆಪರೇಷನ್ ಸಿಂಧೂರವೇ ನನಗೆ ಪ್ರೇರಣೆ ಎಂದು ತಂದೆ ಭಾವುಕರಾಗಿದ್ದಾರೆ.