Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಲೈಫ್‌ಸ್ಟೈಲ್ > Genetic Blood Disorder ಮದುವೆ ಮುಂಚೆ ಹುಡುಗ-ಹುಡುಗಿ ಈ ಪರೀಕ್ಷೆ ಮಾಡಿಸಿಕೊಳ್ಳಬೇಕಂತೆ
ಲೈಫ್‌ಸ್ಟೈಲ್

Genetic Blood Disorder ಮದುವೆ ಮುಂಚೆ ಹುಡುಗ-ಹುಡುಗಿ ಈ ಪರೀಕ್ಷೆ ಮಾಡಿಸಿಕೊಳ್ಳಬೇಕಂತೆ

Share
1 Min Read
SHARE

ಸಾಮಾನ್ಯವಾಗಿ ಮದುವೆಗೂ ಮುನ್ನ ಕುಂಡಲಿ ಹೋಲಿಕೆಯ ಜೊತೆಗೆ ವಿದ್ಯಾಭ್ಯಾಸ, ನೌಕರಿ, ಮನೆ-ಕುಟುಂಬ ಹಾಗೂ ಆಸ್ತಿ-ಪಾಸ್ತಿಗಳ ಬಗ್ಗೆ ವಿಚಾರಿಸಲಾಗುತ್ತದೆ. ಆದರೆ, ಮದುವೆಗೂ ಮುನ್ನ ವೈದ್ಯಕೀಯ ಪರೀಕ್ಷೆಗಳನ್ನು ಕೂಡ ಮಾಡಿಸಬೇಕು ಎಂಬುದು ನಿಮಗೆ ತಿಳಿದಿದೆಯೇ? ಹೌದು, ವೈವಾಹಿಕ ಜೀವನ ಸುಖಮಯದಿಂದಿರಬೇಕು , ವಿವಾಹಕ್ಕೂ ಮುನ್ನ ಎಲ್ಲರೂ ಕೂಡ ಕೆಲ ಪರೀಕ್ಷೆಗಳನ್ನು ನಡೆಸಲೇಬೇಕು. ಮದುವೆಗೂ ಮುನ್ನ ವೈದ್ಯಕೀಯ ಪರೀಕ್ಷೆಗಳನ್ನು ನಡೆಸುವುದರಿಂದ ಆನುವಂಶಿಕ ಕಾಯಿಲೆಗಳು ಪತ್ತೆಯಾಗುತ್ತವೆ ಮತ್ತು ಸಮಯ ಇರುವಾಗಲೇ ಅವುಗಳ ಚಿಕಿತ್ಸೆಯನ್ನು ಕೂಡ ಪಡೆದುಕೊಳ್ಳಬಹುದು. ಹಾಗಾದರೆ ಬನ್ನಿ ಮದುವೆಗೂ ಮುನ್ನ ಯಾವ ಯಾವ ಪರೀಕ್ಷೆಗಳನ್ನು ಮಾಡಿಸಿಕೊಳ್ಳಬೇಕು ತಿಳಿದುಕೊಳ್ಳೋಣ ಬನ್ನಿ,

ಮದುವೆಗೆ ಮುಂಚೆ ಥಲಸ್ಸೆಮಿಯಾ ಪರೀಕ್ಷೆ ಮಾಡಿಸಿಕೊಳ್ಳುವುದು ಅವಶ್ಯಕ. ಇದು ಆನುವಂಶಿಕ ಕಾಯಿಲೆಯಾಗಿದ್ದು, ಮಕ್ಕಳಿಗೆ ತೀವ್ರ ಸಮಸ್ಯೆ ಉಂಟು ಮಾಡಬಹುದು.ಥಲಸ್ಸೆಮಿಯಾ ನಿಮ್ಮ ಭವಿಷ್ಯದ ಮಕ್ಕಳಲ್ಲಿ ಜನ್ಮ ದೋಷಗಳನ್ನು ಉಂಟುಮಾಡಬಹುದು. ಹೀಗಾಗಿ, ನೀವು ಮದುವೆಯಾಗುವ ಮೊದಲು ಥಲಸ್ಸೆಮಿಯಾ ಪರೀಕ್ಷೆಯನ್ನು ಮಾಡಿಸಿಕೊಳ್ಳಬೇಕು.

ಥಲಸ್ಸೆಮಿಯಾ ಒಂದು ಗಂಭೀರ ಆನುವಂಶಿಕ ಕಾಯಿಲೆಯಾಗಿದ್ದು, ಇದರಲ್ಲಿ ದೇಹವು ಸಾಕಷ್ಟು ಹಿಮೋಗ್ಲೋಬಿನ್ ಉತ್ಪಾದಿಸುವುದಿಲ್ಲ. ಹಿಮೋಗ್ಲೋಬಿನ್ ಕೊರತೆಯಿಂದಾಗಿ, ಆಮ್ಲಜನಕದ ಪೂರೈಕೆಗೆ ತೊಂದರೆ ಆಗುತ್ತದೆ. ಇದು ಕೆಂಪು ರಕ್ತ ಕಣಗಳ ಬೆಳವಣಿಗೆ ಮತ್ತು ಕಾರ್ಯವನ್ನು ಕುಂಠಿತಗೊಳಿಸುತ್ತದೆ. ಚಿಕ್ಕ ಮಕ್ಕಳಲ್ಲಿ ಇದರ ಪರಿಣಾಮ ತುಂಬಾ ತೀವ್ರವಾಗಿರುತ್ತದೆ.

ಥಲಸ್ಸೆಮಿಯಾ ಕುರಿತು ಕೆಲಸ ಮಾಡುತ್ತಿರುವ ಸ್ವಯಂಸೇವಾ ರಕ್ತದಾನಿಗಳ ಸಂಘದ ಅಧ್ಯಕ್ಷ ನಿರ್ಮಲ್ ಜೈನ್, ಕಳೆದ ಎರಡು ದಶಕಗಳಿಂದ ಥಲಸ್ಸೆಮಿಯಾ ಪೀಡಿತ ಮಕ್ಕಳಿಗೆ ರಕ್ತ ಪೂರೈಸುತ್ತಿದ್ದೇವೆ ಮತ್ತು ಮೂಳೆ ಮಜ್ಜೆಯ ಕಸಿ ಶಸ್ತ್ರಚಿಕಿತ್ಸೆಗೆ ಸಹಾಯ ಮಾಡುತ್ತಿದ್ದೇವೆ ಎಂದು ಹೇಳಿದರು. ಈ ಪ್ರಕ್ರಿಯೆಯಲ್ಲಿ ಮಕ್ಕಳು ಮತ್ತು ಅವರ ಕುಟುಂಬಗಳು ಥಲಸ್ಸೆಮಿಯಾದಿಂದ ಹೆಚ್ಚಾಗಿ ಬಳಲುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಭಾರತದಲ್ಲಿ 40 ಲಕ್ಷ ಜನರು ಥಲಸ್ಸೆಮಿಯಾದಿಂದ ಬಳಲುತ್ತಿದ್ದಾರೆ. ಅವರಲ್ಲಿ ಹಲವರು ಚಿಕ್ಕ ಮಕ್ಕಳಾಗಿದ್ದಾರೆ. ಜೊತೆಗೆ ಸುಮಾರು 1 ಲಕ್ಷ ಗಂಭೀರ ಪ್ರಕರಣಗಳು ವರದಿಯಾಗಿವೆ. ಪ್ರತಿ ವರ್ಷ ಮೇ 8 ರಂದು ವಿಶ್ವ ಥಲಸ್ಸೆಮಿಯಾ ದಿನವನ್ನು ಆಚರಿಸಲಾಗುತ್ತದೆ. ಇದರೊಂದಿಗೆ, ರಕ್ತದಾನ ಶಿಬಿರಗಳು ಮತ್ತು ಸಂಬಂಧಿತ ಮಾಹಿತಿಯನ್ನು ಒಂದು ತಿಂಗಳ ಕಾಲ ಸಾರ್ವಜನಿಕರಿಗೆ ಪ್ರಸಾರ ಮಾಡಲಾಗುತ್ತದೆ.

TAGGED:#Genetic #BloodDisorder #husbnad #wife #marrige
Share This Article
Facebook Twitter Copy Link Print
Previous Article Janardhana Reddy ಶಾಸಕ ಜನಾರ್ದನ ರೆಡ್ಡಿಗೆ ಮತ್ತೆ ಜೈಲೂಟ ಪಿಕ್ಸ್: ನಾಳೆ ಸಿಬಿಐನಿಂದ ಜೈಲಿಗೆ ಸ್ಥಳಾಂತರ
Next Article ಹೆಂಡತಿ ಮೇಲೆ ಹಿಡಿತ ಸಾಧಿಸಲು ಹೋಗಿ ಜೈಲು ಸೇರಿದ ಗಂಡಂದಿರು

Popular Posts

Sexual assault on a girl! ಈ ಯುವತಿಗೆ ಪುರುಷರಾರೂ ಸಿಗಲಿಲ್ವಾ? 12ರ ಬಾಲಕಿ‌ಗೆ ಲೈಂಗಿಕ ದೌರ್ಜನ್ಯ!

2 Min Read

I am not gay ನಾನೇನು ಗೇ ಅಲ್ಲ, ದಿಶಾ ನನ್ನ ಸ್ನೇಹಿತೆ ಅಷ್ಟೆ ಎಂದ ನಟಿ ಮೌನಿ

1 Min Read

Attacked government employee ಸರ್ಕಾರಿ ಉದ್ಯೋಗಿ ಮೇಲೆ ಹಲ್ಲೆ, ಯುವತಿ ಸ್ಥಿತಿ ಗಂಭೀರ, ವಿಡಿಯೋ ನೋಡಿ

1 Min Read

ತಕ್ಷಣ ಮದುವೆಯಾಗಲು ನಿರಾಕರಿಸಿದ ಪ್ರೇಯಸಿಯನ್ನು ಇರಿದು ಕೊಂದ ಪ್ರಿಯಕರ

1 Min Read

You Might Also Like

ಪ್ರಮುಖಲೈಫ್‌ಸ್ಟೈಲ್

Snake Species ಈ ವಸ್ತುಗಳ ವಾಸನೆ ಬಂದರೆ ಹಾವುಗಳು ಮನೆಯ ಸುತ್ತ ಸುಳಿವುದಿಲ್ಲ

2 Min Read
ಪ್ರಮುಖಲೈಫ್‌ಸ್ಟೈಲ್

Washing Machine ವಾಷಿಂಗ್ ಮಷಿನ್​ನಲ್ಲಿ ಈ ವಸ್ತು ಒಗೆಯಬೇಡಿ

4 Min Read
ಪ್ರಮುಖಆರೋಗ್ಯ

40 ವರ್ಷಕ್ಕಿಂತ ಮೊದಲೇ ಮುಟ್ಟು ನಿಂತ್ರೆ ಈ ಅಪಾಯ ಹೆಚ್ಚು

2 Min Read
ಕರ್ನಾಟಕಆರೋಗ್ಯದೇಶಪ್ರಮುಖರಿಲೇಷನ್‌ಶಿಪ್ಲೈಫ್‌ಸ್ಟೈಲ್

Personal Health ಕಡಿಮೆ, ಕಳಪೆ ನಿದ್ದೆಯಿಂದ ಬೇಗ ಮುದುಕರಾಗ್ತೀರಿ! ಲೈಂಗಿಕತೆ ಮೇಲೆ ನೇರ ಪರಿಣಾಮ, ಮಕ್ಕಳಾಗದಿರಬಹುದು

3 Min Read

Social Networks

Facebook-f Instagram Twitter
Welcome Back!

Sign in to your account

Lost your password?