newsics.com
ಬೆಳಗಾವಿ : ಕೃಷಿ ಹೊಂಡದಲ್ಲಿ ಮುಳುಗಿ ಮೂವರು ಮಕ್ಕಳು ಮೃತಪಟ್ಟಿರುವ ಘಟನೆ ಚಿಕ್ಕೋಡಿ ತಾಲೂಕಿನ ಇಂಗಳಿ ಗ್ರಾಮದ ಜಮೀನಿನಲ್ಲಿ ನಡೆದಿದೆ. ಮೃತರನ್ನು ಪೃಥ್ವಿರಾಜ್ ಕೆರಬಾ (13), ಅಥರ್ವ ಸೌಂದಲಗೆ (15), ಸಮರ್ಥ ಗಡಕರಿ (13) ಎಂದು ಗುರುತಿಸಲಾಗಿದೆ.
ಈಜು ಬಾರದೇ ಇದ್ದರೂ ಮಕ್ಕಳು ಸೈಕಲ್ ತೆಗೆದುಕೊಂಡು ಊರ ಹೊರಗಿನ ಕೃಷಿ ಹೊಂಡಕ್ಕೆ ಹೋಗಿದ್ದಾರೆ. ಮೂವರು ಮಕ್ಕಳಿಗೆ ಈಜಲು ಬರುತ್ತಿರಲಿಲ್ಲ, ಆದರೂ ಕೂಡ ನೀರಿಗೆ ಇಳಿದಿದ್ದಾರೆ.