newsics.com
ನಟಿ ಹರ್ಷಿಕಾ ಪೂಣಚ್ಚ ಹಾಗೂ ಭುವನ್ ಪೊನ್ನಣ್ಣ ಅವರು ಮುದ್ದಾದ ಹೆಣ್ಣು ಮಗುವಿನ ಜನನವಾಗಿದೆ. ಇದೀಗ ಈ ಜೋಡಿ ತಮ್ಮ ಮಗುವಿನ ನಾಮಕರಣ ಮಾಡಿದ್ದು, ಮಗುವಿಗೆ ಶ್ರೀದೇವಿ ಪೊನ್ನಕ್ಕ ಎಂದು ಹೆಸರಿಟ್ಟಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಫೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ.
2024 ರಲ್ಲಿ ನಟಿ ಹರ್ಷಿಕಾ ಪೂಣಚ್ಚ ತಾವು ತಾಯಿಯಾಗುತ್ತಿರುವ ವಿಷಯ ಘೋಷಿಸಿದರು. ಬಳಿಕ ಗರ್ಭಿಣಿ ಆಗಿದ್ದಾಗ ಕೊಡವ ಶೈಲಿಯಲ್ಲಿ ಫೋಟೊಶೂಟ್ ಸಹ ಮಾಡಿಸಿ ಗಮನ ಸೆಳೆದರು. ನಟಿಯ ಸೀಮಂತ ಕಾರ್ಯಕ್ರಮವನ್ನು ಸಹ ಅದ್ಧೂರಿಯಾಗಿ ಮಾಡಲಾಗಿತ್ತು. ಚಿತ್ರರಂಗದ ಹಲವು ಸೆಲೆಬ್ರಿಟಿಗಳು, ಹರ್ಷಿಕಾ, ಭುವನ್ ಅವರ ಗೆಳೆಯರು ಕುಟುಂಬದವರು ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದರು. ಬಳಿಕ 2024ರ ಸೆಪ್ಟೆಂಬರ್ ತಿಂಗಳಲ್ಲಿ ಈ ಜೋಡಿಗೆ ಮುದ್ದಾದ ಹೆಣ್ಣು ಮಗು ಜನಿಸಿತು.
ತಮ್ಮ ಮಗುವಿನ ಶ್ರೀದೇವಿ ಪೊನ್ನಕ್ಕ ಎಂದು ಹೆಸರಿಟ್ಟಿದ್ದಾರೆ. ಇದರ ಅರ್ಥ ಹಿಂದೂ ಧರ್ಮದಲ್ಲಿ, “ತ್ರಿದೇವಿ” ಎಂದರೆ ಮೂರು ಪ್ರಮುಖ ದೇವತೆಯರಾದ ಸರಸ್ವತಿ, ಲಕ್ಷ್ಮಿ ಮತ್ತು ಪಾರ್ವತಿ (ಅಥವಾ ದುರ್ಗಾ). ಇವರು ತ್ರಿಮೂರ್ತಿಗಳ (ಬ್ರಹ್ಮ, ವಿಷ್ಣು, ಶಿವ) ಪತ್ನಿಯರಾಗಿದ್ದಾರೆ ಮತ್ತು ಕ್ರಮವಾಗಿ ಜ್ಞಾನ, ಸಂಪತ್ತು/ಸಮೃದ್ಧಿ ಮತ್ತು ಶಕ್ತಿ/ಪ್ರೀತಿಯನ್ನು ಪ್ರತಿನಿಧಿಸುತ್ತಾರೆ.
ತ್ರಿದೇವಿ = “ತ್ರಿ” ಏಕೆಂದರೆ ಅವಳ ಜನ್ಮ ದಿನಾಂಕ ಮತ್ತು ಸಮಯದ ಪ್ರಕಾರ ಅವಳು ಬಲವಾದ ಸಂಖ್ಯೆ 3. “ದೇವಿ” ಏಕೆಂದರೆ ಅವಳು ನವರಾತ್ರಿಯ ಮೊದಲ ದಿನದಂದು ಜನಿಸಿದಳು ಮತ್ತು ದೇವಿ ಮೂಕಾಂಬಿಕೆಯಿಂದ ನಮಗೆ ದೊರೆತ ಉಡುಗೊರೆ.
ಇತ್ತೀಚೆಗೆ ಹರ್ಷಿಕಾ ಪೂಣಚ್ಚಗೆ ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಶಿಲ್ಪಾ ಜೋಡಿ ಅದ್ಧೂರಿಯಾಗಿ ಬೇಬಿ ಶವರ್ ಮಾಡಿದ್ದರು. ಗೋಲ್ಡನ್ ಸ್ಟಾರ್ ಗಣೇಶ್ ಈ ಮನೆಯಲ್ಲಿ ಈ ಪಾರ್ಟಿ ನಡೆದಿತ್ತು. ಕೊಡಗಿನಲ್ಲಿ ಸೀಮಂತ ಶಾಸ್ತ್ರ ಇಲ್ಲ. ಆದರೆ ಕನ್ನಡ ಚಿತ್ರರಂಗ ಹರ್ಷಿಕಾಗೆ ಸೀಮಂತ ಮಾಡಿತ್ತು. ಈ ಕಾರ್ಯಕ್ರಮ ಗಣೇಶ್ ಅವರ ಮನೆಯಲ್ಲಿ ನಡೆದಿತ್ತು.