newsics.com
ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಪಹಲ್ಗಾಮ್ ಭಯೋತ್ಪಾದಕ ದಾಳಿಯಿಂದ ಇಡೀ ದೇಶವೇ ಕೆಂಡ ಕಾರುತ್ತಿದೆ.ಆದರೆ ನಟ ಮಹೇಶ್ ಬಾಬು ಪುತ್ರನ ವಿಡಿಯೋ ಒಂದು ಸಂಚಲನ ಮೂಡಿಸುತ್ತಿದೆ.
ಆದರೆ ಈ ನಡುವೆ, ಟಾಲಿವುಡ್ ಸೂಪರ್‌ಸ್ಟಾರ್ ಮಹೇಶ್ ಬಾಬು ಅವರ ಪುತ್ರ ಗೌತಮ್ ಪ್ರಸ್ತುತ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಟಾಲಿವುಡ್ ಸೂಪರ್‌ಸ್ಟಾರ್ ಮಹೇಶ್ ಬಾಬು ಪುತ್ರ ಗೌತಮ್ ವಿವಾದದ ಸುಳಿಯಲ್ಲಿ ಸಿಲುಕಿದ್ದಾರೆ. ಪಾಕಿಸ್ತಾನದ ಜೆರ್ಸಿ ತೊಟ್ಟ ಯುವತಿಯೊಂದಿಗೆ ಗೌತಮ್ ಈ ಹಿಂದೆ ಹಂಚಿಕೊಂಡಿದ್ದ ವೀಡಿಯೊ ಈಗ ವೈರಲ್ ಆಗ್ತಿದ್ದು ವಿವಾದಕ್ಕೆ ನಾಂದಿ ಹಾಡಿದೆ.
ಈ ಹಿಂದೆ ನ್ಯೂಯಾರ್ಕ್ ವಿಶ್ವವಿದ್ಯಾಲಯದ ಟಿಶ್ ಸ್ಕೂಲ್ ಆಫ್ ದಿ ಆರ್ಟ್ಸ್‌ನಲ್ಲಿ ನಾಟಕ ಕಲಿಯುತ್ತಿದ್ದ ವೇಳೆ ಮಹೇಶ್ ಬಾಬು ಪುತ್ರ ಗೌತಮ್ ತನ್ನ ಸಹಪಾಠಿಯೊಂದಿಗೆ ಚಿತ್ರಿಸಿದ್ದ ವಿಡಿಯೋ ಇದಾಗಿದ್ದು, ಮನ ಸ್ಟಾರ್ಸ್ ಎಂಬ ಯೂಟ್ಯೂಬ್ ಚಾನಲ್‌ನಲ್ಲಿ ಈ ಶಾರ್ಟ್ ಫಿಲಂ ಶೇರ್ ಮಾಡಲಾಗಿದೆ.ಇದರಲ್ಲಿ ಯುವತಿ ಪಾಕಿಸ್ತಾನದ ಜೆರ್ಸಿ ಧರಿಸಿದ್ದಾಳೆ.
ಭಾರತ – ಪಾಕ್ ಎರಡೂ ದೇಶಗಳ ನಡುವೆ ಯುದ್ಧದ ಕಾರ್ಮೋಡ ಆವರಿಸಿರುವ ವೇಳೆ ಕೆಲವರು ಈ ವೀಡಿಯೊವನ್ನು ಮತ್ತೆ ವೈರಲ್ ಮಾಡಿದ್ದು ನೆಟ್ಟಿಗರು ಗರಂ ಆಗಿದ್ದಾರೆ.