newsics.com
ನವದೆಹಲಿ: ಜಮ್ಮು ಕಾಶ್ಮೀರದ ಪಹಲ್ಗಾಮ್ ದಾಳಿಯ ಪ್ರತೀಕಾರಕ್ಕಾಗಿ ಇಡೀ ಭಾರತ ಕಾಯುತ್ತಿದೆ. ದಾಳಿ ಬಳಿಕ ಭಾರತ ತೆಗೆದುಕೊಂಡಿರುವ ಕಠಿಣ ನಿರ್ಧಾರಗಳಿಂದ ಪಾಕಿಸ್ತಾನ ತತ್ತರಿಸಿ ಹೋಗಿದೆ.
ಇದೀಗ ಬಾಲಕನೋರ್ವ ಕ್ಯಾಮೆರಾ ಮುಂದೆ ಪಾಕಿಸ್ತಾನ ಅಸಲಿ ಮುಖ ಬಯಲು ಮಾಡುತ್ತಿದ್ದ ಬಾಲಕನ ಕೆನ್ನೆಗೆ ಆ ತಾಯಿ ಹೊಡೆದಿದ್ದಾಳೆ. ತಾಯಿ ಹೊಡೆದರು ಬಾಲಕ ತನ್ನ ಅಭಿಪ್ರಾಯವನ್ನು ಕ್ಯಾಮೆರಾ ಮುಂದೆ ವ್ಯಕ್ತಪಡಿಸಿದ್ದಾನೆ.
ವ್ಯಕ್ತಿತಯೋರ್ವ ಕ್ಯಾಮೆರಾ ಹಿಡಿದುಕೊಂಡು ಪಹಲ್ಗಾಮ್‌ನಲ್ಲಿ ನಡೆದ ದಾಳಿ ಬಗ್ಗೆ ನೀವು ಏನು ಹೇಳುತ್ತೀರಿ ಎಂದು ಕೇಳುತ್ತಾನೆ. ಕುಳಿತ ಜಾಗದಿಂದ ಎದ್ದು ಕ್ಯಾಮೆರಾ ಮುಂದೆ ಬಾಲಕ, ನೋಡಿ.. ಕಾಶ್ಮೀರಿ ಜನರು ಹೀಗೆ ಮಾಡಲು ಸಾಧ್ಯವೇ ಇಲ್ಲ. ಈ ದಾಳಿಯನ್ನು ಕಾಶ್ಮೀರಿಗರು ನಡೆಸಿಲ್ಲ ಎಂಬ ಗ್ಯಾರಂಟಿಯನ್ನ ನಿಮಗೆ ನಾನು ನೀಡುತ್ತೇನೆ. ಈ ದಾಳಿಯ ಹಿಂದೆ ಪಾಕಿಸ್ತಾನದ ಕೈವಾಡವಿದೆ ಎಂದು ಹೇಳುತ್ತಾನೆ. ಆ ಬಾಲಕ ಪಾಕಿಸ್ತಾನ ಎಂದು ಹೆಸರು ಹೇಳುತ್ತಿದ್ದಂತೆ ಆತನ ತಾಯಿ ಕಪಾಳಕ್ಕೆ ಹೊಡೆಯುತ್ತಾಳೆ. ಪಾಕಿಸ್ತಾನದ ಹೆಸರು ಹೇಳದಂತೆ ಮಗನಿಗೆ ಎಚ್ಚರಿಸುತ್ತಾಳೆ. ಆದರೂ ತಾಯಿ ವಿರೋಧ ವ್ಯಕ್ತಪಡಿಸುತ್ತಿದ್ರೂ ಬಾಲಕ ಮಾತ್ರ ಧೈರ್ಯದಿಂದ ಈ ದಾಳಿಯ ಹಿಂದೆ ಬೇರೆ ಯಾರೂ ಇಲ್ಲ, ಅದು ಪಾಕಿಸ್ತಾನ ಮಾತ್ರ ಎಂದು ಮತ್ತೆ ಹೇಳುತ್ತಾನೆ.