newsics.com
ಉದಯಪುರ: ಹಿರಿಯ ಕಾಂಗ್ರೆಸ್ ಮುಖಂಡ ಮತ್ತು ಮಾಜಿ ಕೇಂದ್ರ ಸಚಿವ ಗಿರಿಜಾ ವ್ಯಾಸ್ ಗುರುವಾರ ರಾಜಸ್ಥಾನದ ಉದಯಪುರದಲ್ಲಿ ನಿಧನರಾಗಿದ್ದಾರೆ.
ಮಾರ್ಚ್ 31, 2025 ರಂದು ಉದಯಪುರದ ತನ್ನ ಮನೆಯಲ್ಲಿ ‘ಆರತಿ’ ವ್ಯಾಸ್ ‘ಆರತಿ’ ಮಾಡುತ್ತಿದ್ದಾಗ ಕೆಳಗೆ ಉರಿಯುತ್ತಿದ್ದ ದೀಪದಿಂದ ಅವರ ‘ದುಪಟ್ಟಾ’ ಬೆಂಕಿ ಹೊತ್ತಿಕೊಂಡು, ಅವರಿಗೂ ವ್ಯಾಪಿಸಿತ್ತು ಎಂದು ಆಕೆಯ ಸಹೋದರ ಗೋಪಾಲ್ ಶರ್ಮಾ ಹೇಳಿದ್ದಾರೆ. ಕುಟುಂಬ ಸದಸ್ಯರು ಅವಳನ್ನು ಆಸ್ಪತ್ರೆಗೆ ಕರೆದೊಯ್ದರು. ಆದರೇ ಚಿಕಿತ್ಸೆ ಫಲಿಸದೇ ಇಂದು ನಿಧನರಾಗಿರುವುದಾಗಿ ತಿಳಿಸಿದ್ದಾರೆ.
ವ್ಯಾಸ್ ಪ್ರಮುಖ ಕಾಂಗ್ರೆಸ್ ನಾಯಕರಾಗಿದ್ದು, ರಾಜ್ಯ ಮತ್ತು ಕೇಂದ್ರ ಸರ್ಕಾರಗಳಲ್ಲಿ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ.