newsics.com
ಬೆಂಗಳೂರು:ನಗರಗಳಲ್ಲಿ ಒಂದು ಮನೆ ನಿರ್ಮಿಸುವುದೆಂದರೆ ದೊಡ್ಡ ಸವಾಲೇ ಸೈ. ಇನ್ನು ಬಾಡಿಗೆ ಪಾವತಿಸುವುದು ಅದಕ್ಕಿಂತ ದೊಡ್ಡ ಸವಾಲು. ಬೆಂಗಳೂರಲ್ಲಿ ಬಾಡಿಗೆ ಬಲು ದುಬಾರಿಯಾಗಿದೆ. ತಿಂಗಳ ಬಾಡಿಗೆ, ನೀರು ಸೇರಿದಂತೆ ಇತರ ವೆಚ್ಚ, ನಿರ್ವಹಣೆ ವೆಚ್ಚ ಸೇರಿದಂತೆ ಒಂದಷ್ಟು ವೆಚ್ಚಗಳು ಸೇರಿಕೊಳ್ಳುತ್ತದೆ. ಇದೀಗ ಬೆಂಗಳೂರಿನಲ್ಲಿ ಸ್ಟಾರ್ಟ್ಅಪ್ ಉದ್ಯಮ ಆರಂಭಿಸಿದ ಉದ್ಯಮಿಯೇ ಒಂದು ಸಮಯದಲ್ಲಿ ಬಾಡಿಗೆ ಕಟ್ಟಲಾಗದೆ ಪರದಾಡಿದ ಘಟನೆ ನಡೆದಿದೆ.
ಲಿಂಕ್ಡ್‌ಇನ್ ಪೋಸ್ಟ್‌ನಲ್ಲಿ ಬೆಂಗಳೂರಿನ ಯಶಸ್ವಿ ಸ್ಟಾರ್ಟ್ಅಪ್ ಉದ್ಯಮ ಒಕೆ ಕ್ರೆಡಿಟ್(@OkCredit) ಹರ್ಷಾ ಪೋಖರ್ನಾ ಬೆಂಗಳೂರಿನ ದುಬಾರಿ ಬಾಡಿಗೆ ಹಾಗೂ ತಾನು ಪರದಾಡಿದ ಬಗ್ಗೆ ತಿಳಿಸಿದ್ದಾರೆ.
ಹರ್ಷಾ ಪೋಖರ್ನಾ 2019ರಲ್ಲಿ ಒಕೆ ಕ್ರಿಕೆಡ್ ಸ್ಟಾರ್ಟ್ಅಪ್ ಉದ್ಯಮ ಆರಂಭಿಸುವಾಗ ತಾನು ದಿವಾಳಿಯಾಗಿದ್ದೆ ಎಂದಿದ್ದಾರೆ. ಒಂದೆಡೆ ಗಗನೆತ್ತರಕ್ಕೆ ಏರಿದ್ದ ಬೆಂಗಳೂರಿನ ಮನೆ ಬಾಡಿಗೆ ತೀವ್ರ ತಲೆನೋವು ತಂದಿದ್ದು ಎಂದು ಹರ್ಷಾ ಪೋಖರ್ನಾ ಹೇಳಿದ್ದಾರೆ
ಒಕೆ ಕ್ರಿಡಿಟ್ ಸ್ಟಾರ್ಟ್ ಅಪ್ ಉದ್ಯಮ ಆರಂಭಿಸಿ ವಿಸ್ತರಣೆ ಮಾಡುವ ಕಾರ್ಯ ಆರಂಭಗೊಂಡಿತ್ತು. ಹೂಡಿಕೆದಾರರಿಂದ ಹಣ ಸಂಗ್ರಹ ಆರಂಭಿಸಲಾಗಿತ್ತು. 2019ರಲ್ಲಿ ಹೂಡಿಕೆದಾರರಿಗೆ 120 ಕೋಟಿ ರೂಪಾಯಿ ಹಣ ಸಂಗ್ರಹ ಮಾಡಿದ್ದೆ. Ll ಒಕೆ ಕ್ರಿಡಿಟ್ ಉದ್ಯಮಕ್ಕೆ 120 ಕೋಟಿ ರೂಪಾಯಿ ಸಂಗ್ರಹಿಸಿದ ನಾನು ದಿವಾಳಿಯಾಗಿದ್ದೆ. ನನ್ನ ಬಳಿ ಒಂದು ರೂಪಾಯಿಯೂ ಇರಲಿಲ್ಲ. ಪ್ರತಿ ತಿಂಗಳ ಸಂಬಂಳ ಬರಲು ಕಾಯುತ್ತಿದ್ದೆ. ಇದರ ನಡುವೆ ರಾಕೆಚ್ ವೇಗದಲ್ಲಿ ಏರುತ್ತಿದ್ದ ಬೆಂಗಳೂರು ಮನೆ ಬಾಡಿಗೆ ಪಾವತಿಸಲು ಪರದಾಡಬೇಕಾಯಿತು ಎಂದು ಹೇಳಿದ್ದಾರೆ.
ಸ್ಟಾರ್ಟ್ ಅಪ್ ಉದ್ಯಮಿಗಳ ಸಂಸ್ಥಾಪಕರು ಕೋಟಿ ಕೋಟಿ ಹಣ ಹೂಡಿಕೆದಾರರಿಂದ ಸಂಗ್ರಹಿಸುತ್ತಿದ್ದರೂ ಬೆಂಗಳೂರು ಜೀವನ ಮಾತ್ರ ಕಾಲೇಜು ಹುಡುಗರ ರೀತಿ ಇತ್ತು ಎಂದಿದ್ದಾರೆ. ತಿಂಗಳ ಅಂತ್ಯವಾಗುತ್ತಿದ್ದಂತೆ ಬಾಡಿಗೆ ಕಟ್ಟುವುದು ಹೇಗೆ ಅನ್ನೋ ಚಿಂತೆಯಾಗುತ್ತಿತ್ತು. ಇದು ಇನ್ನಿಲ್ಲದಂತೆ ಕಾಡಲು ಆರಂಭಿಸಿತ್ತು ಎಂದಿದ್ದಾರೆ.
https://in.linkedin.com/company/okcredit?trk=public_post_embed-text