ಪ್ರತಿಯೊಬ್ಬರ ಜೀವನದಲ್ಲಿ ಮದುವೆ ಒಂದು ಪ್ರಮುಖ ಹಂತ. ಹೆಣ್ಣು ಮತ್ತು ಗಂಡಿಗೆ ಮದುವೆಯ ಬಗ್ಗೆ ಸಾಕಷ್ಟು ಕನಸುಗಳಿರುತ್ತದೆ. ಎರಡೂ ಕುಟುಂಬಗಳು ಮದುವೆಯ ವಿಷಯಕ್ಕೆ ಬಂದಾಗ ಮೊದಲು ನೆನಪಿಗೆ ಬರುವ ವಿಷಯವೆಂದರೆ ಮದುವೆ ಆಮಂತ್ರಣ ಪತ್ರಿಕೆ. ಸಾಮನ್ಯವಾಗಿ ಮದುವೆ ಕಾರ್ಡ್ನಲ್ಲಿ ವರನ ಹೆಸರಿನ ಜೊತೆಗೆ ಅವನ ಅರ್ಹತೆಗಳನ್ನು ಬರೆದಿರುವುದನ್ನು ನಾವು ನೋಡಿದ್ದೇವೆ, ಆದರೆ ಇಲ್ಲೊಬ್ಬ ಮದುವೆ ಕಾರ್ಡ್ನಲ್ಲಿ ವರನ ಹೆಸರನ್ನು ಮಹಾವೀರ್ ಕುಮಾರ್ ಎಂದು ಬರೆಯುವುದರ ಜೊತೆಗೆ ಮದುಮಗ Physical Qualified ಎಂದು ಪ್ರಿಂಟ್ ಮಾಡಿದ್ದಾರೆ.
ಈ ಮದುವೆ ಕಾರ್ಡ್ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.
ajeet kumar 970 ಹೆಸರಿನ ಖಾತೆಯಲ್ಲಿ ಈ ಫೋಟೋವನ್ನು ಶೇರ್ ಮಾಡಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ಮದುವೆ ಕಾರ್ಡನ್ನು ಸೂಕ್ಷ್ಮವಾಗಿ ಗಮನಿಸಿ. ವರನ ಹೆಸರನ್ನು ಮಹಾವೀರ್ ಎಂದು ಬರೆಯಲಾಗಿದ್ದು ಅದರ ಕೆಳಭಾಗದಲ್ಲಿ ಫಿಸಿಕಲ್ ಕ್ವಾಲಿಫೈಡ್ ಎಂದು ಉಲ್ಲೇಖಿಸಿದ್ದಾನೆ.ನೆಟ್ಟಿಗರು ಆ ಪೋಸ್ಟ್‌ಗೆ ಸಖತ್ ಕಾಮೆಂಟ್ ಮಾಡಿದ್ದಾರೆ. ಒಬ್ಬ ನೆಟ್ಟಿಗ “ನನ್ನ ಮದುವೆ ಕಾರ್ಡ್‌ನಲ್ಲಿ ಅರ್ಹತೆಯಾಗಿ ‘ಯುಪಿಎಸ್‌ಸಿ ಫಾರ್ಮ್ ಭರ ಹುನ್’ ಎಂದು ಬರೆಯುತ್ತೇನೆ ಎಂದರೆ, ಮತ್ತೊಬ್ಬ”ನಾನು ಸಬ್-ಇನ್ಸ್‌ಪೆಕ್ಟರ್ ಆಗಿದ್ದೇನೆ ಎಂದು ಕನಸು ಕಂಡಿದ್ದೆ. ನಮ್ಮ ಮದುವೆ ಕಾರ್ಡ್‌ನಲ್ಲಿ ‘ನನ್ನ ಕನಸಿನಲ್ಲಿ ಉತ್ತರ ಪ್ರದೇಶದಲ್ಲಿ ಸಬ್-ಇನ್ಸ್‌ಪೆಕ್ಟರ್ ಆದೆ’ ಎಂದು ಬರೆಯಬಹುದೇ?” ಎಂದಿದ್ದಾನೆ.
https://www.instagram.com/reel/DIvWmSZop96/?igsh=eTJ3NWl2Y292dW51