newsics.com
ಆನ್ಲೈನ್‌ನಲ್ಲಿ ಹಳೆಯ ನೋಟುಗಳ ಮಾರಾಟ ನಡೆಯುತ್ತಿದೆ. 5 ರೂಪಾಯಿ ಮುಖಬೆಲೆಯ ಹಳೆಯ ನೋಟಿಗೆ ಬೇಡಿಕೆ ಬಹಳ ಹೆಚ್ಚಾಗಿದೆ. ಈ ಐದು ರೂಪಾಯಿಯ ಹಳೆಯ ನೋಟು ನಿಮ್ಮ ಬಳಿ ಇದ್ರೆ ನೀವು ಸುಮಾರು 4 ಲಕ್ಷ ರೂಪಾಯಿವರೆಗೂ ಲಾಭ ಮಾಡಿಕೊಳ್ಳಬಹುದು.
ಆನ್ ಲೈನ್ ನಲ್ಲಿ ಈಗ ಬಹುತೇಕ ಎಲ್ಲಾ ವಸ್ತುಗಳನ್ನು ಮಾರಾಟ ಮಾಡಬಹುದು. ಅದೇ ರೀತಿ ಈಗ ಆನ್ಲೈನ್‌ನಲ್ಲಿ ನೋಟುಗಳನ್ನು ಕೂಡ ಮಾರಾಟ ಮಾಡಬಹುದಾಗಿದೆ. ಆದರೆ ಎಲ್ಲಾ ನೋಟುಗಳನ್ನು ಮಾರಾಟ ಮಾಡಲು ಸಾಧ್ಯವಿಲ್ಲ, ಕೆಲವು ವಿಶೇಷ ನೋಟುಗಳನ್ನ ನೀವು ಮಾರಾಟ ಮಾಡಬಹುದು. ಆನ್ಲೈನ್‌ನಲ್ಲಿ ನೋಟುಗಳನ್ನು ಮಾರಾಟ ಮಾಡುವುದು ಕಾನೂನು ಬಾಹಿರವಾಗಿದೆ. ಆದರೂ ಸಹ ಕಾನೂನಿಗೆ ವಿರುದ್ಧವಾಗಿ ಅನೇಕ ಜನರು ಆನ್ಲೈನ್‌ನಲ್ಲಿ ನೋಟುಗಳನ್ನ ಮಾರಾಟ ಮಾಡುತ್ತಿದ್ದಾರೆ.
5 ರೂಪಾಯಿಯ ನೋಟಿಗೆ ಸಿಗುತ್ತೆ 4 ಲಕ್ಷ!
ಹೌದು, 5 ರೂಪಾಯಿ ಟ್ರ್ಯಾಕ್ಟರ್ ಚಿತ್ರವಿರುವ 786 ನಂಬರ್ ನೋಟ್ ನಿಮ್ಮ ಬಳಿ ಇದ್ದರೆ ನೀವು ಅದನ್ನು ಆನ್ಲೈನ್‌ನಲ್ಲಿ ಸುಮಾರು 4 ಲಕ್ಷಕ್ಕೆ ಮಾರಾಟ ಮಾಡಬಹುದು. Quikr ಅಥವಾ OLX ವೆಬ್ಸೈಟ್‌ನಲ್ಲಿ ನೀವು ಈ ನೋಟುಗಳನ್ನು ಮಾರಾಟ ಮಾಡಬಹುದು. ಈ ನೋಟುಗಳನ್ನ ಮಾರಾಟ ಮಾಡಲು ನೀವು ಮೊದಲು ವೆಬ್ಸೈಟ್‌ಗೆ ಲಾಗಿನ್ ಆಗಬೇಕು. ನಂತರ ನೋಟುಗಳ ಚಿತ್ರವನ್ನು ಅಲ್ಲಿ ಅಪ್ಲೋಡ್ ಮಾಡಬೇಕು. ನಂತರ ನಿಮ್ಮ ವೈಯಕ್ತಿಕ ವಿವರ ಅಂದರೆ ನಿಮ್ಮ ಹೆಸರು, ಮೊಬೈಲ್ ನಂಬರ್ ಮತ್ತು ಇ-ಮೇಲ್ ಐಡಿಯನ್ನ ನೀಡಬೇಕು. ನಂತರ ಗ್ರಾಹಕರು ನಿಮ್ಮನ್ನು ನೇರವಾಗಿ ಸಂಪರ್ಕ ಮಾಡುತ್ತಾರೆ. ನೀವು ಗ್ರಾಹಕರ ಬಳಿ ನೇರವಾಗಿ ಮಾತನಾಡಿ ವಹಿವಾಟು ನಡೆಸಬಹುದು.
ಮುಸ್ಲಿಂ ಸಮುದಾಯದಲ್ಲಿ 786 ನಂಬರ್ ಬಹಳ ಶ್ರೇಷ್ಠವಾದ ಮತ್ತು ಲಕ್ಕಿ ನಂಬರ್ ಆಗಿದೆ. ಇಸ್ಲಾಂನಲ್ಲಿ ಈ ನಂಬರ್‌ಗೆ ಬಹಳ ಪವಿತ್ರವಾದ ಸ್ಥಾನಮಾನವಿದೆ. ಈ ಕಾರಣಗಳಿಂದ ಮುಸ್ಲಿಂ ಸಮುದಾಯದವರು ಈ 786 ನಂಬರ್ ಇರುವ ನೋಟುಗಳನ್ನು ಹೆಚ್ಚು ಹಣ ಕೊಟ್ಟು ಖರೀದಿ ಮಾಡುತ್ತಾರೆ. ಅದೇ ರೀತಿ ನೀವು Quikr ಅಥವಾ OLX ವೆಬ್ಸೈಟ್‌ಗಳಲ್ಲಿ ಈ ನೋಟುಗಳನ್ನು ಮಾರಾಟ ಮಾಡಬಹುದು. ಮಾಹಿತಿಯ ಪ್ರಕಾರ, ನೀವು 5 ರೂಪಾಯಿಯ ಟ್ರ್ಯಾಕ್ಟರ್ ಚಿತ್ರವಿರುವ 786 ನಂಬರ್ ನೋಟನ್ನು ಸುಮಾರು 4 ಲಕ್ಷ ರೂಪಾಯಿಗಳಿಗೆ ಮಾರಾಟ ಮಾಡಬಹುದು. ಆನ್ಲೈನ್‌ನಲ್ಲಿ ವಂಚನೆಯಾಗುವ ಸಾಧ್ಯತೆ ಇರುವುದರಿಂದ ನೀವು ನೋಟುಗಳನ್ನ ಮಾರಾಟ ಮಾಡಬೇಕಾದರೆ ಬಹಳ ಎಚ್ಚರಿಕೆಯಿಂದ ವ್ಯವಹಾರ ಮಾಡಬೇಕಾಗುತ್ತದೆ.