newsics.com
ಕೇಂದ್ರ ಲೋಕಸೇವಾ ಆಯೋಗ 2024 ರ ನಾಗರಿಕ ಸೇವೆಗಳ ಪರೀಕ್ಷೆಯ ಅಂತಿಮ ಫಲಿತಾಂಶವನ್ನು ಪ್ರಕಟಿಸಿದೆ. ಪ್ರಯಾಗ್ರಾಜ್ ನಿವಾಸಿ ಶಕ್ತಿ ದುಬೆ ಪ್ರಥಮ ರ‍್ಯಾಂಕ್ ಗಳಿಸಿದ್ದಾರೆ. ಕರ್ನಾಟಕದ ಆರ್ ರಂಗಮಂಜು 24ನೇ ರ‍್ಯಾಂಕ್‌ನಲ್ಲಿ ಸಿಎಸ್‌ಇ ಪಾಸ್ ಮಾಡಿದ್ದಾರೆ.2024ನೇ ಸಾಲಿನ ಫಲಿತಾಂಶದಲ್ಲಿ 1,009 ಅಭ್ಯರ್ಥಿಗಳು ಅರ್ಹತೆ ಪಡಿದ್ದಾರೆ. ಇನ್ನು, ಕರ್ನಾಟಕದ ವಿವಿಧ ಜಿಲ್ಲೆಗಳ ಅಭ್ಯರ್ಥಿಗಳೂ ಕೂಡ ರ‍್ಯಾಂಕ್ ಪಡೆದಿದ್ದಾರೆ.
ಯುಪಿಎಸ್‌ಸಿ ಸಿಎಸ್‌ಇ 2024 ಕರ್ನಾಟಕ ಟಾಪರ್‌ಗಳ ಪಟ್ಟಿ
ಆರ್ ರಂಗ ಮಂಜು – 24ನೇ ರ‍್ಯಾಂಕ್
ವಿಭೋರೆ ಮೆಂಡಿರಟ್ಟ – 389ನೇ ರ‍್ಯಾಂಕ್
ಪ್ರತಿವಾ ಲಾಮ – 461ನೇ ರ‍್ಯಾಂಕ್
ರಾಹುಲ್ ಸಿ ಯರತ್ನೇಳಿ – 462ನೇ ರ‍್ಯಾಂಕ್
ಪರಮಿತ ಮಲಕರ್ – 477ನೇ ರ‍್ಯಾಂಕ್
ಭಾನು ಪ್ರಕಾಶ್ – 523ನೇ ರ‍್ಯಾಂಕ್
ಅಭಿಶೀಲ್ ಜೈಶ್ವಾಲ್ – 538ನೇ ರ‍್ಯಾಂಕ್
ಎ.ಮಧು – 544ನೇ ರಾಂಕ್
ವರುಣ್ ಕೆ ಗೌಡ – 565ನೇ ರ‍್ಯಾಂಕ್
ಭರತ್ ಸಿ ಯರಮ್ – 567ನೇ ರ‍್ಯಾಂಕ್
ಸ್ವಪ್ನಿಲ್ ಭಾಗಲ್ – 620ನೇ ರ‍್ಯಾಂಕ್
ಸಂಪ್ರೀತ್ ಸಂತೋಷ್ – 652ನೇ ರ‍್ಯಾಂಕ್
ಟಿ ವಿಜಯಕುಮಾರ್ – 894ನೇ ರ‍್ಯಾಂಕ್
ಹನುಮಂತಪ್ಪ ನಂದಿ – 910ನೇ ನೇ ರ‍್ಯಾಂಕ್
ವಿಶಾಖ ಕದಂ – 962ನೇ ರ‍್ಯಾಂಕ್
ಧನ್ಯಾ ಕೆ ಎಸ್ – 982ನೇ ರ‍್ಯಾಂಕ್
ಅಭ್ಯರ್ಥಿಗಳು ತಮ್ಮ ಫಲಿತಾಂಶವನ್ನು ಯುಪಿಎಸ್ಸಿ ಪರೀಕ್ಷೆಯ ಅಧಿಕೃತ ವೆಬ್ಸೈಟ್- upsc.gov.in ನಲ್ಲಿ ಪರಿಶೀಲಿಸಬಹುದು. ಅಥವಾ upsconline.gov.in ವೈಬ್ಸೈಟ್ನಲ್ಲಿ ಫಲಿತಾಂಶವನ್ನು ಪಡೆಯಬಹುದಾಗಿದೆ