newsics.com
ದೇಹವನ್ನು ಆರೋಗ್ಯಕರವಾಗಿಡಲು ನಾವು ಹಲವಾರು ಕ್ರಮಗಳನ್ನು ಅನುಸರಿಸುತ್ತೇವೆ. ಅದರಲ್ಲೂ ದೇಹದಾರೋಗ್ಯವನ್ನು ಕಾಪಾಡಿಕೊಳ್ಳಲು ಜಲಸಂಚಯನ ತುಂಬಾ ಮುಖ್ಯವಾಗಿದೆ. ಇದಕ್ಕಾಗಿ ಪ್ರತಿನಿತ್ಯ ಸಾಕಷ್ಟು ಪ್ರಮಾಣದ ನೀರನ್ನು ಕುಡಿಯಲು ಸಲಹೆ ತಜ್ಞರು ಸಲಹೆ ನೀಡುತ್ತಾರೆ. ಸಾಕಷ್ಟು ನೀರನ್ನು ಕುಡಿಯುವುದರಿಂದ ದೇಹದಲ್ಲಿ ಸಂಗ್ರಹಗೊಳ್ಳುವ ತ್ಯಾಜ್ಯವನ್ನು ಹೊರ ಹಾಕಬಹುದು ಮತ್ತು ಹಲವಾರು ಆರೋಗ್ಯ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು. ಹೀಗೆ ನೀವು ಕುಡಿಯುವ ನೀರಿಗೆ ಸ್ವಲ್ಪ ಉಪ್ಪನ್ನು ಸೇರಿಸಿ ಸೇವಿಸುವುದರಿಂದ ದೇಹಕ್ಕೆ ಲಭಿಸುವ ಪ್ರಯೋಜನಗಳ ಬಗ್ಗೆ ನೋಡೋಣ.
ಒಂದು ಲೋಟ ನೀರಿಗೆ ಕೇವಲ ಒಂದು ಚಿಟಿಕೆಯಷ್ಟು ಉಪ್ಪು ಬೆರೆಸಿ ಕುಡಿಯುವ ಅಭ್ಯಾಸ ಬಹಳ ಒಳ್ಳೆಯದು.
ನೀವು ಮಲಬದ್ಧತೆಯ ಸಮಸ್ಯೆಯಿಂದ ಬಳಲುತ್ತಿದ್ದರೆ, ಉಪ್ಪು ನೀರನ್ನು ಕುಡಿಯಬಹುದು. ಈ ನೀರನ್ನು ಕುಡಿಯುವುದರಿಂದ ಕರುಳಿನ ಚಲನೆಯ ಸುಲಭಗೊಳ್ಳುತ್ತದೆ. ಇದು ಜೀರ್ಣಕ್ರಿಯೆಯನ್ನು ಉತ್ತಮವಾಗಿಡಲು ಸಹಾಯ ಮಾಡುತ್ತದೆ . ಅಲ್ಲದೆ ಉಪ್ಪುನೀರು ಹೊಟ್ಟೆಯ ಪಿ.ಹೆಚ್ ಮಟ್ಟವನ್ನು ನಿಯಂತ್ರಿಸುವಲ್ಲಿ ಪರಿಣಾಮಕಾರಿಯಾಗಿದೆ.
ಉಪ್ಪು ನೀರನ್ನು ಸೇವನೆ ಮಾಡುವ ಮೂಲಕ ಉತ್ತಮ ನಿದ್ರೆಯನ್ನು ಪಡೆಯಬಹುದು. ಒತ್ತಡದ ಕಾರಣದಿಂದಾಗಿ ಹಲವರು ನಿದ್ರಾಹೀನತೆಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಹೀಗಿರುವಾಗ ಒಂದು ಲೋಟ ಉಗುರು ಬೆಚ್ಚಗಿನ ನೀರಿಗೆ ಚಿಟಿಕೆ ಉಪ್ಪನ್ನು ಸೇರಿಸಿ ಕುಡಿಯಿರಿ. ಇದು ದೇಹದಲ್ಲಿನ ಆಕ್ಸಿಟೋಸಿನ್ ಹಾರ್ಮೋನ್ ಮಟ್ಟವನ್ನು ಹೆಚ್ಚಿಸುತ್ತದೆ. ಇದರಿಂದ ನೀವು ಶಾಂತವಾಗಿರುತ್ತೀರಿ ಮತ್ತು ಇದು ವಿಶ್ರಾಂತಿ ಪಡೆಯಲು ಕೂಡ ಸಹಕಾರಿಯಾಗಿದೆ.
ಬೇಸಿಗೆ ಕಾಲದಲ್ಲಿ ದೇಹದಲ್ಲಿನ ಎಲೆಕ್ಟ್ರೋಲೈಟ್ಗಳು ಕಡಿಮೆಯಾದರೆ, ನಿರ್ಜಲೀಕರಣ, ಬಾಯಾರಿಕೆ, ಮಲಬದ್ಧತೆ, ತಲೆನೋವು ಮುಂತಾದ ಸಮಸ್ಯೆಗಳು ಕಂಡು ಬರುತ್ತದೆ. ಈ ಕೊರತೆಯನ್ನು ನೀಗಿಸಲು, ಕುಡಿಯುವ ನೀರಿಗೆ ಸ್ವಲ್ಪ ಉಪ್ಪು ಹಾಕುವುದರಿಂದ ಉತ್ತಮ ಫಲಿತಾಂಶ ಪಡೆಯಬಹುದು. ಜೊತೆಗೆ ಇದು ಸೋಡಿಯಂ, ಪೊಟ್ಯಾಸಿಯಮ್ ಮತ್ತು ಮೆಗ್ನೀಸಿಯಮ್ ನಂತಹ ಖನಿಜಗಳನ್ನು ಸಮತೋಲನಗೊಳಿಸಲು ಸಹಾಯ ಮಾಡುತ್ತದೆ.
ಸ್ನಾಯು ಸೆಳೆತ ಮತ್ತು ನರ ಬಿಗಿತ ಸಮಸ್ಯೆಗಳು ಕಂಡು ಬಂದರೆ ಉಪ್ಪು ನೀರು ಕುಡಿಯುವುದು ತುಂಬಾ ಒಳ್ಳೆಯದು. ಅದಲ್ಲದೆ ಆಹಾರ ಬೇಗನೆ ಜೀರ್ಣವಾಗದಿದ್ದಾಗ ಇದು ಗ್ಯಾಸ್ ಮತ್ತು ಉಬ್ಬರದಂತಹ ಸಮಸ್ಯೆಗಳನ್ನು ಉಂಟುಮಾಡುತ್ತದೆ.
https://www.newsics.com/2025/04/17/nissan-launches-first-intelligent-parking-chair/