newsics.com
ಗುಜರಾತ: ಕಛ್ ಪೊಲೀಸರು ಸಿಐಡಿ ವಿಭಾಗದ ಸುಂದರ ಮಹಿಳಾ ಪೊಲೀಸ್ ಪೇದೆಯನ್ನು ಬಂಧಿಸಿದ್ದಾರೆ.
ಮಹಿಳೆಯಿಂದ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಮದ್ಯವನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಗುಜರಾತಿನ ಪೊಲೀಸರಿಗೆ ಮದ್ಯ ಸಾಗಾಟದ ಕುರಿತು ಖಚಿತ ಮಾಹಿತಿ ಲಭ್ಯವಾಗಿತ್ತು. ಈ ಹಿನ್ನೆಲೆ ಚೆಕ್‌ಪೋಸ್ಟ್‌ನಲ್ಲಿ ಎಲ್ಲಾ ವಾಹನಗಳನ್ನು ತೀವ್ರ ತಪಾಸಣೆಗೊಳಪಡಿಸಲಾಗಿತ್ತು
ಕಾರ್‌ನಲ್ಲಿಯೇ ರೆಡ್ ಹ್ಯಾಂಡ್ ಆಗಿ ಮಹಿಳಾ ಪೇದೆ ಸಿಕ್ಕಿದ್ದು, ಪೊಲೀಸರು ಆಕೆಯನ್ನು ಬಂಧಿಸಿದ್ದಾರೆ. ಆಕೆಯ ಜೊತೆಯಲ್ಲಿದ್ದ ಯುವರಾಜ್ ಸಿಂಗ್ ಎಂಬಾತನನ್ನು ಸಹ ಬಂಧಿಸಲಾಗಿದೆ.
ಭವೂಚಾ ಪ್ರದೇಶದಲ್ಲಿ ಬಿಳಿ ಬಣ್ಣದ ಥಾರ್ ಪೊಲೀಸರು ನಿಲ್ಲಿಸುವಂತೆ ಸೂಚನೆ ನೀಡಿದರೂ ವೇಗವಾಗಿ ಚಾಲನೆ ಮಾಡಿಕೊಂಡು ಪರಾರಿಯಾಗಿದ್ದನು. ಪೊಲೀಸರು ಬಿಳಿ ಬಣ್ಣದ ಥಾರ್ ಮಾಹಿತಿಯನ್ನು ಮುಂದಿನ ಚೆಕ್‌ಪೋಸ್ಟ್‌ಗೆ ರವಾನಿಸಿದ್ದರು. ಥಾರ್ ಚಾಲಕ ಪೊಲೀಸರ ಮೇಲೆಯೇ ವಾಹನ ಹತ್ತಿಸಲು ಮುಂದಾಗಿದ್ದನು ಎಂಬ ಗಂಭೀರ ಆರೋಪವೂ ಕೇಳಿ ಬಂದಿದೆ.
ಅಕ್ರಮ ಮದ್ಯ ಸಾಗಾಟದಲ್ಲಿ ಬಂಧನಕ್ಕೊಳಗಾಗಿರುವ ಮಹಿಳಾ ಪೇದೆಯನ್ನು ನೀತಾ ಚೌಧರಿ ಎಂದು ಗುರುತಿಸಲಾಗಿದೆ. ನೀತಾ ಚೌಧರಿ ಪೂರ್ವ ಕಛ್‌ನಲ್ಲಿರೋ ಗಾಂಧಿದಾಮದ ಸಿಬಿಐ ಕ್ರೈಂ ಪೊಲೀಸ್ ಠಾಣೆಯಲ್ಲಿ ಸೇವೆ ಸಲ್ಲಿಸುತ್ತಿದ್ದಳು ಎಂದು ಪೊಲೀಸರು ದೃಢಪಡಿಸಿದ್ದಾರೆ.