newsics.com
ಉತ್ತರಪ್ರದೇಶ :ಬಾಯ್ಫ್ರೆಂಡ್ ಒಟ್ಟಿಗಿರಲು ಬೇಕಾದ ಖರ್ಚನ್ನು ಗಂಡನೇ ಕೊಡಬೇಕೆಂದು ಮಹಿಳೆ ಡಿಮ್ಯಾಂಡ್ ಮಾಡಿದ್ದಾಳೆ.ಉತ್ತರ ಪ್ರದೇಶದ ಆಗ್ರಾದಿಂದ ವಿಚಿತ್ರ ಪ್ರಕರಣವೊಂದು ಬೆಳಕಿಗೆ ಬಂದಿದೆ.
ಗಂಡನೊಂದಿಗೆ ಮನಸ್ತಾಪ ಉಂಟಾಗಿ ಆತನಿಂದ ದೂರ ಹೋಗಬೇಕೆಂದು ಬಯಸಿದ ಮಹಿಳೆಯೊಬ್ಬಳು ಪತಿಗೆ ತನ್ನ ಬೇಡಿಕೆಯೊಂದನ್ನು ಇಟ್ಟಿದ್ದಾಳೆ. ಆಕೆ ತನ್ನಿಂದ ದೂರವಾಗುತ್ತಿದ್ದಾಳೆ ಎಂಬ ಬೇಸರ ಒಂದೆಡೆಯಾದರೆ ನಂತರ ಆಕೆ ಇಟ್ಟ ಬೇಡಿಕೆ ಕೇಳಿ ಗಂಡ ಮತ್ತಷ್ಟು ಶಾಕ್ ಆಗಿದ್ದಾನೆ.
ನನ್ನ ಪ್ರಿಯಕರನಿಗೂ ಹೆಂಡತಿ, ಮಕ್ಕಳಿದ್ದಾರೆ. ಅವನಿಗೆ ಅವರ ಖರ್ಚೇ ಸಾಕಷ್ಟಿರುತ್ತದೆ. ಹೀಗಾಗಿ, ನನ್ನ ಖರ್ಚನ್ನು ನಿಭಾಯಿಸುವುದು ಕಷ್ಟವಾಗುತ್ತದೆ. ಆದ್ದರಿಂದ ನನ್ನ ಗಂಡನೇ ನಮ್ಮ ತಿಂಗಳ ಖರ್ಚಿಗೆ ಹಣ ಕೊಡಬೇಕು ಎಂದು ಆ ಮಹಿಳೆ ಬೇಡಿಕೆಯಿಟ್ಟಿದ್ದಾಳೆ. ಆದರೆ, ಇದಕ್ಕೆ ಆಕೆಯ ಗಂಡ ಒಪ್ಪಿಲ್ಲ.