newsics.com
ಪ್ರತಿ ಮಹಿಳೆಗೆ ತಾಯ್ತನ ಒಂದು ವಿಶೇಷ ಅನುಭವ ನೀಡುತ್ತದೆ. ತಾಯಿಯಾಗುವ ಪ್ರತೀ ಮಹಿಳೆ ತನ್ನ ಆರೋಗ್ಯ ಮತ್ತು ಆಹಾರ ದಿನಚರಿಯನ್ನು ತುಂಬಾ ಚೆನ್ನಾಗಿ ಇಟ್ಟುಕೊಳ್ಳಬೇಕಾಗುತ್ತದೆ.ತಾಯಿಯಾಗುವುದು ಸಂತೋಷ ಹಾಗೂ ಮಗುವಿನ ಮುಖ ನೋಡಲು ಕಾತರಿಸುವ ಭಾವನೆ. ಜೊತೆಗೆ ಇದೂ ಒಂದು ಮಹತ್ವದ ಜವಾಬ್ದಾರಿ ಕೂಡ ಆಗಿದೆ. ಗರ್ಭಧರಿಸಿದಾಗ ತಾಯಿ ಮತ್ತು ಮಗುವಿನ ಆರೋಗ್ಯ ಗಮನದಲ್ಲಿಟ್ಟುಕೊಂಡು ಎಲ್ಲಾ ಕೆಲಸ ಕಾರ್ಯ ಮಾಡಬೇಕಾಗುತ್ತದೆ. ತಾಯಿ ಮತ್ತು ಮಗುವನ್ನು ಆರೋಗ್ಯವಾಗಿಡಲು ಹಲವು ಸಂಗತಿಗಳ ಬಗ್ಗೆ ಗಮನಹರಿಸುವುದು ತುಂಬಾ ಮುಖ್ಯ.
ಸಂಗೀತ ಕೇಳುವುದು ಉತ್ತಮ. ಇದು ಆಯಾಸವನ್ನು ಕಡಿಮೆ ಮಾಡುವುದರಿಂದ ತಾಯಿ, ಮಗು ಇಬ್ಬರಿಗೂ ಒಳ್ಳೆಯದು. ಭಜನೆ, ಸುಮಧುರ ಸಂಗೀತ, ಶ್ಲೋಕ, ಕಥೆಗಳನ್ನು ಕೇಳುವುದು ಒಳ್ಳೆಯದು. ಹೆಚ್ಚು ಹೊತ್ತು ಸಂಗೀತ ಕೇಳಬೇಡಿ. ದಿನದಲ್ಲಿ ಒಂದಿಷ್ಟು ಹೊತ್ತು ಇದಕ್ಕಾಗಿಯೇ ಸಮಯ ಹೊಂದಿಸಿಕೊಳ್ಳುವುದು ಒಳ್ಳೆಯದು.
ನಮ್ಮಲ್ಲಿ ಬಹುತೇಕರು ಗರ್ಭಾವಸ್ಥೆಯಲ್ಲಿ ಆದಷ್ಟು ರೆಸ್ಟ್ ಮಾಡಬೇಕು ವ್ಯಾಯಾಮ ಎಲ್ಲಾ ಮಾಡಬಾರದು ಎಂಬ ನಂಬಿಕೆ ಇದೆ. ಆದರೆ ಇದು ತಪ್ಪು, ಗರ್ಭಾವಸ್ಥೆಯ ನಿರ್ದಿಷ್ಟ ಅವಧಿಯಲ್ಲಿ ನೀವು ಸರಳವಾದ ವ್ಯಾಯಾಮಗಳನ್ನು ಮಾಡಬೇಕು.
ಸೂರ್ಯನ ಬಿಸಿಲಿನಿಂದ ನೀವು ವಿಟಮಿನ್ ಡಿ ಪಡೆಯುತ್ತೀರಿ. ಇದು ನಿಮ್ಮ ದೇಹಕ್ಕೆ ಶಕ್ತಿಯುತವಾದ ಮೂಳೆ ಹಾಗು ಹೃದಯಕ್ಕೆ ಅಗತ್ಯವಾಗಿದೆ. ಕೆಲವು ಗರ್ಭಿಣಿಯರು ತಮ್ಮ ಗರ್ಭಾವಸ್ಥೆಯಲ್ಲಿ ವಿಟಮಿನ್ ಡಿ ಕೊರತೆಯನ್ನು ಹೊಂದಿರುತ್ತಾರೆ. ಅಂತವರು ಗುಳಿಗೆಗಳ ಬದಲಾಗಿ ನೈಸರ್ಗಿಕವಾಗಿ ಪಡೆಯಬಹುದಾದ ವಿಟಮಿನ್ ಡಿ ಅನ್ನು ಪಡೆಯಬಹುದು. ಅಲ್ಲದೆ, ನಿಮ್ಮ ಮಗುವು ಗರ್ಭದಲ್ಲಿ ಆಕ್ಟಿವ್ ಆಗಬಹುದು.
ಆರೋಗ್ಯಕರ ಆಹಾರಗಳನ್ನು ಸೇವನೆ ಮಾಡಿ. ತಾಯಿ ಎಷ್ಟು ಉತ್ತಮ ಆಹಾರ ಸೇವಿಸುತ್ತಾಳೋ ಅಷ್ಟು ಮಗುವಿಗೆ ಪೌಷ್ಠಿಕಾಂಶ ಸಿಗುತ್ತದೆ. ಹೊರಗಿನ ಆಹಾರಗಳನ್ನು ಸಾಧ್ಯವಾದಷ್ಟು ಸೇವನೆ ಮಾಡಬೇಡಿ. ಏನೇ ತಿನ್ನಬೇಕು ಎನಿಸಿದರೂ ಮನೆಯಲ್ಲಿಯೇ ಮಾಡಿ ತಿನ್ನಿ. ಇದು ಮಗುವಿನ ಬೆಳವಣಿಗೆಗೆ ಬಹಳ ಸಹಾಯ ಮಾಡುತ್ತದೆ. ಜೊತೆಗೆ ಭರಪೂರವಾಗಿ ಹಣ್ಣು, ತರಕಾರಿಗಳ ಸೇವನೆ ಮಾಡಿ.
https://www.newsics.com/2025/04/14/do-this-immediately-after-a-snake-bite-in-summer/