newsics.com
ಪಾಕಿಸ್ತಾನ: ಪಾರ್ಲಿಮೆಂಟ್‌ನಲ್ಲಿ ಇಮ್ರಾನ್ ಖಾನ್ ಅವರ ಪಕ್ಷದ ಮುಖಂಡ ಜರ್ತಾಜ್ ಗುಲ್ ಅವರು ತಾವು ಮಾತನಾಡುವಾಗ ಯಾವುದೋ ಕಡೆ ನೋಡುತ್ತಿದ್ದ ವಿಧಾನಸಭಾ ಸ್ಪೀಕರ್ ಅಯಾಜ್ ಸಾದಿಕ್ ಅವರ ಕುರಿತು, ತಾನು ಮಾತನಾಡುವಾಗ ಕಣ್ಣಿನ ಸಂಪರ್ಕವನ್ನು ತಪ್ಪಿಸಬೇಡಿ ಎಂದು ಹೇಳಿದ್ದಾರೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಜರ್ತಾಜ್ ಗುಲ್ ಅವರು ಸಭೆಯಲ್ಲಿ ಮಾತನಾಡುವಾಗ “ನೀವು ನನ್ನತ್ತ ನೋಡದಿದ್ದರೆ, ನಾನು ನಿಮ್ಮೊಂದಿಗೆ ಮಾತನಾಡುವುದಿಲ್ಲ ಎಂದು ಸ್ಪೀಕರ್‌ಗೆ ಹೇಳುವ ಮೂಲಕ ಪಾಕಿಸ್ತಾನ ಸಂಸತ್ತಿನಲ್ಲಿ ಚರ್ಚೆಯನ್ನು ಹುಟ್ಟುಹಾಕಿದ್ದಾರೆ.
ಪಾಕಿಸ್ತಾನ ವಿಧಾನಸಭೆಯಲ್ಲಿ ಇತ್ತೀಚೆಗೆ ನಡೆದ ಸಂಸತ್ತಿನ ಕಲಾಪಗಳಲ್ಲಿ ಈ ಘಟನೆ ನಡೆದಿದ್ದು, ಈ ವಿಡಿಯೊದಲ್ಲಿ ಸಚಿವೆ “ನನ್ನ ಪಕ್ಷದ ನಾಯಕರು ನನಗೆ ಕಣ್ಣುಗಳನ್ನು ನೋಡುತ್ತಾ ಮಾತನಾಡಲು ಕಲಿಸಿದ್ದಾರೆ. ನೀವು ಈ ರೀತಿಯ ಕಣ್ಣಿನ ಸಂಪರ್ಕವನ್ನು ತಪ್ಪಿಸಿದರೆ ನಾನು ಮಾತನಾಡುವುದನ್ನು ಮುಂದುವರಿಸಲು ಸಾಧ್ಯವಿಲ್ಲ. ನಿಮ್ಮ ಕನ್ನಡಕವನ್ನು ಧರಿಸಿ, ಸರ್” ಎಂದು ಜರ್ತಾಜ್ ಗುಲ್ ಸ್ಪೀಕರ್ ಅಯಾಜ್ ಸಾದಿಕ್ ಅವರಿಗೆ ಹೇಳಿದರು. ʼನಾನು ಒಬ್ಬಳು ಲೀಡರ್ʼ ನನಗೆ 1.5 ಲಕ್ಷ ಮತಗಳು ಬಂದಿವೆ. ನೀವು ನನ್ನ ಮಾತನ್ನು ಕೇಳದಿದ್ದರೆ, ನಾನು ನಿಮ್ಮೊಂದಿಗೆ ಮಾತನಾಡಲು ಸಾಧ್ಯವಾಗುವುದಿಲ್ಲ” ಎಂದು ಜರ್ತಾಜ್ ಗುಲ್ ಹೇಳಿದರು.
ಪ್ರತಿಕ್ರಿಯಿಸಿದ ಸ್ಪೀಕರ್ ʼಮಹಿಳೆಯೊಂದಿಗೆ ಕಣ್ಣಿನ ಸಂಪರ್ಕ ಮಾಡುವುದು ಒಳ್ಳೆಯದಲ್ಲ ಎಂದು ನಾನು ಕೇಳಿದ್ದೇನೆ. ಆದಕಾರಣ ಹೆಣ್ಣಿನ ಕಣ್ಣಿನ ಸಂಪರ್ಕವನ್ನು ಮಾಡುವುದಿಲ್ಲʼ ಎಂದು ಪ್ರತಿಕ್ರಿಯಿಸಿದ್ದಾರೆ.
Meanwhile..Parliament in Pakistan pic.twitter.com/U5GcDD4Dp1
— We Dravidians (@WeDravidians) June 30, 2024