newsics.com
ಭಾರತದಲ್ಲಿ ಪ್ರತಿ ದಿನ ಅಪರಾಧಗಳ ಸಂಖ್ಯೆ ಹಾಗೂ ಅಪರಾಧಿಗಳ ಸಂಖ್ಯೆ ಹೆಚ್ಚಾಗ್ತಿದೆ. ಭಾರತ ಮಾತ್ರವಲ್ಲ ವಿಶ್ವದ ಅನೇಕ ದೇಶಗಳಲ್ಲಿ ಕ್ರೈಂ ಏರಿಕೆಯಾಗ್ತಿದೆ. ಅಪರಾಧಿಗಳಿಗೆ ಶಿಕ್ಷೆ ನೀಡಲು ಎಲ್ಲ ದೇಶಗಳಲ್ಲಿ ಪೊಲೀಸ್, ಕೋರ್ಟ್, ಜೈಲುಗಳಿರುತ್ತವೆ. ಕಳ್ಳತನ, ಅತ್ಯಾಚಾರ, ಕೊಲೆ ಸೇರಿದಂತೆ ಶಿಕ್ಷೆಗೊಳಗಾದ ಅಪರಾಧಿಗಳನ್ನು ಜೈಲಿನಲ್ಲಿ ಇಡಲಾಗುತ್ತದೆ. ಆದರೆ ಈ ದೇಶದಲ್ಲಿ ಜೈಲುಗಳೇ ಇಲ್ಲ.
ನೆದರ್‌ಲ್ಯಾಂಡ್ಸ್‌ನಲ್ಲಿ ಜೈಲುಗಳು ಇಲ್ಲ. 2018 ರಲ್ಲಿ ಇಲ್ಲಿ ಕೊನೆಯ ಜೈಲ್ಲನ್ನು ಮುಚ್ಚಲಾಯಿತು ಕಳೆದ ಕೆಲವು ದಶಕಗಳಲ್ಲಿ ಜೈಲುಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ. ಇನ್ನು ಕಡಿಮೆ ಅಪರಾಧ ಪ್ರಮಾಣವೇ ಇದಕ್ಕೆ ಕಾರಣವೆನ್ನಲಾಗಿದ್ದು, ಇಲ್ಲಿ ಜೈಲಿನ ಬದಲಿಗೆ ಎಲೆಕ್ಟ್ರಾನಿಕ್ ಮಾನಿಟರಿಂಗ್, ಸಮುದಾಯ ಸೇವೆ, ಮತ್ತು ದಂಡದಂತಹ ಪರ್ಯಾಯ ಶಿಕ್ಷೆಗಳ ಬಳಕೆಯಿದೆ.
ಲಿಚ್ಟೆನ್‌ಸ್ಟೈನ್ ದೇಶದಲ್ಲಿ ತೀರಾ ಕಡಿಮೆ ಅಪರಾಧ ಪ್ರಮಾಣವನ್ನು ಹೊಂದಿದೆ. ಇಲ್ಲಿ ಕೇವಲ ಒಂದು ಜೈಲು ಇದೆ.ಇನ್ನು ನಾರ್ವೆಯನ್ನು “ಜೈಲಿಲ್ಲದ ದೇಶ”ದ ಉದಾಹರಣೆಯಾಗಿ ಹೇಳಲಾಗುತ್ತದೆ, ಆದರೆ ಇದು ಸಂಪೂರ್ಣವಾಗಿ ಜೈಲಿಲ್ಲದ ದೇಶವಲ್ಲ. ಬದಲಿಗೆ, ಅದರ ಜೈಲು ವ್ಯವಸ್ಥೆಯು ವಿಶ್ವದಲ್ಲೇ ಅತ್ಯಂತ ಮಾನವೀಯವಾಗಿದೆ.
ಐಸ್‌ಲ್ಯಾಂಡ್ ನಲ್ಲಿ ಜನಸಂಖ್ಯೆ ಸುಮಾರು 3.7 ಲಕ್ಷವಾಗಿದ್ದು, ಕೇವಲ 5-6 ಜೈಲುಗಳಿವೆ, ಮತ್ತು ಒಟ್ಟು ಕೈದಿಗಳ ಸಂಖ್ಯೆ 100-150 ರಷ್ಟಿದೆ.
ಈ ಸಣ್ಣ ದೇಶವು ತೀರಾ ಕಡಿಮೆ ಅಪರಾಧ ಪ್ರಮಾಣವನ್ನು ಹೊಂದಿದೆ.
https://www.newsics.com/2025/04/12/a-mother-hen-who-doesnt-protect-her-chicks-from-the-rain/