newsics.com
ಕಾರವಾರ: ಇಂದು ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶ ಹೊರಬಿದ್ದಿದ್ದು, ಉಡುಪಿ ಜಿಲ್ಲೆ ಪ್ರಥಮ ಸ್ಥಾನ ಗಳಿಸಿದೆ. ಈ ಬಾರಿ ಬಡವರ ಮಕ್ಕಳು ರ್ಯಾಂಕ್ ಗಳಿಸುವ ಮೂಲಕ ವಿಶೇಷ ಸಾಧನೆ ಮಾಡಿದ್ದಾರೆ. ಈ ನಡುವೆ ಅವಳಿ-ಜವಳಿ ಮಕ್ಕಳು ರಾಜ್ಯಮಟ್ಟದಲ್ಲಿ 6ನೇ ರ್ಯಾಂಕ್ ಪಡೆಯುವ ಮೂಲಕ ಎಲ್ಲರ ಹುಬ್ಬೇರಿಸಿದ್ದಾರೆ.
ಶಿರಸಿಯ ಪ್ರಸಿದ್ಧ ವೈದ್ಯ ದಂಪತಿ ಡಾ. ದಿನೇಶ ಹೆಗಡೆ- ಡಾ. ಸುಮನ್ ಹೆಗಡೆ ಅವರ ಅವಳಿ-ಜವಳಿ ಮಕ್ಕಳು ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ರಾಜ್ಯಮಟ್ಟದಲ್ಲಿ 6ನೇ ರ್ಯಾಂಕ್ ಪಡೆದಿದ್ದಾರೆ. ಈ ಮೂಲಕ ಪರೀಕ್ಷಾ ಫಲಿತಾಂಶದಲ್ಲೂ ಸಹೋದರತೆ ಮೆರೆದಿದ್ದಾರೆ.
600ಕ್ಕೆ 594 ಅಂಕ ಪಡೆದು 99 % ಸಾಧನೆ ಮಾಡಿದ (ಅವಳಿ-ಜವಳಿ) ವಿದ್ಯಾರ್ಥಿಗಳಾದ ದಕ್ಷ ಹಾಗೂ ರಕ್ಷಾ ಇಬ್ಬರೂ 600ಕ್ಕೆ 594 (99 %) ಒಂದೇ ಸಂಖ್ಯೆಯ ಅಂಕ ಪಡೆದಿರುವುದು ವಿಶೇಷವಾಗಿದೆ.
ಈ ಇಬ್ಬರೂ ವಿದ್ಯಾರ್ಥಿಗಳು ಬೆಂಗಳೂರಿನ ದೀಕ್ಷಾ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದರು. ದಕ್ಷನಿಗೆ 4 ವಿಷಯದಲ್ಲಿ 100 %, ರಕ್ಷಾನಿಗೆ 2 ವಿಷಯದಲ್ಲಿ 100 % ಅಂಕ ಪಡೆದಿದ್ದಾರೆ. ರಕ್ಷಾ ಕಳೆದ ಜೆಇಇ ಮೆನ್ಸ್ ಬಿಆರ್ ಕ್ ನಲ್ಲಿ ದೇಶಕ್ಕೆ 5 ನೇ ರ್ಯಾಂಕ್ ಪಡೆದಿದ್ದರು.
Actor Ajay Rao ಸಿನಿಮಾಗಾಗಿ ತನ್ನ ನೆಚ್ಚಿನ BMW ಕಾರು ಮಾರಿದ ನಟ ಅಜಯ್ ರಾವ್: ಕಣ್ಣೀರಿಟ್ಟ ಮಗಳು