newsics.com
ನವದೆಹಲಿ: ಯುವತಿಯನ್ನ ಅಪಹರಿಸಿ 22 ಮಂದಿ ದಿನವಿಡೀ ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ಉತ್ತರ ಪ್ರದೇಶದ ವಾರಣಾಸಿಯಲ್ಲಿ ನಡೆದಿದೆ.
ಉತ್ತರ ವಾರಣಾಸಿಯ ಲಾಲ್‌ಪುರ್ ಪ್ರದೇಶದ ನಿವಾಸಿಯಾಗಿರುವ 19 ವರ್ಷದ ಯುವತಿ ಕಳೆದ ಮಾರ್ಚ್ 29ರಂದು ತನ್ನ ಸ್ನೇಹಿತರನ್ನ ಭೇಟಿಯಾಗಲು ಮನೆಯಿಂದ ಹೊರಟಿದ್ದಳು. ಇದೇ ರೀತಿ ಆಗಾಗ್ಗೆ ತನ್ನ ಸ್ನೇಹಿತರನ್ನ ಭೇಟಿಯಾಗಿ ಯಾವುದೇ ತೊಂದರೆ ಇಲ್ಲದೇ ಮನೆಗೆ ಬರುತ್ತಿದ್ದಳು. ಆದ್ರೆ ಅಂದು ಮನೆಗೆ ಮರಳಲು ಸಾಧ್ಯವಾಗಲಿಲ್ಲ. ಕೊನೆಗೆ ಊರೆಲ್ಲ ಹುಡುಕಾಡಿದರೂ ಸಿಗದಿದ್ದ ಕಾರಣ ಪೋಷಕರು ಏಪ್ರಿಲ್ 4ರಂದು ಪೊಲೀಸರಿಗೆ ದೂರು ನೀಡಿದ್ದರು.
ದೂರು ನೀಡಿದ ಅದೇ ದಿನ ಕಿಡ್ನ್ಯಾಪ್ ಮಾಡಿದ್ದ ಕಾಮುಕರು ಆಕೆಗೆ ಡ್ರಗ್ಸ್ ನೀಡಿ ಕಳುಹಿಸಿದ್ದರು. ಬಳಿಕ ತನ್ನ ಸ್ನೇಹಿತೆಯನ್ನು ಭೇಟಿಯಾದ ಸಂತ್ರಸ್ತೆ ಮೆನೆಗೆ ಬಂದು ಪೋಷಕರಿಗೆ ತನಗಾದ ಅನ್ಯಾಯದ ಬಗ್ಗೆ ತಿಳಿಸಿದಳು. ಬಳಿಕ ಪೋಷಕರು ಪೊಲೀಸರಿಗೆ ಏಪ್ರಿಲ್ 6ರಂದು ದೂರು ನೀಡಿದ್ದರು. ದೂರಿನಲ್ಲಿ ತನ್ನ ಮೇಲೆ 22 ಜನ ಅತ್ಯಾಚಾರ ಎಸಗಿದ್ದಾರೆಂದು ಸಂತ್ರಸ್ತೆ ಹೇಳಿಕೊಂಡಿದ್ದಾಳೆ.
ಘಟನೆಗೆ ಸಂಬಂಧಿಸಿದಂತೆ 6 ಮಂದಿಯನ್ನು ಬಂಧಿಸಲಾಗಿದ್ದು, ಉಳಿದವರಿಗಾಗಿ ಶೋಧ ನಡೆಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
https://www.newsics.com/2025/04/07/newlywed-couple-romances-in-a-car/