newsics.com
ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) 2025ರ ಸಾಮಾನ್ಯ ಪ್ರವೇಶ ಪರೀಕ್ಷೆ ದಿನಾಂಕಗಳನ್ನು ಪ್ರಕಟಿಸಿದೆ.
ಏಪ್ರಿಲ್ 15ರಿಂದ 17ವರೆಗೆ ಸಿಇಟಿ ಪರೀಕ್ಷೆ ನಡೆಯಲಿದೆ. ಸಿಇಟಿ ಕನ್ನಡ ಭಾಷೆ ಪರೀಕ್ಷೆ ಏಪ್ರಿಲ್ 15ಕ್ಕೆ ಹಿಂದೂಡಿಕೆ ಆಗಿದೆ. ಅಂದರೆ ಈ ಹಿಂದೆ ಪರೀಕ್ಷೆಯನ್ನು ಏಪ್ರಿಲ್ 18 ಕ್ಕೆ ನಿಗದಿಪಡಿಸಲಾಗಿತ್ತು.
ಏ.18 ಕ್ಕೆ ನಿಗದಿಯಾಗಿದ್ದ ಕನ್ನಡ ಭಾಷೆಯ ಪರೀಕ್ಷೆಯನ್ನು ಏ . 15 ಕ್ಕೆ ಅಂದರೆ ಮೂರು ದಿನ ಮುಂಚಿತವಾಗಿ ಬದಲಾಯಿಸಲಾಗಿದೆ.
ಏ. 18 ರಂದು ಗುಡ್ ಫ್ರೈಡೇ ಇರುವ ಕಾರಣ ಈ ನಿರ್ಧಾರ ಕೈಗೊಂಡಿರುವುದಾಗಿ ಕೆಇಎ ತಿಳಿಸಿದೆ. ಮಿಕ್ಕಂತೆ ಎಲ್ಲಾ ಪರಕ್ಷೆಗಳೂ ನಿಗದಿತ ದಿನಾಂಕದಂದೇ ನಡೆಯಲಿದೆ.
SmoochCab ಪ್ರಯಾಣ ಜೊತೆಗೆ ಪ್ರಣಯ: ಇನ್ಮುಂದೆ ಬೆಂಗಳೂರಲ್ಲಿ ಜೋಡಿಗಳಿಗಾಗಿ ‘ಸ್ಮೂಚ್ ಕ್ಯಾಬ್’