newsics.com
ನಾವು ಮನೆಯಲ್ಲಿ ಕೆಲವೊಂದು ವಾಸ್ತು ನಿಯಮಗಳನ್ನ ನಾವು ಪಾಲನೆ ಮಾಡಿದರೆ ಯಾವುದೇ ಸಮಸ್ಯೆಗಳು ಬರುವುದಿಲ್ಲ. ಅಲಂಕಾರಿಕ ವಸ್ತುಗಳ ಬಗ್ಗೆ ತಿಳಿಯದೇ ನೋಡಲು ಚಂದವೆನಿಸಿದ ವಸ್ತುಗಳನ್ನೆಲ್ಲ ಮನೆಯಲ್ಲಿಟ್ಟು ಮನೆಯ ಅಂದವನ್ನು ಹೆಚ್ಚಿಸಿರುವ ಬಗ್ಗೆ ಬೀಗುತ್ತೇವೆ. ಕೆಲವು ಬಾರಿ ಅಂತಹ ಅಲಂಕಾರಿಕ ವಸ್ತುಗಳು ಮನೆಯ ನೆಮ್ಮದಿಯನ್ನು ಹಾಳು ಮಾಡುತ್ತದೆ.
ತಾಜ್‌ಮಹಲ್ ಪ್ರೇಮ ಮತ್ತು ಸೌಂದರ್ಯದ ಸಂಕೇತ. ಒಂದು ಅದ್ಭುತ ಕಾಲಾಕೃತಿಯೂ ಹೌದು. ತಾಜ್‌ಮಹಲ್ ಚಿತ್ರ ಇಲ್ಲವೇ ಮೂರ್ತಿಯನ್ನು ಮನೆಯ ಅಲಂಕಾರಕ್ಕೆಂದು ಕೆಲವರು ತಂದಿಟ್ಟರೆ, ಇನ್ನು ಕೆಲವರು ಪ್ರಿಯಕರ ಅಥವಾ ಪ್ರೇಯಸಿಗೆ ಉಡುಗೊರೆಯಾಗಿ ನೀಡುತ್ತಾರೆ. ಆದರೆ ಇದು ಒಳ್ಳೆಯದಲ್ಲ, ಮಮ್ತಾಜ್ ಮತ್ತು ಶಹಾಜಹಾನ್ ಸಮಾಧಿ ಇದಾಗಿದೆ. ಇದರ ಚಿತ್ರವನ್ನು ಮನೆಯಲ್ಲಿ ಇಡುವುದರಿಂದ ನಕಾರಾತ್ಮಕ ಶಕ್ತಿಯ ಜೊತೆಗೆ ದೌರ್ಭಾಗ್ಯವನ್ನು ಹತ್ತಿರ ಕರೆದಂತೆ.
ಒಡೆದ ಕನ್ನಡಿಯನ್ನು ಮನೆಯಲ್ಲಿಟ್ಟುಕೊಳ್ಳುವುದರಿಂದ ಮನೆಯ ಸದಸ್ಯರ ನಡುವೆ ಭಿನ್ನಾಭಿಪ್ರಾಯ ಮೂಡುವುದು, ಜಗಳ, ಮನಸ್ತಾಪಗಳಾಗುವ ಸಾಧ್ಯತೆ ಇರುತ್ತದೆ.
ಮುರಿದ, ಒಡೆದ ಪಾತ್ರೆಗಳನ್ನು ಅಡುಗೆ ಮನೆಯಿಂದ ಆಚೆ ಇಡುತ್ತೇವೆ, ಮನೆಯಿಂದಲ್ಲ. ಅದು ಬೇರೆ ಏನಾದರೂ ಉಪಯೋಗಕ್ಕೆ ಬರಬಹುದೆಂದು ಎತ್ತಿಡುತ್ತೇವೆ. ಇದು ಒಳ್ಳೆಯದಲ್ಲ, ಇದರಿಂದ ನಕಾರಾತ್ಮಕತೆಯು ಹೆಚ್ಚುವುದಲ್ಲದೇ, ವಾಸ್ತುದೋಷಕ್ಕೂ ಕಾರಣವಾಗುತ್ತದೆ.
ಎಲೆಕ್ಟ್ರಾನಿಕ್ ಉಪಕರಣಗಳು ಹಾಳಾದರೆ ತೀರಾ ಉಪಯೋಗಕ್ಕೆ ಬೇಕೆಂದರೆ ಮಾತ್ರ ತಕ್ಷಣ ಸರಿಮಾಡಿಸುತ್ತೇವೆ. ಹೆಚ್ಚು ಸಮಯದ ವರೆಗೆ ಸರಿಯಿಲ್ಲದ ಎಲೆಕ್ಟ್ರಾನಿಕ್ ಉಪಕರಣಗಳನ್ನು ಮನೆಯಲ್ಲಿಟ್ಟು ಕೊಳ್ಳುವುದು ಅಶುಭವೆಂದು ಹೇಳುತ್ತಾರೆ. ನಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುವುದಲ್ಲದೇ, ಮನೆಯ ನೆಮ್ಮದಿಯನ್ನು ಹಾಳುಮಾಡುತ್ತದೆ.
ಮನೆಯಲ್ಲಿ ಒಡೆದ ಮೂರ್ತಿ, ಹರಿದ ಭಾವಚಿತ್ರವನ್ನು ಇಡುವುದು ವಾಸ್ತುದೋಷಕ್ಕೆ ಕಾರಣವಾಗುತ್ತದೆ.ಮನೆಯನ್ನು ನಿರ್ವಹಣೆ ಮಾಡುವ ಭರದಲ್ಲಿ ಕೆಲವು ವಿಷಯಗಳ ಬಗ್ಗೆ ಗಮನ ಹರಿಸುವುದಿಲ್ಲ. ಪೂಜಾಗೃಹವನ್ನು ಕೆಳಗೆ ನಿರ್ಮಿಸಿ, ಅದರ ಪಕ್ಕದಲ್ಲೇ ಮೆತ್ತು ಹತ್ತುವ ಮೆಟ್ಟಿಲುಗಳನ್ನು ಇಡಲಾಗುತ್ತದೆ. ಇದು ದೇವರ ಮೇಲೆಯೇ ಕಾಲಿಟ್ಟು ನಡೆದಂತೆ ಆಗುತ್ತದೆ. ಮಂದಿರದ ಶಿಖರದ ಮೇಲೆ ಕಾಲಿಡುವುದು ಪಾಪ ಮಾಡಿದಂತೆ.