newsics.com
ಬೆಂಗಳೂರು: ಹಾಲು, ವಿದ್ಯುತ್, ಡೀಸೆಲ್, ಟೀ, ಕಾಫಿ ದರ ಏರಿಕೆ ಬೆನ್ನಲ್ಲೇ ತಿಂಡಿಗಳ ದರವನ್ನು ಗರಿಷ್ಠ ಐದು ರೂಪಾಯಿ ಹೆಚ್ಚಳ ಮಾಡಲು ಹೋಟೆಲ್ ಮಾಲೀಕರು ನಿರ್ಧರಿಸಿದ್ದಾರೆ.
ಗ್ರಾಹಕರಿಗೆ ಹೊರೆಯಾಗದಂತೆ ದರ ಹೆಚ್ಚಳ ಮಾಡಲು ಬೃಹತ್ ಬೆಂಗಳೂರು ಹೋಟೆಲ್ ಗಳ ಸಂಘವು ಹೋಟೆಲ್ ಮಾಲೀಕರಿಗೆ ಸೂಚನೆ ನೀಡಿದೆ. ಇದೀಗ ಹಾಲಿನ ದರ ಕೂಡ ಏರಿಕೆಯಾದ ಹಿನ್ನೆಲೆಯಲ್ಲಿ ಕಾಫಿ ಜೊತೆಗೆ ಟೀ ದರವನ್ನು ಕೂಡ 2-3 ರೂಪಾಯಿ ಹೆಚ್ಚಳ ಮಾಡಲಾಗಿದೆ. ತಿಂಡಿ ದರವನ್ನು 3 ರೂ.ನಿಂದ 5 ರೂಪಾಯಿ ಹೆಚ್ಚಳ ಮಾಡುವಂತೆ ಹೋಟೆಲ್ ಮಾಲೀಕರ ಸಂಘ ಹೋಟೆಲ್ ಗಳಿಗೆ ತಿಳಿಸಿದೆ. ಇದರಿಂದಾಗಿ ಹೋಟೆಲ್ ಗಳಲ್ಲಿ ತಿಂಡಿ ದರ ಶೀಘ್ರದಲ್ಲಿ ಗರಿಷ್ಠ ಐದು ರೂಪಾಯಿ ಹೆಚ್ಚಳ ಮಾಡಲಾಗುವುದು ಎಂದು ಹೇಳಲಾಗಿದೆ.
https://www.newsics.com/2025/04/05/russian-missile-attack-on-kriv-rih-14-dead/