newsics.com
ಬೆಂಗಳೂರು: ಅನಾರೋಗ್ಯಕ್ಕೆ ಬೇಸತ್ತು ವ್ಯಕ್ತಿಯೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರಿನ ಗೊಲ್ಲರಹಟ್ಟಿಯಲ್ಲಿ ನಡೆದಿದೆ.
ಪುರುಷೋತ್ತಮ್ (27) ಆತ್ಮಹತ್ಯೆಗೆ ಶರಣಾದ ವ್ಯಕ್ತಿ ಎಂದು ತಿಳಿದು ಬಂದಿದೆ. ಮೂಲತಃ ಮಾಗಡಿ ತಾಲೂಕು ರಾಮನಗರ ಜಿಲ್ಲೆ ಬಾಳೆನಹಳ್ಳಿಯ ಪುರುಷೋತ್ತಮ್ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಪುರುಷೋತ್ತಮ್ ಕಳೆದ 5 ವರ್ಷದಿಂದ ಹೆಂಡತಿ ಹಾಗೂ ಮಗುವಿನೊಂದಿಗೆ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಅನಾರೋಗ್ಯದಿಂದ ಬೆಸತ್ತು ಗೊಲ್ಲರಹಟ್ಟಿಯಲ್ಲಿ ರೂಂ ಡೋರ್ ಲಾಕ್ ಮಾಡಿಕೊಂಡು ನೇಣು ಬಿಗಿದು ಅತ್ಮಹತ್ಯೆ ಮಾಡಿಕೊಂಡಿದ್ದಾರೆ.
https://www.newsics.com/2025/04/05/russian-missile-attack-on-kriv-rih-14-dead/