newsics.com
ಮುಂಬೈ: ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬ ಚಲಿಸುತ್ತಿದ್ದ ರೈಲಿನಿಂದ ನಾಯಿಯನ್ನು ಹೊರಗೆ ಎಸೆದ ಘಟನೆ ನಡೆದಿದ್ದು, ಪ್ರಾಣಿ ಪ್ರಿಯರ ಆಕ್ರೋಶಕ್ಕೆ ಕಾರಣವಾಗಿದೆ.ಈ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ
ಈ ಘಟನೆ ಈಶಾನ್ಯ ವಿಭಾಗದ ರೈಲಿನಲ್ಲಿ ನಡೆದಿದ್ದು, . ‘ಸ್ಟ್ರೀಟ್‌ಡಾಗ್ಸ್ ಆಫ್ ಬಾಂಬೆ’ ಎಂಬ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೊವನ್ನು ಮೊದಲು ಹಂಚಿಕೊಳ್ಳಲಾಗಿದೆ.
ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ, ನಟಿ ಕರಿಷ್ಮಾ ತನ್ನಾ, “ಇದು ನಾಚಿಕೆಗೇಡಿನ ಮತ್ತು ಹೇಯ ಕೃತ್ಯ” ಎಂದು ಕಿಡಿಕಾರಿದ್ದಾರೆ. ನೆಟ್ಟಿಗರು ಈ ವ್ಯಕ್ತಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
https://www.instagram.com/reel/DH6V5qCIIBa/?igsh=YXQ5MGwybTZvenh2
https://www.newsics.com/2025/04/03/blackmail-using-private-photos/