newsics.com
ಬೆಂಗಳೂರು : ಗಾಡಿ ಟಚ್ ಆಯ್ತು ಅಂತ ಕಿಡಿಗೇಡಿಗಳು ರಸ್ತೆಯಲ್ಲೇ ವಾಹನ ಸವಾರನಿಗೆ ರಕ್ತ ಬರುವ ಹಾಗೆ ಹೊಡೆದಿರುವ ಘಟನೆ ಜ್ಞಾನಭಾರತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಗಾಡಿ ಟಚ್ ಆಗಿದ್ದಕ್ಕೆ ಆ ಯುವಕ ತಪ್ಪಾಯ್ತು ಅಂತ ಕೇಳಿಕೊಂಡಿದ್ದಾನೆ. ಆದರೂ ಕಿರಾತಕರ ಗ್ಯಾಂಗ್‌ಗೆ ಕರುಣೆಯೇ ಬಂದಿಲ್ಲ. ರಪ್ ರಪ್ ಅಂತ ಹೆಲ್ಮೆಟ್ ಅಲ್ಲಿ ತಲೆಗೆ ಹೊಡೆಯುವ ದೃಶ್ಯ ಎದೆ ಝಲ್ ಅನ್ನುವಂತಿದೆ.
ಒಬ್ಬ ಯುವಕನ ಮೇಲೆ ನಾಲ್ವರ ಗ್ಯಾಂಗ್ ಸುತ್ತುವರಿದು ಅಟ್ಯಾಕ್ ಮಾಡಿದ್ದಾರೆ.
ಸ್ಥಳೀಯರು ಸುತ್ತುವರಿದರೂ ಆ ಯುವಕರ ಆಕ್ರೋಶ ಕಡಿಮೆ ಆಗಲೇ ಇಲ್ಲ. ಸದ್ಯ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ.
https://www.newsics.com/2025/04/02/val-kilmer-the-actor-known-as-hollywoods-bad-boy-has-died/