newsics.com
ಮಧ್ಯಪ್ರದೇಶ: ಮುಸ್ಲಿಂ ಶಿಕ್ಷಕನೊಬ್ಬನ ತನ್ನ ಕಾಲುಗಳಿಂದ ದೇವರ ರಂಗೋಲಿ ಮತ್ತು ತ್ರಿವರ್ಣ ಧ್ವಜವನ್ನು ಅಳಿಸಿರುವ ಘಟನೆ ದೇವಾಸ್ ಜಿಲ್ಲೆಯ ಕನ್ನೌಡ್ ಸರ್ಕಾರಿ ಕಾಲೇಜಿನಲ್ಲಿ ನಡೆದಿದೆ. ಈ ವಿಡಿಯೋ ವೈರಲ್ ಆಗಿದೆ. ಈ ವಿಷಯದ ಬಗ್ಗೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಪ್ರತಿಭಟನೆಯನ್ನು ನಡೆಸಿತ್ತು. ಬಳಿಕ ಆರೋಪಿ ಪ್ರೊಫೆಸರ್ ಜಹೀರ್ ಅಲಿ ರಂಗವಾಲಾ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ದೇವಾಸ್ ಕಲೆಕ್ಟರ್ ಋತುರಾಜ್ ಸಿಂಗ್ ಅವರು ಆರೋಪಿ ಪ್ರಾಧ್ಯಾಪಕರನ್ನು ಅವರ ಹುದ್ದೆಯಿಂದ ತೆಗೆದುಹಾಕಿದ್ದಾರೆ.
ವೈರಲ್ ಆಗಿರುವ ವಿಡಿಯೋದಲ್ಲಿ, ರಂಗ್ವಾಲಾ ಕಾಲೇಜಿನ ವಿದ್ಯಾರ್ಥಿನಿಯರು ಬಿಡಿಸಿದ್ದ ದೇವರ ರಂಗೋಲಿಯನ್ನು ಮುಸ್ಲಿಂ ಪ್ರಾಧ್ಯಾಪಕರೊಬ್ಬರು ತಮ್ಮ ಪಾದಗಳಿಂದ ಅಳಿಸುತ್ತಿರುವುದು ಕಾಣಬಹುದು.
ಪೊಲೀಸರು ಪ್ರೊಫೆಸರ್ ಜಹೀರ್ ಅಲಿ ರಂಗವಾಲಾ ವಿರುದ್ಧ ಬಿಎನ್‌ಎಸ್‌ನ ಸೆಕ್ಷನ್ 298 ಮತ್ತು 196 ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಪ್ರಕರಣ ದಾಖಲಾಗಿದಾಗಿನಿಂದ ಆರೋಪಿ ಪ್ರಾಧ್ಯಾಪಕರು ತಲೆಮರೆಸಿಕೊಂಡಿದ್ದಾರೆ.
https://www.newsics.com/2025/04/02/he-killed-three-members-of-his-family-and-then-committed-suicide/