newsics.com
ಬೆಂಗಳೂರು : ಜ್ಯೂಸ್ ಎಂದು ಕಳೇನಾಶಕ ಕುಡಿದು ಬಾಲಕಿ ಸಾವನ್ನಪ್ಪಿರುವ ಘಟನೆ ಬ್ಯಾಟರಾಯನಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಮೃತ ಬಾಲಕಿಯನ್ನು ನಿಧಿ (15) ಎಂದು ತಿಳಿದು ಬಂದಿದೆ. ಪ್ರತಿನಿತ್ಯ ಬಾಲಕಿ ಅಲೊವೆರಾ ಜ್ಯೂಸ್ ಕುಡಿಯುತ್ತಿದ್ದಳು. ಆದರೆ ಅಲೊವೆರಾ ಜ್ಯೂಸ್ ಡಬ್ಬದಲ್ಲಿ ಹರ್ಬಿಸೈಡ್ ಎಂಬ ಕಳೆನಾಶಕ ತುಂಬಿಸಿಡಲಾಗಿತ್ತು. ಇದನ್ನು ಗಮನಿಸದೇ ಬಾಲಕಿ ಜ್ಯೂಸ್ ಎಂದು ಕಳೆನಾಶಕ ಸೇವಿಸಿದ್ದಾಳೆ. ಕೂಡಲೇ ಬಾಲಕಿಯನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಟ ನಡೆಸಿದ ಬಾಲಕಿ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾಳೆ. ಬ್ಯಾಟರಾಯನಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
https://www.newsics.com/2025/04/02/he-killed-three-members-of-his-family-and-then-committed-suicide/