newsics.com
ಬೆಲೆ ಏರಿಕೆಯಿಂದ ಕಂಗೆಟ್ಟಿದ್ದ ಜನತೆಗೆ ಸಂತಸದ ಸುದ್ದಿ. ಏಪ್ರಿಲ್ 1, 2025 ರಿಂದ ಮಹಾನಗರಗಳಲ್ಲಿ ವಾಣಿಜ್ಯ ಗ್ಯಾಸ್ ಸಿಲಿಂಡರ್ನಲ್ಲಿ 40 ರೂಪಾಯಿ ಕಡಿತ ಘೋಷಿಸಲಾಗಿದೆ. ಗೃಹಬಳಕೆಯ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆ ಇಲ್ಲ.
ದೇಶೀಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಗಳನ್ನು ಕೊನೆಯ ಬಾರಿಗೆ ಮಾರ್ಚ್ 2024ರಲ್ಲಿ ಇಳಿಸಲಾಗಿತ್ತು. ಇಂಡಿಯನ್ ಆಯಿಲ್ ಕಾರ್ಪೊರೇಷನ್ ಮಾಹಿತಿ ಪ್ರಕಾರ, ದೆಹಲಿಯಲ್ಲಿ ವಾಣಿಜ್ಯ ಸಿಲಿಂಡರ್‌ನ ಬೆಲೆ 1762 ರೂಪಾಯಿ ಆಗಿದೆ. ರಾಷ್ಟ್ರರಾಜಧಾನಿಯಲ್ಲಿ 41 ರೂಪಾಯಿ ಕಡಿಮೆ ಮಾಡಲಾಗಿದೆ. ಕೋಲ್ಕತ್ತಾದಲ್ಲಿ 44.50 ಪೈಸೆ ಇಳಿಕೆಯಾಗಿದ್ದು, ಹೊಸ ಸಿಲಿಂಡರ್ ಬೆಲೆ 1868.50 ರೂಪಾಯಿ.
ಮುಂಬೈನಲ್ಲಿ 42 ರೂಪಾಯಿ ಇಳಿಕೆಯಾಗಿದೆ. ಇದೀಗ ಮುಂಬೈನಲ್ಲಿ ಸಿಲಿಂಡರ್ ಬೆಲೆ 1713 .50 ರೂಪಾಯಿ ಆಗಿದೆ. ಚೆನ್ನೈನಲ್ಲಿ 43.50 ರೂಪಾಯಿ ಇಳಿಕೆಯಾಗಿದ್ದು,ಹೊಸ ಬೆಲೆ 1921.50 ರೂಪಾ
ಯಿ ಆಗಿದೆ.
https://www.newsics.com/2025/04/01/banking-rules-will-change-from-today/