newsics.com
ಬೆಂಗಳೂರು : ಈಗಾಗಲೇ ನಿರ್ಧರಿಸಿದಂತೆ ಇಂದಿನಿಂದ ರಾಜ್ಯಾದ್ಯಂತ ನಂದಿನಿ ಹಾಲು ಮತ್ತು ಮೊಸರಿನ ದರ ಪ್ರತಿ ಲೀಟರ್ ಗೆ ರೂ.4 ಹೆಚ್ಚಳ ಆಗಲಿದ್ದು, ಗ್ರಾಹಕರ ಜೇಬಿಗೆ ಬಿಸಿ ತಟ್ಟಲಿದೆ.
ಕರ್ನಾಟಕ ಹಾಲು ಮಹಾ ಮಂಡಳದ (ಕೆಎಂಎಫ್) ನಂದಿನಿ ಹಾಲು ಮತ್ತು ಮೊಸರಿನ ಬೆಲೆ ಏರಿಕೆಯಾಗಿದ್ದು, ಹೊಸ ದರ ಮಂಗಳವಾರದಿಂದ ಜಾರಿಗೆ ಬರಲಿದೆ.
ನಂದಿನಿಯ ಎಲ್ಲಾ ಬ್ರ್ಯಾಂಡ್ನ ಹಾಲಿನ ಪ್ರತಿ ಲೀಟರ್ ಬೆಲೆಯಲ್ಲಿ ₹4ರಷ್ಟು ಹೆಚ್ಚಾಗಲಿದೆ. ಮೊಸರಿನ ಬೆಲೆಯೂ ₹4 ಹೆಚ್ಚಾಗಲಿದೆ. ಈ ಮೂಲಕ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಬಳಸುವವರ ತಿಂಗಳ ವೆಚ್ಚವೂ ಹೆಚ್ಚಾಗಲಿದೆ.
ಕೆಇಆರ್ಸಿ ಆದೇಶದ ಅನ್ವಯ ಪರಿಷ್ಕೃತಗೊಂಡಿರುವ ವಿದ್ಯುತ್ ದರ ಕೂಡ ಮಂಗಳವಾರದಿಂದ ಜಾರಿಗೆ ಬರಲಿದೆ. ಕೆಪಿಟಿಸಿಎಲ್ ನೌಕರರ ಪಿಂಚಣಿ ಮತ್ತು ಗ್ರಾಚ್ಯುಟಿ ಶುಲ್ಕದ ಹೊರೆಯಾಗಿ 36 ಪೈಸೆಯನ್ನು ಎಲ್ಲ ಸ್ವರೂಪದ ಗ್ರಾಹಕರಿಗೆ ಹೊರಿಸಲಾಗಿದೆ. ಇದರ ಜೊತೆಗೆ, ಗೃಹ ಬಳಕೆ ಗ್ರಾಹಕರಿಗೆ ಮಂಜೂರಾದ ವಿದ್ಯುತ್ನ (ಕಿ.ವಾ) ಆಧಾರದಲ್ಲಿ ₹25 ರಿಂದ ₹100ರವರೆಗೂ ಹೆಚ್ಚುವರಿ ಹೊರೆ ಬೀಳಲಿದೆ. ಈ ತಿಂಗಳಿನಿಂದ ವಿದ್ಯುತ್ ಶುಲ್ಕದ ವೆಚ್ಚವೂ ಹೆಚ್ಚಾಗಲಿದೆ. ಸದ್ಯ ಗೃಹಬಳಕೆ (ಎಲ್ಟಿ-1) ವಿದ್ಯುತ್ ಸಂಪರ್ಕದಲ್ಲಿ ಪ್ರತಿ ಕೆ.ವಿಗೆ ₹120 ನಿಗದಿತ ಶುಲ್ಕ ವಿಧಿಸಲಾಗುತ್ತಿತ್ತು. ಇದನ್ನು ₹145ಕ್ಕೆ ಹೆಚ್ಚಿಸಲಾಗಿದೆ.
Monlisa ಮಹಾಕುಂಭದ ಮೊನಾಲಿಸಾಗೆ ಸಿನಿಮಾ ಆಫರ್ ನೀಡಿದ್ದ ನಿರ್ದೇಶಕ ಅರೆಸ್ಟ್