Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > Ugadi festival ಯುಗಾದಿ ಹಬ್ಬಕ್ಕಾಗಿ ದಾವಣಗೆರೆ ಶಾವಿಗೆಗೆ ವಿದೇಶದಲ್ಲೂ ಫುಲ್‌ ಡಿಮ್ಯಾಂಡ್‌
ಕರ್ನಾಟಕಪ್ರಮುಖ

Ugadi festival ಯುಗಾದಿ ಹಬ್ಬಕ್ಕಾಗಿ ದಾವಣಗೆರೆ ಶಾವಿಗೆಗೆ ವಿದೇಶದಲ್ಲೂ ಫುಲ್‌ ಡಿಮ್ಯಾಂಡ್‌

Share
1 Min Read
SHARE

newsics.com

ದಾವಣಗೆರೆ: ಇತ್ತೀಚಿನ ವರ್ಷಗಳಲ್ಲಿ ರೆಡಿಮೆಡ್‌ ಶಾವಿಗೆ ಮಾರುಕಟ್ಟೆಗೆ ಲಗ್ಗೆ ಇಟ್ಟಿರುವ ಹಿನ್ನೆಲೆ ಕಟ್ಟಿಗೆ ಮಣೆಗಳ ಜಾಗದಲ್ಲಿ ಯಂತ್ರಗಳು ಸದ್ದು ಮಾಡುತ್ತಿವೆ.
ಯುಗಾದಿ ಹಬ್ಬದ ಮೊದಲ ದಿನ ಅಭ್ಯಂಜನ ಸ್ನಾನ ಮಾಡಿದ ನಂತರ ಶಾವಿಗೆ ಬಸಿದು ಸವಿಯುವುದು ವಿಶೇಷ. ಹಾಗಾಗಿ ಹಬ್ಬದ ಹಿನ್ನೆಲೆ ಶಾವಿಗೆಗೆ ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆ ಬಂದಿದೆ.

ಇನ್ನು ದಾವಣಗೆರೆಯ ಕೆಟಿಜೆ ನಗರದ 17ನೇ ಕ್ರಾಸ್‌ನಲ್ಲಿ ಏಳೆಂಟು ಕುಟುಂಬಗಳು ಗುಡಿ ಕೈಗಾರಿಕೆ ಮೂಲಕ ಕಳೆದ 50ರಿಂದ 60 ವರ್ಷಗಳಿಂದ ಶಾವಿಗೆ ತಯಾರಿಕೆಯಲ್ಲಿ ತೊಡಗಿವೆ. ಉತ್ಪಾದನೆ ಮಾಡಿ, ಸ್ವಾವಲಂಬಿ ಜೀವನ ನಡೆಸುತ್ತಿವೆ. ಆದ್ದರಿಂದ ಈ ಕುಟುಂಬಗಳು ನೆಲೆಸಿರುವ ಬೀದಿಯು ಶಾವಿಗೆ ಬೀದಿ ಎಂದೇ ಹೆಸರುವಾಸಿಯಾಗಿದೆ.
ದೀಪಾವಳಿಯಿಂದ ಬಸವ ಜಯಂತಿಯವರೆಗೂ ಶಾವಿಗೆ ತಯಾರಿಸುವ ಕಾಯಕ ನಡೆಯುತ್ತಿರುತ್ತದೆ. ಪ್ರತಿ ಕುಟುಂಬವೂ ವರ್ಷಕ್ಕೆ ಸರಾಸರಿ 150 ರಿಂದ 300 ಕ್ವಿಂಟಾಲ್‌ ಶಾವಿಗೆಯನ್ನು ಯಂತ್ರದ ಮೂಲಕ ಉತ್ಪಾದಿಸುತ್ತಿವೆ. ಹೀಗೆ ಆರು ತಿಂಗಳು ಉತ್ಪಾದನೆಯಾಗುವ ಶಾವಿಗೆಯನ್ನು ಸುರಕ್ಷಿತವಾಗಿ ಸಂಗ್ರಹಿಸಿ ಇಟ್ಟಿರುತ್ತಾರೆ. ಆದರೆ, ಈಗ ಯುಗಾದಿ ಹಬ್ಬದ ಹಿನ್ನೆಲೆ ಶಾವಿಗೆ ತಯಾರಿಸಿ ಬೀದಿಗಳಲ್ಲಿ ಒಣಗಿಸಲು ಇಟ್ಟಿರುವುದು ಗ್ರಾಹಕರನ್ನು ಆಕರ್ಷಿಸುತ್ತಿದೆ.
‘ಅಕ್ಕಿ ಹಿಟ್ಟು ಬೆರಿಸಿ ಶಾವಿಗೆ ತಯಾರಿಸಿದರೆ, ಬಸಿದ ತಕ್ಷಣವೇ ಮುದ್ದೆಯಾಗಿ ಬಿಡುತ್ತದೆ. ಆದರೆ, ನಾವು ಅಕ್ಕಿ ಬೆರಿಸದೆಯೇ ಚಿರೋಟಿ ರವಾ, ಗೋಧಿ, ರಾಗಿ ಹಿಟ್ಟಿನಿಂದ ತಯಾರು ಮಾಡುತ್ತೇವೆ. ಆದ್ದರಿಂದ ಬೆಳಗ್ಗೆ ಬಸಿದು ರಾತ್ರಿವರೆಗೆ ಇಟ್ಟರೂ ಶ್ಯಾವಿಗೆ ಎಳೆ, ಎಳೆಯಾಗಿಯೇ ಇರುತ್ತದೆ.
ಈ ಬೀದಿಯಲ್ಲಿ ತಯಾರಿಸುವ ಶಾವಿಗೆ ಗುಣಮಟ್ಟದಿಂದ ಕೂಡಿರುವ ಕಾರಣ ದೂರದ ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಹಾವೇರಿ, ಶಿವಮೊಗ್ಗ ಸೇರಿ ನಾನಾ ಊರುಗಳಿಂದ ಜನತೆ ಇಲ್ಲಿಗೆ ಬಂದು, ಶಾವಿಗೆ ಖರೀದಿಸಿಕೊಂಡು ಹೋಗುತ್ತಾರೆ. ಅಲ್ಲದೇ, ಇಂಗ್ಲೆಂಡ್‌, ಅಮೆರಿಕಾದಲ್ಲಿ ನೆಲೆಸಿರುವವರು ತವರಿಗೆ ಬಂದಾಗ ಇಲ್ಲಿಂದ ಶಾವಿಗೆ ತೆಗೆದುಕೊಂಡು ಹೋಗುತ್ತಾರೆ. ಇನ್ನೂ ಮೆಕ್ಕಾ ಮತ್ತು ಮದಿನಾಕ್ಕೂ ಖರೀದಿಸಿಕೊಂಡು ಹೋಗುತ್ತಾರೆ ಎಂದು ಶಾವಿಗೆ ತಯಾರಕರು ಹೇಳುತ್ತಾರೆ.

Astro ಯುಗಾದಿ ವರ್ಷ ಭವಿಷ್ಯ 2025: ನಿಮ್ಮ ರಾಶಿ ಗ್ರಹಗತಿ ಹೇಗಿದೆ?

TAGGED:Davangere spinach is in full demand abroad for the Ugadi festival
Share This Article
Facebook Twitter Copy Link Print
Previous Article Astro ಯುಗಾದಿ ವರ್ಷ ಭವಿಷ್ಯ 2025: ನಿಮ್ಮ ರಾಶಿ ಗ್ರಹಗತಿ ಹೇಗಿದೆ?
Next Article Viral video ಪೋಷಕರ ಬಗ್ಗೆ ಹಾಸ್ಯಗಾರ್ತಿ ಸ್ವಾತಿ ಸಚ್‌ದೇವ್‌ ಅಶ್ಲೀಲ ಹೇಳಿಕೆ!: ವೈರಲ್ ವಿಡಿಯೋ ನೋಡಿ

Popular Posts

Triple mur*der AI ಹತ್ಯಾಕಾಂಡ: ಗೂಗಲ್ ಜಿಮಿನಿಯಲ್ಲೇ ತ್ರಿವಳಿ ಕೊಲೆಗೆ ಪ್ಲಾನ್! ಬೆಚ್ಚಿಬಿದ್ದ ಬೆಂಗಳೂರು!

1 Min Read

CJP protest effect ಕೇಂದ್ರ ಶಿಕ್ಷಣ ಇಲಾಖೆಯಲ್ಲಿ ಭಾರೀ ಬದಲಾವಣೆ: ಶಿಕ್ಷಣ ಕಾರ್ಯದರ್ಶಿ ವಿನೀತ್ ಜೋಶಿ ವರ್ಗಾವಣೆ!

1 Min Read

cockroach fighters new technology ಜಿರಳೆ ಹೋರಾಟಗಾರರು ಹೊಸ ತಂತ್ರಜ್ಞಾನ ಬಳಸಿದ್ರಾ? ಈ ಆ್ಯಪ್‌ಗೆ ಸಿಮ್ ಬೇಡ, ಇಂಟರ್‌ನೆಟ್ಟೂ ಬೇಡ! ಪೊಲೀಸರು ಕಂಗಾಲು

5 Min Read

Health ರಾತ್ರಿ ಮಲಗುವ ಮುನ್ನ ಮೊಬೈಲ್ ಸ್ಕ್ರೋಲಿಂಗ್ ಮಾಡಿದರೆ ಭಾರೀ ಅಪಾಯ!

1 Min Read

You Might Also Like

ಕರ್ನಾಟಕಪ್ರಮುಖ

Big demolition ಅತಿ ಎತ್ತರದ, 200 ಕೋಟಿ ವೆಚ್ಚದ ಕಟ್ಟಡ ತೆರವಿಗೆ GBA ನಿರ್ಧಾರ: ಉದ್ಘಾಟನೆಗೂ ಮುನ್ನವೇ ಡೆಮಾಲಿಷನ್!

2 Min Read
ಕರ್ನಾಟಕದೇಶಪ್ರಮುಖವೈರಲ್

Surprise Gift ಆಫೀಸ್ ಫ್ಲೋರ್‌ನಲ್ಲೇ ಸ್ಕೂಟರ್ ರೈಡ್ ಮಾಡಿದ ಬಾಸ್! ಅತ್ಯುತ್ತಮ ಉದ್ಯೋಗಿಗೆ ಸರ್ಪ್ರೈಸ್ ಗಿಫ್ಟ್, ವಿಡಿಯೋ ನೋಡಿ

1 Min Read
ದೇಶಕರ್ನಾಟಕಪ್ರಮುಖ

Nandini Ghee, Butter costly ಜನರಿಗೆ ಮತ್ತೊಂದು ಶಾಕ್: ನಂದಿನಿ ಬೆಣ್ಣೆ, ತುಪ್ಪವೂ ದುಬಾರಿ, ನಾಳೆಯಿಂದಲೇ ಜಾರಿ

1 Min Read
ದೇಶಪ್ರಮುಖ

ಜಂತರ್ ಮಂತರ್ ಸುತ್ತ 1.5 ಕಿಮೀ ವ್ಯಾಪ್ತಿಯಲ್ಲಿ ಮೊಬೈಲ್ ಇಂಟರ್ನೆಟ್ ಸೇವೆ ಬಂದ್!

1 Min Read

Social Networks

Facebook-f Instagram Twitter
Welcome Back!

Sign in to your account

Lost your password?