newsics.com
ಏಪ್ರಿಲ್ 2 ರಿಂದ ವಿದೇಶಿ ನಿರ್ಮಿತ ಕಾರುಗಳಿಗೆ ಶೇಕಡಾ 25 ರಷ್ಟು ತೆರಿಗೆ ನೀತಿಯನ್ನು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ. ಇನ್ಮುಂದೆ ಈ ಒಂದು ತೆರಿಗೆ ಶಾಶ್ವತವಾಗಿ ಉಳಿಯಲಿದೆ.
ಅಮೆರಿಕಾದಾಚೆ ತಯಾರಾಗುವ ಹಾಗೂ ಅಮೆರಿಕಾಗೆ ರಫ್ತಾಗುವ ಕಾರುಗಳ ಮೇಲೆ ಹಾಗೂ ಲಘು ಭಾರದ ಟ್ರಕ್ಗಳ ಮೇಲೆ ಶೇಕಡಾ 25 ರಷ್ಟು ತೆರಿಗೆ ಹೆಚ್ಚಿಸಲಾಗಿದೆ.
ಯುನೈಟೆಡ್ ಸ್ಟೇಟ್ನಲ್ಲಿ ತಯಾರಾಗದ ಎಲ್ಲಾ ಕಾರುಗಳ ಮೇಲೆ ಶೇಕಡಾ 25 ರಷ್ಟು ಸುಂಕವನ್ನು ವಿಧಿಸಲು ನಾವು ಸಿದ್ಧರಾಗಿದ್ದೇವೆ. ಈ ಹಿಂದೆ 2.5 ರಷ್ಟಿದ್ದ ತೆರಿಗೆ ಈಗ ಶೇಕಡಾ 25ರಷ್ಟು ತಲುಪಿದೆ. ಇದು ದೇಶದ ಆರ್ಥಿಕ ಬೆಳವಣಿಗೆಗೆ ದೊಡ್ಡ ಸಹಾಯಕವಾಗಿ ನಿಲ್ಲಲಿದೆ ಎಂದು ಟ್ರಂಪ್ ಹೇಳಿದ್ದಾರೆ.