ನವದೆಹಲಿ: ಮುಂದಿನ ಮಂಗಳವಾರದೊಳಗೆ ರೇಷನ್ ಕಾರ್ಡ್ಗೆ ಆಧಾರ್ ದಾಖಲೆ ಸಲ್ಲಿಸದಿದ್ದರೆ ನಿಮ್ಮ ಪಡಿತರ ಸೌಲಭ್ಯ ಸ್ಥಗಿತಗೊಳ್ಳಬಹುದು. ಹಾಗಾಗಿ ರೇಷನ್ ಕಾರ್ಡ್ಗೆ ಇ-ಕೆವೈಸಿ ಸಲ್ಲಿಸಲು ಮಾರ್ಚ್ 31ಕ್ಕೆ ಗಡುವು ಕೊಡಲಾಗಿದೆ.
ಆನ್ಲೈನ್ನಲ್ಲಿ ಇ-ಕೆವೈಸಿ ಸಲ್ಲಿಸಲು ಕಷ್ಟವಾಗುತ್ತಿದ್ದರೆ ಆಫ್ಲೈನ್ನಲ್ಲೇ ಮಾಡಬಹುದು. ನಿಮ್ಮ ಸ್ಥಳೀಯ ರೇಷನ್ ಕಾರ್ಡ್ ಕಚೇರಿ ಅಥವಾ ಕಾಮನ್ ಸರ್ವಿಸ್ ಸೆಂಟರ್ನಲ್ಲಿ ಇಕೆವೈಸಿ ಸಲ್ಲಿಸಬಹುದು.
ನಿಮ್ಮ ರೇಷನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ದಾಖಲೆಗಳನ್ನು ಕೊಂಡೊಯ್ಯಬೇಕು. ಫಿಂಗರ್ ಪ್ರಿಂಟ್ ಅಥವಾ ಐರಿಸ್ ಸ್ಕ್ಯಾನ್ ಮೂಲಕ ಬಯೋಮೆಟ್ರಿಕ್ಸ್ ವೆರಿಫೈ ಮಾಡಬಹುದು. ಇದಾದ ಬಳಿಕ ಇ-ಕೆವೈಸಿ ಪೂರ್ಣಗೊಂಡು ನಿಮಗೆ ದೃಢೀಕರಣ ಪತ್ರ ಸಿಗುತ್ತದೆ.
ಕೇಂದ್ರ ಸರ್ಕಾರವು ಕೆವೈಸಿ ಸಲ್ಲಿಸಲು ಮಾರ್ಚ್ 31ಕ್ಕೆ ಡೆಡ್ ಲೈನ್ ನೀಡಿದೆ. ಆದರೆ.ಮುಂದಿನ ದಿನಗಳಲ್ಲಿ ಕೆವೈಸಿ ಸಲ್ಲಿಸಲು ಕಾಲಾವಕಾಶ ಮತ್ತಷ್ಟು ವಿಸ್ತರಣೆ ನೀಡುತ್ತಾ ಗೊತ್ತಿಲ್ಲಾ.