newsics.com
ಹೈದರಾಬಾದ್: ಹೋಟೆಲ್ ರೊಂಗೆ ನುಗ್ಗಿ ಬಾಲಿವುಡ್ ನಟಿಯೊಬ್ಬರ ಮೇಲೆ ಹಲ್ಲೆ ಮಾಡಿರುವ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ.
ಬಂಜಾರ ಹಿಲ್ಸ್ ಬಳಿಯ ಮಸಾಬ್ ಟ್ಯಾಂಕ್‌ನಲ್ಲಿರುವ ಹೋಟೆಲ್ ರೂಂನಲ್ಲಿ ನಟಿ ಮಲಗಿದ್ದ ವೇಳೆ ಇಬ್ಬರು ಪುರುಷರು ಹಾಗೂ ಇಬ್ಬರು ಮಹಿಳೆಯರು ಏಕಾಏಕಿ ನುಗ್ಗಿ ನಟಿ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ.
ಅಂಗಡಿವೊಂದರ ಉದ್ಘಾಟನೆಗೆ ಮುಖ್ಯ ಅತಿಥಿಯಾಗಿ ನಟಿ ನಗರಕ್ಕೆ ಬಂದಿದ್ದಾಗ ಈ ಅವಘಡ ಸಂಭವಿಸಿದೆ.
ನಟಿಯ ದೂರಿನ ಪ್ರಕಾರ, ಇಬ್ಬರು ಮಹಿಳೆಯರು ಮತ್ತು ಇಬ್ಬರು ಯುವಕರು ಆಕೆ ಮಲಗಿದ್ದಾಗ ಹೋಟೆಲ್ ಕೋಣೆಗೆ ಪ್ರವೇಶಿಸಿ, ಅನೈತಿಕ ಚಟುವಟಿಕೆಗಳಿಗೆ ಒತ್ತಾಯಿಸಲು ಪ್ರಯತ್ನಿಸಿದ್ದಾರೆ. ಆಕೆ ವಿರೋಧಿಸಿದಾಗ, ಅವರು ಆಕೆಯ ಕೈಕಾಲುಗಳನ್ನು ಕಟ್ಟಿ, ಆಕೆಯ ವಸ್ತುಗಳನ್ನು ದೋಚಿದ್ದಾರೆ ಮತ್ತು ಆಕೆಯ ಚೀಲದಿಂದ ನಗದು ಮತ್ತು ಚಿನ್ನವನ್ನು ಕದ್ದಿದ್ದಾರೆ. ನಂತರ ಸ್ಥಳದಿಂದ ಪರಾರಿಯಾಗಿದ್ದಾರೆ. ಸುಮಾರು 50,000 ರೂಪಾಯಿ ನಗದು ಕಳವಾಗಿದೆ.
ಈ ಘಟನೆಯ ನಂತರ, ನಟಿ ಪೊಲೀಸರನ್ನು ಸಂಪರ್ಕಿಸಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ಮದುವೆಯಾದ 2 ವಾರಕ್ಕೆ ಗಂಡನ ಕಥೆ ಮಟಾಶ್: ಲವ್ವರ್ ಜೊತೆ ಸೇರಿ ಪತ್ನಿ ಮಾಡಿದ್ದೇನು?