newsics.com
ಚಾಮರಾಜನಗರ: ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಭಾಗವಹಿಸಿರುವ ಈ ಎಳೆವಯಸಿನ ಮಗುವಿನ ಮಾತು ಕೇಳಿದ್ರೆ ಎಂಥವರನ್ನು ಬೆಚ್ಚಿಬಿಳಿಸುತ್ತೆ. ಸದ್ಯ ಈ ಸಂಬಂಧಿಸಿದ ವಿಡಿಯೋ ವೈರಲ್ ಆಗಿದೆ.
ಬುರ್ಖಾ ಧರಿಸೋದ್ರಿಂದ ಸತ್ತಮೇಲೆ ಶವಕ್ಕೆ ಏನೂ ಆಗೋಲ್ಲ, ತುಂಡು ಉಡುಗೆ ತೊಟ್ಟರೆ ನರಕಕ್ಕೆ ಹೋಗುವುದರ ಜೊತೆಗೆ ನಿಮ್ಮ ದೇಹವನ್ನ ಹಾವು ಚೇಳು ತಿನ್ನುತ್ತವೆ’ ಎಂಬ ಈ ಮಾತು ಹೇಳಿದ್ದು ವಯಸ್ಕ ಮಹಿಳೆಯಲ್ಲ ಬದಲಾಗಿ ಶಾಲೆಗೆ ಹೋಗುತ್ತಿರುವ ಚಿಕ್ಕ ಮಗು. ಚಾಮರಾಜನಗರ ಖಾಸಗಿ ಶಾಲೆಯೊಂದರ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಈ ಅಘಾತಕಾರಿ ನಡೆದಿದೆ ಎನ್ನಲಾಗಿದೆ.
ವಿದ್ಯಾರ್ಥಿನಿ ಎರಡು ಗೊಂಬೆಗಳನ್ನು ಶವದ ರೀತಿ ಮಲಗಿಸಿದ್ದು, ಒಂದು ಗೊಂಬೆಯನ್ನು ಕಪ್ಪು ಬಟ್ಟೆಯಿಂದ ಮುಚ್ಚಿದ್ದು, ಮತ್ತೊದ್ದು ಗೊಂಬೆಯನ್ನು ಚೇಳಿನ ಚಿತ್ರವಿರುವ ಬಟ್ಟೆಯಿಂದ ಮುಚ್ಚಿದ್ದಾಳೆ. ಇದಕ್ಕೆ ವಿದ್ಯಾರ್ಥಿನಿ ವಿವರಣೆಯನ್ನೂ ಸಹ ನೀಡಿದ್ದಾಳೆ.
‘ಬುರ್ಖಾ ಧರಿಸಿದ್ರೆ ಸತ್ತ ಮೇಲೆ ಶವಕ್ಕೆ ಏನು ಆಗಲ್ಲ. ತುಂಡು ಉಡುಗೆ ತೊಟ್ಟರೆ ನರಕಕ್ಕೆ ಹೋಗುವುದರ ಜೊತೆಗೆ ನಿಮ್ಮ ದೇಹವನ್ನ ಹಾವು, ಚೇಳು ತಿನ್ನುತ್ತವೆ’ ಎಂದು ವಿದ್ಯಾರ್ಥಿನಿ ವಿವರಣೆ ನೀಡಿದ್ದಾಳೆ. ಈ ದೃಶ್ಯಗಳನ್ನು ವ್ಯಕ್ತಿಯೊಬ್ಬರು ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ. ವಿಡಿಯೋ ಸಾಮಾಜಿಕ ಜಾಲತಣಾದಲ್ಲಿ ವೈರಲ್ ಆಗುತ್ತಿದೆ.
ಈ ವಿಡಿಯೋವನ್ನು ಸರವಣಪ್ರಸಾದ್ ಬಾಲಸುಬ್ರಮಣಿಯನ್ ಎಂಬುವರು ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಪೋಸ್ಟ್ ಮಾಡಿ, “ಕರ್ನಾಟಕದ ಚಾಮರಾಜನಗರದಲ್ಲಿನ ಶಾಲೆಗಳಲ್ಲಿ ವಿಜ್ಞಾನ ಪ್ರದರ್ಶನವನ್ನು ನಡೆಸಲಾಯಿತು ಎಂದು ಬರೆದಿದ್ದಾರೆ.