newsics.com
ಬೆಂಗಳೂರು: ʻಬಿಗ್‌ಬಾಸ್ ಒಟಿಟಿ ಸೀಸನ್-1ʼರ ಮಾಜಿ ಸ್ಪರ್ಧಿ ಸೋನು ಶ್ರೀನಿವಾಸ್ ಗೌಡ ದರ್ಶನ್ ಕುರಿತಾಗಿ ನಾನು ಕಿರುಕುಳಕ್ಕೆ ಒಳಗಾಗಿದ್ದೇನೆ ಎಂದು ವಿಡಿಯೊ ಮೂಲಕ ಹೇಳಿಕೊಂಡಿದ್ದಾರೆ.
ʻʻಇನ್‌ಸ್ಟಾ ಗ್ರಾಮ್ ಹಾಗೂ ಯುಟ್ಯೂಬ್‌ನಲ್ಲಿ ತುಂಬ ಕೆಟ್ಟ ಕಮೆಂಟ್‌ಗಳು ನನಗೆ ಬರುತ್ತಿವೆ. ದರ್ಶನ್ ಅವರ ಬಗ್ಗೆ ನಾನು ಏನು ಮಾತನಾಡಿಲ್ಲ ಎಂದು. ನಾವು ಇನ್ನೂ ಚಿಕ್ಕವರು. ನಾವು ಅವರ ಬಗ್ಗೆ ಮಾತನಾಡುವಷ್ಟು ಇನ್ನೂ ಬೆಳೆದಿಲ್ಲ. ನಾವು ಒಂದ ಸಲ ಫ್ಯಾನ್ ಅಂತಾದರೆ, ಸಾಯುವರೆಗೂ ನಾವು ಫ್ಯಾನ್. ತಪ್ಪು ಯಾರೇ ಮಾಡಿದ್ರೂ ಶಿಕ್ಷೆ ಆಗೇ ಆಗುತ್ತೆ. ನಾವು ಒಳ್ಳೆಯವರಾಗಿರಬಹುದು, ಕೆಟ್ಟವರಾಗಿರಬಹುದು ಆದರೆ ತೀರ್ಪು ಬಂದೇ ಬರುತ್ತದೆ. ಅಲ್ಲಿಯವರೆಗೂ ಕಾಯಿರಿ. ಅಲ್ಲಿಯವರೆಗೆ ನಮಗೆ ಕೆಟ್ಟ ಕಮೆಂಟ್ ಮಾಡಬೇಡಿ. ಅಲ್ಲಿಯವರೆಗೆ ಆ ದೇವರು ಎರಡೂ ಕುಟುಂಬಕ್ಕೆ ಧೈರ್ಯ ಕೊಡಲಿ ಎಂದು ಕೇಳಿಕೊಳ್ಳುತ್ತೇನೆ. ನಮ್ಮ ಬಾಸ್ ದರ್ಶನ್ ಅವರು ಇಂತಹ ಕೆಲಸ ಮಾಡಲು ಸಾಧ್ಯವಿಲ್ಲ ಎಂದು ಹೋಪ್ ಇಟ್ಟುಕೊಂಡಿದ್ದೇನೆʼʼಎಂದು ಹೇಳಿಕೊಂಡಿದ್ದಾರೆ.
ಸೋನು ಗೌಡ ಅವರು ದರ್ಶನ್ ಪರವಾಗಿ ಮಾತನಾಡಿಲ್ಲ ಎಂದು ದಚ್ಚು ಫ್ಯಾನ್ಸ್ ಕಮೆಂಟ್ ಮೂಲಕ ಕಿರುಕುಳ ನೀಡುತ್ತಿದ್ದಾರೆ ಎಂದು ನಟಿ ವಿಡಿಯೊ ಮೂಲಕ ಆರೋಪಿಸಿದ್ದಾರೆ.